More

    ಕಾನೂನು ಮಾಪನಶಾಸ ಅಧಿಕಾರಿಗಳ ದಾಳಿ

    ತೆಲಸಂಗ: ಗ್ರಾಮದಲ್ಲಿ ಶುಕ್ರವಾರ ರೈತರ ತೋಟದಲ್ಲಿ ಶುಕ್ರವಾರ ದ್ರಾಕ್ಷಿ ಖರೀದಿಸುತ್ತಿದ್ದ ವೇಳೆ ದಾಳಿ ನಡೆಸಿದ ಅಥಣಿ ಕಾನೂನು ಮಾಪನಶಾಸ ನಿರೀಕ್ಷಕ ಉಮೇಶ ಹುಡೇದ ನೇತೃತ್ವದ ತಂಡ ತೂಕ ಮಾಪನ ಪರಿಶೀಲಿಸಿತು. ದ್ರಾಕ್ಷಿ ತೂಕ ಮಾಡುವ ತಕ್ಕಡಿಗೆ ಪ್ರತಿ ವರ್ಷ ಇಲಾಖೆಯಿಂದ ಸೀಲ್ ಹಾಕಿಸಿಕೊಂಡಿರಬೇಕು ಎಂಬ ನಿಯಮ ಉಲ್ಲಂಘಿಸಿರು ವುದು ಕಂಡುಬಂತು. ತಕ್ಕಡಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಸೀಲ್ ಹಾಕಿಸಿಕೊಂಡು ತಕ್ಕಡಿ ವಾಪಸ್ ಪಡೆಯುವಂತೆ ವ್ಯಾಪಾರಿಗೆ ಸೂಚಿಸಿದರು. ವ್ಯಾಪಾರಿಗಳು ರೈತರಿಗೆ ಮೋಸ ಮಾಡಬಾರದು ಎನ್ನುವ ಉದ್ದೇಶದಿಂದ ದಾಳಿ ನಡೆಸಲಾಗುತ್ತಿದೆ. 4-5 ಟನ್ ದ್ರಾಕ್ಷಿ ಮಾರಾಟ ಮಾಡುವ ರೈತರಿಂದ 12 ಕೆಜಿ ಬಾಕ್ಸ್ ಬಿಡಿಬಿಡಿಯಾಗಿ ತೂಕ ಮಾಡಿಸಿಕೊಳ್ಳುವ ವ್ಯಾಪಾರಿಗಳು ಪ್ರತಿ ಬಾಕ್ಸ್‌ನಲ್ಲಿ ಅರ್ಧ ಕೆಜಿಯಿಂದ ಕೆಜಿವರೆಗೂ ತೂಕ ಮೋಸ ಮಾಡಿದರೆ ಸಾವಿರಾರು ರೂಪಾಯಿ ನಷ್ಟವಾಗುತ್ತದೆ. ಕೇವಲ ದ್ರಾಕ್ಷಿ ಮಾತ್ರವಲ್ಲ. ತೊಗರಿ, ಕಡಲೆ, ಮೆಕ್ಕೆಜೋಳ ಸೇರಿ ಯಾವುದೇ ವ್ಯಾಪಾರಿಗಳ ಮೇಲೆ ಅನುಮಾನವಿದ್ದಲ್ಲಿ ನಮಗೆ ಕರೆ ಮಾಡಿ ತಿಳಿಸಬೇಕು ಎಂದು ಕಾನೂನು ಮಾಪನಶಾಸ ಇನ್‌ಸ್ಪೆಕ್ಟರ್ ಉಮೇಶ ಹುಡೇದ ಮನವಿ ಮಾಡಿದರು. ಸಹಾಯಕ ನಿಯಂತ್ರಕ ಎ.ಎಸ್. ಪಾಣಿಶೆಟ್ಟರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts