More

    ಕಳಚಿದ ದೋರನಹಳ್ಳಿ ಆಧ್ಯಾತ್ಮಿಕ ಕೊಂಡಿ

    ದೋರನಹಳ್ಳಿ : ಜ್ಞಾನಕ್ಕಿರುವ ಶಕ್ತಿ ಮತ್ತಾವುದಕ್ಕೂ ಇಲ್ಲ ಎಂದು ನಂಬಿರುವ ಗ್ರಾಮದ ಸಿದ್ದಾರೂಢ ಸಿದ್ದಾಶ್ರಮದ ಪೀಠಾಧಿಪತಿ ಶ್ರೀ ರಾಮಾನಂದ ಅವಧೂತರು ಗುರುವಾರ ಬೆಳಗ್ಗಿನ ಜಾವ ಲಿಂಗೈಕ್ಯರಾಗಿದ್ದು, ಊರಿನ ಜ್ಞಾನದ ಕೊಂಡಿಯೊAದು ಕಳಚಿದಂತಾಗಿದೆ.

    ಶ್ರೀ ರಾಮಾನಂದ ಅವಧೂತರು ಕಲ್ಯಾಣ ನಾಡಿನ ಜ್ಞಾನ ದಾಸೋಹಿಗಳೆಂದೇ ಹೆಸರುವಾಸಿ ಆಗಿದ್ದರು. ಸಾಮಾಜಿಕ, ಧಾರ್ಮಿಕ ಮತ್ತು ಸತ್ಸಂಗದಿAದಲೇ ಅಸಂಖ್ಯ ಭಕ್ತ ಸಂಕುಲವನ್ನು ಹೊಂದಿದ್ದರು.

    ೧೯೭೯ರಲ್ಲಿ ದೋರನಹಳ್ಳಿಗೆ ಆಗಮಿಸಿದ್ದ ಅವರು ಆಶ್ರಮದ ಪತ್ರಿ ಗಿಡದ ಕೆಳಗೆ ಚಿಕ್ಕದಾದ ಗುಡಿಸಲು ಹಾಕಿಕೊಂಡು ಮಾತೋಶ್ರೀ ದೇವೆಕ್ಕೆಮ್ಮ ಪೂಜೆ ಮಾಡುತ್ತಲೇ ಸಿದ್ದಾರೂಢ ಆಶ್ರಮ ಕಟ್ಟಿ ಬೆಳೆಸಿದರು. ಪ್ರತಿವರ್ಷ ಛಟ್ಟಿ ಅಮಾವಾಸ್ಯೆಗೆ ಜ್ಞಾನ ದಾಸೋಹ ಹಮ್ಮಿಕೊಳ್ಳುತ್ತಿದ್ದರು. ೨೮ ವರ್ಷ ನಿರಂತರ ಈ ಕಾರ್ಯಕ್ರಮ ನಡೆಸಿದ್ದಲ್ಲದೆ ಸಾಮೂಹಿಕ ವಿವಾಹದ ಮೂಲಕ ಬಡ ಕುಟುಂಬಗಳಿಗೆ ನೆರವಾಗಿದ್ದರು.

    ರಾಮಾನಂದ ಅವಧೂತರು ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಲೋಕಪ್ಪ ಮತ್ತು ಸೂರಮ್ಮ ಎಂಬ ದೇವಾಂಗ ಸಮಾಜದ ದಂಪತಿಯ ಎರಡನೇ ಮಗ. ಮೂಲ ಹೆಸರು ರಾಮಚಂದ್ರ. ಬಾಲ್ಯದಿಂದಲೂ ಅಧ್ಯಾತ್ಮ ಕಡೆ ಹೆಚ್ಚಿನ ಒಲವು ಹೊಂದಿದ್ದ ಅವರು, ಹುಟ್ಟೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು.

    ೧೯೫೨ರಲ್ಲಿ ಅಕ್ಕನ ಮಗಳಾದ ಹೂವಮ್ಮ ಅವರನ್ನು ವರಿಸಿದರು. ನಂತರದ ದಿನಗಳಲ್ಲಿ ಸಂಸಾರದ ಕಡೆ ವಿಮುಖರಾಗಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಸಂಚಾರ ಮಾಡಿದರು. ನಂತರ ಧಾರವಾಡ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಐರಣಿ ಹೊಳೆಮಠದ ಪರಮಹಂಸ ಬಸವರಾಜ ಮುಪ್ಪಿನಾರ್ಯ ಅವರಿಂದ ದೀಕ್ಷೆ ಪಡೆದರು. ದೋರನಹಳ್ಳಿಗೆ ೧೯೭೯ರಲ್ಲಿ ಬಂದು ಮಾತೋಶ್ರೀ ದೇವೆಕ್ಕೆಮ್ಮನವರ ಸೇವೆ ಮಾಡಲು ಆರಂಭಿಸಿದರು. ಅಗಾಧ ದಿವ್ಯಶಕ್ತಿಯೊಂದಿಗೆ ಸಿದ್ದಾಶ್ರಮ ಕಟ್ಟಿದರಲ್ಲದೆ ಶಿಕ್ಷಣ ಸಂಸ್ಥೆಯೊAದನ್ನೂ ಸ್ಥಾಪಿಸುವ ಮೂಲಕ ಬಡ ಮಕ್ಕಳ ಪಾಲಿಗೆ ಶಿಕ್ಷಣ ದಾಸೋಹಿಯೂ ಎನಿಸಿದರು.

    ರಾಮಾನಂದ ಅವಧೂತರ ಅಗಲಿಕೆ ಸುದ್ದಿ ತಿಳಿಯುತ್ತಿದ್ದಂತೆ ಸಿದ್ದಾಶ್ರಮ ಎದುರು ಸಾವಿರಾರು ಭಕ್ತರು ನೆರೆದು ಕಣ್ಣೀರಿಡುತ್ತ ಅಂತಿಮ ದರ್ಶನದ ಪಡೆದುಕೊಂಡರು. ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೋರನಹಳ್ಳಿ ಸೇರಿ ವಿವಿಧ ಗ್ರಾಮಗಳ ಭಜನಾ ತಂಡಗಳು ಭಜನೆ ನಡೆಸಿಕೊಟ್ಟರು. ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮಠದ ಆವರಣದಲ್ಲಿ ಸಕಲ ವಿಧಿ-ವಿಧಾನದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts