ವಿಜಯವಾಣಿಯಲ್ಲಿ ಭಾನುವಾರ ಪ್ರಕಟಗೊಂಡ (ಏ.11) ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅವರ ‘ನಿಮ್ಮ ಬದುಕಿನ ನಾಯಕ ನೀವೇ ಆಗಿರಿ’ ಲೇಖನ ಜೀವನದ ವಾಸ್ತವಗಳನ್ನು ಅನಾವರಣಗೊಳಿಸಿದೆ. ತಪು್ಪ-ಒಪು್ಪ, ಸೋಲು-ಗೆಲುವುಗಳಿದ್ದಾಗಲೇ ಜೀವನ… ಮತ್ತೆ ಮತ್ತೆ ಓದಿ ಮನನ ಮಾಡುವಂಥದ್ದು. ಲೇಖಕರು ಮಂಡಿಸಿರುವ ವಿಚಾರಗಳು ಜೀವನದಲ್ಲಿ ಸಫಲರಾಗಲು ಮಾರ್ಗದರ್ಶಿಯಾಗಿವೆ. ‘ಜ್ಞಾನದ ಅಸ್ತ್ರವನ್ನು ಬತ್ತಳಿಕೆಯಲ್ಲಿ ತುಂಬಿ ಸನ್ನದ್ಧರಾಗಿ, ನಾಳೆಯ ಬಗ್ಗೆ ವಿಶ್ವಾಸವಿಟ್ಟರೆ ಭವಿಷ್ಯ ಸದೃಢವಾಗುತ್ತದೆ’ ಎಂಬೆಲ್ಲ ಸಾಲುಗಳು ಪ್ರೇರಣೆ ನೀಡಿದವು. ನಿಜಕ್ಕೂ ಈ ಬದುಕೆಂಬ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಲಿಯುವ ಪಾಠ ಇನ್ನೇಲೂ ಕಲಿಯಲಾಗದು.
ಇಂಥ ಪ್ರಬುದ್ಧ ವಿಚಾರಗಳು, ಪ್ರತಿಭಾನ್ವಿತರ ಚಿಂತನ- ಮಂಥನಗಳನ್ನು ದಿನವೂ ಪ್ರಕಟಿಸುತ್ತಿರುವ ‘ವಿಜಯವಾಣಿಗೆ’ ಕೃತಜ್ಞತೆಗಳು. ಪತ್ರಿಕೆಯಲ್ಲಿ ಕಳೆದ ಒಂಬತ್ತು ವರ್ಷದಿಂದ ಪ್ರಕಟವಾದ ಬಹುತೇಕ ಎಲ್ಲ ಲೇಖನಗಳನ್ನು ಸಂಗ್ರಹ ಮಾಡಿಟ್ಟುಕೊಂಡಿದ್ದೇನೆ. ಇವೆಲ್ಲ ಯಾವುದೇ ಸಮಯದಲ್ಲೂ ಉಪಯುಕ್ತ, ಪ್ರೇರಣೆ ನೀಡುವಂಥ ಲೇಖನಗಳೇ. ಹತ್ತನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ವಿಜಯವಾಣಿ ಹೀಗೆ ವಿಜಯಪಥದಲ್ಲಿ ಸಾಗಲಿ.
| ಪ್ರಫುಲ್ಲಾ ಗುರುರಾಜ್ ಬೆಂಗಳೂರು
ನಿಮ್ಮ ಬದುಕಿನ ನಾಯಕ ನೀವೇ ಆಗಿರಿ…: ಸೆಲೆಬ್ರಿಟಿ ಕಾರ್ನರ್ನಲ್ಲಿ ರವಿ ಡಿ. ಚನ್ನಣ್ಣನವರ್