More

    ಕಾಡಲ್ಲಿ ಗಾಂಜಾ ಬೆಳೆಯುವವರ ಮೇಲೆ ಕ್ರಮ

    ಕಾರವಾರ: ಜಿಲ್ಲೆಯ ಅರಣ್ಯ ಭಾಗದಲ್ಲಿ ಗಾಂಜಾ ಬೆಳೆಯುವ ಮಾಹಿತಿಯ ಬಗ್ಗೆ ಅರಣ್ಯ ಇಲಾಖೆ ಜತೆ ಜಂಟಿ ಸಮೀಕ್ಷೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಾಪುರದಲ್ಲಿ ಸೋಮವಾರ ಗಾಂಜಾ ಮಾರುತ್ತಿದ್ದಾಗ ಬಂಧಿತ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದು ಮಾರುತ್ತಿದ್ದ ಎಂಬ ಮಾಹಿತಿ ಇದೆ. ಇದೇ ರೀತಿ ಬೇರೆಯವರೂ ಬೆಳೆಯುವ ಸಾಧ್ಯತೆ ಇದ್ದು, ಈ ಕುರಿತು ಪರಿಶೀಲಿಸಲಿದ್ದೇವೆ ಎಂದರು.

    ಕಳೆದ 11 ತಿಂಗಳಲ್ಲಿ ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟದ ಆರೋಪದ ಮೇಲೆ 31 ಪ್ರಕರಣ ದಾಖಲಾಗಿದ್ದು, 72 ಜನರನ್ನು ಬಂಧಿಸಲಾಗಿದೆ. 2.76 ಕೋಟಿ ರೂ. ಮೌಲ್ಯದ 41.523 ಕೆಜಿ ಗಾಂಜಾ, 2 ಕೆಜಿ ಬ್ರೌನ್ ಶುಗರ್, 510 ಗ್ರಾಂ ಚರಸ್ ವಶಕ್ಕೆ ಪಡೆಯಲಾಗಿದೆ. ಕಳೆದ 3 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತ್ಯದಿಕ ಮೌಲ್ಯದ ಮಾದಕ ದ್ರವ್ಯ ಪ್ರಕರಣ ಪತ್ತೆ ಹಚ್ಚಲಾಗಿದೆ ಎಂದರು.

    ಶೇ.71 ರಷ್ಟು ವಸೂಲಿ: ಜಿಲ್ಲೆಯಲ್ಲಿ ಲಾಕ್​ಡೌನ್ ಕಾರಣದಿಂದ ಕಳ್ಳತನ ಪ್ರಕರಣಗಳು ಕಡಿಮೆಯಾಗಿವೆ. ಹೆಚ್ಚಿನ ಕಳ್ಳತನ ಪ್ರಕರಣಗಳನ್ನು ಪತ್ತೆ ಹೆಚ್ಚಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿ ಸ್ವತ್ತು ವಶಕ್ಕೆ ಪಡೆದ ದಾಖಲೆಯೇ ಇರಲಿಲ್ಲ. ಈ ಬಾರಿ 11 ತಿಂಗಳಲ್ಲಿ ಶೇ. 71.7 ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಸ್ವತ್ತುಗಳನ್ನು ವಸೂಲಿ ಮಾಡಲಾಗಿದೆ ಎಂದರು.

    ದರೋಡೆ, ಸರಗಳ್ಳತನ, ಮನೆಗಳ್ಳತನ ಸೇರಿ 2017 ರಲ್ಲಿ ಜಿಲ್ಲೆಯಲ್ಲಿ 303 ಪ್ರಕರಣಗಳಾಗಿದ್ದವು. 2018 ರಲ್ಲಿ 273 ಪ್ರಕರಣಗಳಾಗಿವೆ. 2019 ರಲ್ಲಿ 223 ಪ್ರಕರಣಗಳಾಗಿದ್ದವು. ಈ ಬಾರಿ 165 ಪ್ರಕರಣಗಳಾಗಿವೆ. 77 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದರು ಎಎಸ್​ಪಿ ಬದರಿನಾರಾಯಣ ಸುದ್ದಿಗೋಷ್ಠಿಯಲ್ಲಿದ್ದರು.

    ಜಾಲತಾಣಗಳ ಮೇಲೆ ನಿಗಾ

    2018 ರಲ್ಲಿ ಜಿಲ್ಲೆಯ 80 ಕ್ಕೂ ಅಧಿಕ ಜನರ ಮೇಲೆ ಜಾಲತಾಣಗಳಲ್ಲಿ ದ್ವೇಷ ಮನೋಭಾವನೆ ಹಬ್ಬಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಈಗ ಗ್ರಾಪಂ ಚುನಾವಣೆ ನಡೆದಿದ್ದು, ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ನಿಗಾ ಇರಿಸಲಿದೆ ಎಂದರು. ಜಿಲ್ಲೆಯ ಇಬ್ಬರ ಗಡಿಪಾರಿಗೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts