More

    ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಭರವಸೆ, ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗೆ ಧ್ವನಿಯಾಗುವೆ

    ವಿಜಯಪುರ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಮೂರು ವರ್ಷ ಸಾಕಷ್ಟು ಕೆಲಸ‌ ಮಾಡಿದ್ದು, ಎರಡನೇ ಅವಧಿಗೆ ಆಯ್ಕೆಯಾಗುತ್ತಿದ್ದಂತೆ ಬಾಕಿ ಇರುವ ಅನೇಕ ಕಾರ್ಯಗಳ ಅನುಷ್ಟಾನ ಕ್ಕೆ ಹೋರಾಟ ರೂಪಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಭರವಸೆ ನೀಡಿದರು.
    ವಿಧಾನ ಪರಿಷತ್ ಸದಸ್ಯನಾಗಿ ಮೂರು ವರ್ಷಗಳ ಕಾಲ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕರೊನಾ ಸಂದರ್ಭ ಸ್ಯಾನಿಟೈಸರ್ ಯಂತ್ರಗಳನ್ನು ‌ನೀಡಿರುವೆ. ಅವಳಿ ಜಿಲ್ಲೆಯ ಸದಸ್ಯರ ಸಮಸ್ಯೆ ಆಲಿಸಿ ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಎರಡನೇ ಅವಧಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
    ಅವಳಿ ಜಿಲ್ಲೆಯ 15 ವಿಧಾನ ಸಭೆ ಕ್ಷೇತ್ರದಲ್ಲಿ 6898 ಗ್ರಾಪಂ ಸದಸ್ಯರು ಆಯ್ಕೆಯಾದರು. ಸುಮಾರು 6500 ಸದಸ್ಯರಿಗೆ ಖುದ್ದಾಗಿ ಭೇಟಿ ನೀಡಿದ್ದೇನೆ‌. ತೆಲಂಗಾಣ, ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಗೌರವ ಧನ ಕಡಿಮೆ ಇತ್ತು. ಹೀಗಾಗಿ 500 ರೂ. ಇರುವ ಗೌರವ ಧನ 1000 ರೂ.ಗೆ ಏರಿಸಲು ಶ್ರಮಿಸಿದೆ. ನನ್ನ ಪ್ರಯತ್ನದ ಫಲ ರಾಜ್ಯದ 93 ಸಾವಿರ ಸದಸ್ಯರಿಗೆ ಗೌರವ ಧನ ಹೆಚ್ಚಿತು ಎಂದರು.
    ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಆ ಮೊತ್ತ 2000 ರೂ.ಗೆ ಹೆಚ್ಚಿಸಲು ಸದನದಲ್ಲಿ ಒತ್ತಾಯಿಸಿದ್ದು ಅದಕ್ಕೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದರು.
    ಇನ್ನು ಉಚಿತ ಬಸ್ ಪಾಸ್, ಪಿಂಚಣಿ ನೀಡಲು ಒತ್ತಾಯಿಸಿದ್ದು ಅದು ಸಹ ಚರ್ಚೆಯ ಹಂತದಲ್ಲಿದೆ ಎಂದರು.
    ವಿವಿಧ ವಸತಿ ಯೋಜನೆಗಳಡಿ ನಿರ್ಮಾಣ ಹಂತದಲ್ಲಿರುವ
    ಮನೆಗಳು ಬ್ಲಾಕ್ ಆಗಿವೆ. ಹೊಸ ಮನೆ ಮಂಜೂರಾಗುತ್ತಿಲ್ಲ. ಹೀಗಾಗಿ ಪ್ರತೀ ವರ್ಷ ಪ್ರತಿ ಗ್ರಾಮ
    ಪಂಚಾಯಿತಿಗೆ ಕನಿಷ್ಠ 50 ಮನೆ ನೀಡಲು ಹೋರಾಡುವೆ. 15 ನೇ ಹಣಕಾಸು ಯೋಜನೆಯಡಿ ಇರಿವ
    ಅನುದಾನ ಜಲ ಜೀವನ್ ಮಿಷನ್ ಗೆ ಬಳಸಿಕೊಂಡಿದ್ದರಿಂದ ಗ್ರಾಪಂಗಳಲ್ಲಿ ಅನುದಾನದ ಕೊರತೆ ಕಾಡುತ್ತಿದೆ. ಈ ‌ನಿಟ್ಟಿನಲ್ಲಿ ಸರ್ಕಾರದ
    ಗಮನ ಸೆಳೆದು ಗ್ರಾಪಂ ಅನುದಾನ ಕ್ಕೆ ಕೊಕ್ಕೆ ಹಾಕುವುದನ್ನು ತಡೆಯುವೆ ಎಂದರು.

    ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ, ಅನುದಾನ ಒದಗಿಸುವಲ್ಲಿ ಕಾಂಗ್ರೆಸ್ ಪಾತ್ರ ಪ್ರಮುಖವಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳಿಸುವಲ್ಲಿ
    ದಿ. ರಾಜೀವ ಗಾಂಧಿ ಅಪಾರ ಶ್ರಮ ಹಾಕಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವ್ಯವಸ್ಥೆ ಕಲ್ಪಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕೆಂದರು.
    ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿತು. ಸುಮಾರು ಐದು ಕೋಟಿ ರೂ.ವರೆಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್. ಹೀಗಾಗಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡರ ಗೆಲುವಿಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಒಲವು ತೋರಿದ್ದಾರೆ ಎಂದರು.
    2000 ಕ್ಕೂ ಅಧಿಕ ಮತಗಳ ಅಂತರದಿಂದ ಸುನೀಲಗೌಡ ಪಾಟೀಲ ಗೆಲುವು ಸಾಧಿಸಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಯಾವುದೇ ಲೆಕ್ಕಕ್ಕಿಲ್ಲ. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವವನ್ನೇ ಪಡೆದಿಲ್ಲ. ಟಿಕೆಟ್ ಗೆ ಅರ್ಜಿಯನ್ನೂ ಕೊಟ್ಟಿಲ್ಲ‌. ಸುಖಾ ಸುಮ್ಮನೇ ಕಾಂಗ್ರೆಸ್ ಬಗ್ಗೆ ಹಾಗೂ ಎಂ.ಬಿ. ಪಾಟೀಲರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದರು.
    ಎಂ‌.ಬಿ. ಪಾಟೀಲರ ಕುಟುಂಬ ಸೆಕ್ಯುಲರ್ ಆಗಿದೆ. ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡಿದ್ದಾರೆ ಎಂದರು.
    ಮುಖಂಡರಾದ ಸಂಗಮೇಶ ಬಬಲೇಶ್ವರ, ಸುರೇಶ ಘೊಣಸಗಿ, ಮಹಾಂತೇಶ ಬಿರಾದಾರ, ಗಂಗಾಧರ ಸಂಬಣ್ಣಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts