More

    ಕಾಯಕನಿಷ್ಠೆಗೆ ಹೆಸರಾಗಿದ್ದ ಶರಣ ನುಲಿಯ ಚಂದಯ್ಯ

    ಅಥಣಿ ಗ್ರಾಮೀಣ: ಕಾಯಕನಿಷ್ಠೆ, ದಾಸೋಹ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾದ ಶಿವಶರಣ ನುಲಿಯ ಚಂದಯ್ಯನವರು 12ನೇ ಶತಮಾನದ ಸಕಲ ಶರಣರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಪಿಕೆಪಿಎಸ್ ನಿರ್ದೇಶಕ ಸುನೀಲ ಕೆಂಚಣ್ಣವರ ಹೇಳಿದರು. ತಾಲೂಕಿನ ಅಡಹಳ್ಳಿ ಗ್ರಾಮದ ಭಜಂತ್ರಿ ತೋಟದ ವಸತಿ ಪ್ರದೇಶದಲ್ಲಿ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯನವರ ಜಯಂತಿ ಹಾಗೂ ನಾಮಫಲಕ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಚಂದಯ್ಯನವರು ಲಿಂಗ ಪೂಜೆಗಿಂತ ಕಾಯಕ ಶ್ರೇಷ್ಠವೆಂದು ನಂಬಿದ್ದರು ಎಂದು ತಿಳಿಸಿದರು. ಅತಿಯಾದ ಹಣ ಮನುಷ್ಯತ್ವಕ್ಕೆ ಮಾರಕ, ಮೈಮುರಿದು ದುಡಿದು ತಿನ್ನುವ ಆನಂದಕ್ಕೆ ಸರಿಸಾಟಿ ಮತ್ತೊಂದಿಲ್ಲ ಎಂದು ನುಡಿದು, ಅದರಂತೆ ನಡೆದಿದ್ದರು.

    ಅಂತಹವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ, ಕಾಮಣ್ಣ ಶೆಗಾಂವಿ, ಶಿವಾಜಿ ಡಂಬಳಕರ, ಬಸವರಾಜ ಮಾಳಿ, ಸಿದ್ದಪ್ಪ ಕೆಂಣ್ಣವರ, ಮೋಹನ ಸೂರ್ಯವಂಶಿ, ಮಹಾದೇವ ಪಾಟೀಲ, ಪರಸಪ್ಪ ಅಥಣಿ, ಬಸವರಾಜ ದೂಳಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ಭಜಂತ್ರಿ, ಅಣ್ಣಪ್ಪ ಹಾಲಳ್ಳಿ, ಸುರೇಶ ಬಜಂತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts