More

    ಕಾನೂನು ಕ್ಷೇತ್ರ ಮರತೂರಿಗೆ ಐತಿಹಾಸಿಕ ಸ್ಥಾನಮಾನ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನಮ್ಮ ಜಿಲ್ಲೆಗೆ ಸಿಕ್ಕಿರುವುದು ನಮ್ಮ ಸೌಭಾಗ್ಯ. ಈ ಮೂಲಕ ನಾಡಿಗೆ, ದೇಶಕ್ಕೆ ಮತ್ತು ಇಡೀ ಮಾನವ ಜಗತ್ತಿಗೆ ಏನಾದರೊಂದು ಅಸಾಧಾರಣವಾದ ಕಾಣಿಕೆ ಕೊಡುವುದು ಸಾಧ್ಯವಾದರೆ ಅದು ಆನಂದದ ಸಂಗತಿ. ಇಂದು ಕಾನೂನು ವಿಭಾಗ ವಿವಿಯಲ್ಲಿ ಪ್ರಾರಂಭವಾಗಿರುವುದು ಸಂತಸದ ಸಂಗತಿ ಎಂದು ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಹೇಳಿದರು.
    ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಕಾನೂನು ವಿಭಾಗ ಉದ್ಘಾಟಿಸಿದ ಅವರು, ಕಲಬುರಗಿಗೆ ತನ್ನದೇ ಆದ ಹೆಸರಿದೆ. ರಾಷ್ಟ್ರಕೂಟ ರಾಜಮನೆತನ ಈ ಪ್ರದೇಶ, ಶರಣರು, ಜೈನ ಕವಿಗಳು ಹಾಗೂ ಸೂಫಿ ಕವಿಗಳ ತವರು ಮನೆಯಿದು, ತೊಗರಿಬೇಳೆಯ ಮಾರಾಟ ಮತ್ತು ಉತ್ಪಾದನಾ ಕೇಂದ್ರ, ಜತೆಗೆ ಶಿಕ್ಷಣ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದೆ. ಪ್ರಮುಖವಾಗಿ ಕಾನೂನು ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದಾಗಿ ಮರತೂರಿಗೆ ಐತಿಹಾಸಿಕ ಸ್ಥಾನಮಾನವಿದೆ ಎಂದರು.
    ಕಳೆದ 200 ವರ್ಷಗಳಿಗೆ ಹೋಲಿಸಿದರೆ ನಮ್ಮ ಸಂಶೋಧನೆಗಳು ಇಳಿಮುಖವಾಗುತ್ತಿದೆ. ನಿತ್ಯ ಏಳು ಸಾವಿರ ಕೋಟಿ ರುಪಾಯಿಗಳನ್ನು ವಿದೇಶಿ ಸರ್ವರ್ಗೆ ನಮ್ಮ ಮೊಬೈಲ್ ಮೂಲಕ ಹಾಗೂ ಬೇರೆ ಬೇರೆ ಮೂಲಗಳ ಮೂಲಕ ನೀಡುತ್ತಿದ್ದೇವೆ. ಇದನ್ನು ಮಟ್ಟ ಹಾಕಿ ನಮ್ಮದೇ ಆದ ಜಗತ್ತು ನಿಮರ್ಾಣ ಮಾಡಬೇಕಾದರೆ ನಮ್ಮ ದೇಶಕ್ಕೆ ಅಸಾಧಾರಣ ಚಿಂತನೆಯ ಅಗತ್ಯವಿದೆ ಎಂದರಯ,
    ವಿಶ್ವವಿದ್ಯಾಲಯದ ಕುಲಸಚಿವ ಮುಶ್ತಾಕ್ ಅಹ್ಮದ್ ಪಟೇಲ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ ಮಹೇಶ್ವರಯ್ಯ ಮಾತನಾಡಿ, ವಿಶ್ವವಿದ್ಯಾಲಯ ಪ್ರಗತಿ ನೋಡಲು ಸಂತೋಷವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಹೊಸತನವನ್ನು ಇದು ಸಾಧಿಸುತ್ತಾ ಬಂದಿದೆ. ಇಂದು ಆರಂಭಗೊಂಡ ಕಾನೂನು ವಿಭಾಗವು ದೇಶದಲ್ಲಿ ಅತ್ಯಂತ ಒಳ್ಳೆಯ ವಿಭಾಗವಾಗಿ ಹೊರಗೊಮ್ಮಿದರೆ ಹೆಮ್ಮೆಯಾಗುತ್ತದೆ. ದೇಶದಲ್ಲಿರುವ ಹದಿನೈದು ಕೇಂದ್ರೀಯ ವಿಶ್ವವಿದ್ಯಾಲಯಗಳ ಪೈಕಿ ಕೆಲವೇ ವಿಶ್ವವಿದ್ಯಾಲಯಗಳು ಕಾನೂನು ವಿಭಾಗವನ್ನು ಹೊಂದಿದೆ ಅದರಲ್ಲಿ ನಮ್ಮ ವಿಶ್ವವಿದ್ಯಾಲಯವೂ ಒಂದು ಎಂದರು.
    ನಿವೃತ್ತ ನ್ಯಾಯಾಧೀಶ, ಪ್ರಾಧ್ಯಾಪಕ ಡಾ.ಎಸ್.ಬಿ.ಎನ್ ಪ್ರಕಾಶ್, ಹಿರಿಯ ಪತ್ರಕರ್ತ ಡಾ ಶ್ರೀನಿವಾಸ ಸಿರನೂರಕರ್, ಡಾ. ಮಹಮ್ಮದ್ ನಝ್ರುಲ್ ಬಾರಿ, ಡಾ. ಅನಂತ್ ಚಿಂಚೋರೆ, ಡಾ. ಬಸವರಾಜ್ ಕಬಕಡ್ಡಿ ಇತರರು ಇದ್ದರು.
    ಕೇಂದ್ರೀಯ ವಿವಿಯಲ್ಲಿ ಆರಂಭವಾದ ನೂತನ ಕೋರ್ಸಗಳಲ್ಲಿ ಕಾನೂನು ವಿಭಾಗವೂ ಒಂದು. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಿಕ್ಷಣವು ತಮ್ಮ ನೆಲದ ಪರಂಪರೆ ಬಿಂಬಿಸುವಂತಿರಬೇಕು. ನಮ್ಮ ಕಾನೂನು ವಿಭಾಗವು ಕಲ್ಯಾಣ ಕನರ್ಾಟಕದ ನೆಲದ ಪ್ರಯೋಜನ ಪಡೆಯುತ್ತಾ ವಿಜ್ಞಾನೇಶ್ವರ ಕುರಿತು ವಿಚಾರ ಸಂಕಿರಣ ಆಯೋಜಿಸಿರುವುದು ಸಂತಸದ ವಿಚಾರ.
    ಪ್ರೊ.ಜಿ.ಆರ್.ನಾಯಕ,
    ಸಮ ಕುಲಪತಿ, ಸಿಯುಕೆ ಕಲಬುರಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts