More

    ಕಾಂಗ್ರೆಸ್ ಅಭ್ಯರ್ಥಿ ಅಬ್ಬರದ ಪ್ರಚಾರ


    ದೇವನಹಳ್ಳಿ
    ಮತದಾನದ ದೀನ ಸಮೀಪಿಸುತ್ತಿದ್ದಂತೆ ಪ್ರಚಾರದ ಕಾವು ತೀವ್ರಗತಿಯಲ್ಲಿ ಏರತೊಡಗಿದ್ದು, ಕಾಂಗ್ರೆಸ್ ಅಭ್ಯರ್ಥಿ, ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಪರವಾಗಿ ಕಾರ್ಯಕರ್ತರ ಪ್ರಚಾರ ಅಬ್ಬರದಿಂದ ಸಾಗುವ ಜತೆಗೆ ಹಲವಾರು ಗ್ರಾಮಗಳಲ್ಲಿ ಅನ್ಯ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರುವವರ ಸಂಖ್ಯೆ ಏರುತ್ತಲೇ ಇದೆ.
    ತಾಲೂಕಿನ ಆವತಿ ಗ್ರಾಮದಿಂದ ಶುಕ್ರವಾರ ಆರಂಭವಾದ ರೋಡ್ ಶೋ, ಕನ್ನಮಂಗಲ ಪಂಚಾಯಿತಿ, ಸಾದಹಳ್ಳಿ, ಸಿಂಗ್ರಹಳ್ಳಿ, ಕುಂದಾಣ ಹಾಗೂ ಜಾಲಿಗೆ ಪಂಚಾಯಿತಿಯಲ್ಲಿ ಸಂಚರಿಸಿತು.
    ಆವತಿ ಗ್ರಾಪಂ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ನಾಗರಾಜ್, ಮೋಹನ್, ಆನಂದ್, ಸೇರಿ ಹಲವು ಮುಖಂಡರು ಕಾಂಗ್ರೆಸ್ ಸೇರಿದರು. ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಪಕ್ಷದ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
    ಕೆ.ಎಚ್. ಮುನಿಯಪ್ಪ ಮಾತನಾಡಿ, ರಾಷ್ಟ್ರ, ರಾಜ್ಯದಲ್ಲಿ ಕಾಂಗ್ರೆಸ್ ಅನಿವಾರ್ಯವಾಗಿದೆ. ಪಕ್ಷ ಜನಸಾಮಾನ್ಯರಿಗೆ ಆಶಾಕಿರಣವಾಗಿದೆ. ಕಾಂಗ್ರೆಸ್ ಸೇರಿದವರಿಗೆ ಮುಂದಿನ ದಿನಗಳಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ ಎಂದರು.
    ಎಲ್ಲ ಧರ್ಮ, ಜಾತಿ, ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪಕ್ಷ ನಮ್ಮದು. ದೇಶದಲ್ಲಿ ಬಿಜೆಪಿ ದುರಾಡಳಿತ ಕೊನೆಗಾಣಿಸಲು ಕಾಂಗ್ರೆಸ್ ಗೆಲ್ಲಿಸಲೇಬೇಕಾದ ಸಂದರ್ಭ ಒದಗಿ ಬಂದಿದೆ ಎಂದರು.
    ಗ್ರಾಪಂ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಮುನಿಯಪ್ಪ ಅವರ ಅಪೇಕ್ಷೆಯಂತೆ ಕಾಂಗ್ರೆಸ್ ಸೇರಿದ್ದು, ನಾನು ಅಧ್ಯಕ್ಷನಾದ ಬಳಿಕ ಪ್ರತಿ ದಿನ ಪಂಚಾಯಿತಿಯಲ್ಲಿ ಕುಳಿತು ಜನರ ಅಹವಾಲು ಕೇಳಿ ಸಮಸ್ಯೆ ಬಗೆಹರಿಸುತ್ತಿದೆ ಎಂದರು. ಗ್ರಾಮದಲ್ಲಿ ಸುಸಜ್ಜಿತ ಆಟದ ಮೈದಾನದ ಅವಶ್ಯಕತೆ ಇದೆ. 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ, ಯುವಕರಿಗೆ ಉದ್ಯೋಗ, ನಿವೇಶನರಹಿತರಿಗೆ ನಿವೇಶನ ಮಾಡಿಕೊಡಲು ಮುನಿಯಪ್ಪ ಅವರಲ್ಲಿ ಮನವಿ ಮಾಡಿದರು.
    ಗ್ರಾಪಂ ಸದಸ್ಯ ನರಸಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡಲು ಮುಂದೆ ಶಾಸಕರಾಗುವ ಮುನಿಯ್ಯಪ್ಪ ಅವರೇ ಕಾರ್ಯಕ್ರಮ್ಕೆಕ್ಕೆ ಆಗಮಿಸಬೇಕು ಎಂದರು. ಗ್ರಾಪಂ ಸದಸ್ಯ ವೆಂಕಟೇಶ್ ಮಾತನಾಡಿ, ಮುನಿಯಪ್ಪ ಅವರು 7 ಬಾರಿ ಗೆದ್ದು ಸಂಸದರಾಗಿ, 2 ಬಾರಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ನಮ್ಮ ಗ್ರಾಮದ ಮೂಲಕ ಹಾದುಹೋಗುವ ರೈಲ್ವೆ ಮಾರ್ಗವನ್ನು ಮೇಲ್ದರ್ಜೆಗೆ ಏರಿಸಿದ ಕೆ.ಎಚ್.ಮುನಿಯಪ್ಪ ಅವರು ಈ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು. ಹಿಂದೆ 450 ರೂ. ಇದ್ದ ಅಡುಗೆ ಅನಿಲ ಇಂದು 1,100 ರೂ. ಆಗಿದೆ. ಪೆಟ್ರೋಲ್ ಡಿಸೇಲ್ ಬೆಲೆ ನೂರರ ಗಡಿ ದಾಟಿದೆ. ಅಡುಗೆ ಎಣ್ಣೆ 200 ರೂ. ಆಗಿದೆ. ಪ್ರತಿ ವಸ್ತುವಿಗೂ ಜಿಎಸ್‌ಟಿ ಮೂಲಕ ಬಡ ಜನರ ಸುಲಿಗೆ ಮಾಡಲಾಗುತ್ತಿದೆ. ಹಾಗಾಗಿ ಬಿಜೆಪಿ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್‌ಗೆ ಎಲ್ಲರೂ ಮತಹಾಕಬೇಕು. ಕಾಂಗ್ರೆಸ್ ಗೆದ್ದರೆ ನಮ್ಮ ಅಭ್ಯರ್ಥಿ ಮುನಿಯಪ್ಪ ಸಂಪುಟ ಸಚಿವರಾಗುವುದು ಖಚಿತ. ಆ ಮೂಲಕ ದೇವನಹಳ್ಳಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾಣಲಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಮಹಿಳಾ ಬ್ಲಾಕ್ ಅಧ್ಯಕ್ಷೆ ರಾಧಾಕೃಷ್ಣರಡ್ಡಿ, ಗ್ರಾಪಂ ಸದಸ್ಯರಾದ ನರಸಪ್ಪ, ವೆಂಕಟೇಶ್, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts