More

    ಕಲ್ಯಾಣ ಕರ್ನಾಟಕದಲ್ಲಿ ಮಾಲೀಕರ ಸೃಷ್ಟಿಗೆ ಕೇಂದ್ರ ಪೂರಕ

    ಸೇಡಂ: ಕಲ್ಯಾಣ ಕರ್ನಾಟಕದಲ್ಲಿ ದುಡಿಯುವ ಕೈಗಳಿಗಿಂತ ಕೆಲಸ ನೀಡುವ ಕೈಗಳು ಸೃಷ್ಟಿಯಾಗಬೇಕು ಎನ್ನುವ ಸಂಕಲ್ಪ ನಮ್ಮದಾಗಿದ್ದು, ಈ ಭಾಗದಲ್ಲಿ ಮಾಲೀಕರ ಸೃಷ್ಟಿಗೆ ಸಮುದಾಯ ಸಮೃದ್ಧಿ ಕೇಂದ್ರ ಪೂರಕವಾಗಲಿದೆ ಎಂದು ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಮಾನವ ಸಂಪನ್ಮೂಲ ಮತ್ತು ಕೃಷಿ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟರು.
    ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಮತ್ತು ಹೆಡ್ ಹೆಲ್ಡ್ ಹೈ ಫೌಂಡೇಷನ್ನಿಂದ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಮುದಾಯ ಸಮೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿದ ಅವರು, ಈ ಭಾಗದ ಯುವಕ- ಯುವತಿಯರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದರು.
    ಕೇಂದ್ರದ ಮೂಲಕ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವುದು, ಸಂಪೂರ್ಣ ಮಾಹಿತಿ ಒದಗಿಸುವ ಕೆಲಸ ನಡೆಯಲಿದೆ. ಸಣ್ಣಪುಟ್ಟ ವ್ಯಾಪಾರಕ್ಕೆ ಆರ್ಥಿಕ ನೆರವು ನೀಡಲಾಗುವುದು. ಈಗಾಗಲೇ ಕರೊನಾ ಭಯದಿಂದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ವಾಪಸ್ ಆಗಿದ್ದು, ಅವರು ಮತ್ತೆ ದುಡಿಯಲು ನಗರಗಳಿಗೆ ಹೋಗದೆ ತಮ್ಮ ತವರಿನಲ್ಲಿಯೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ವೇದಿಕೆ ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.
    ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿ, ಇಲ್ಲಿನ ಕೊತ್ತಲ ಬಸವೇಶ್ವರ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದ ಅನೇಕರು ದೊಡ್ಡ ಹುದೆಯಲ್ಲಿದ್ದಾರೆ. ಉತ್ತಮ ಅಧ್ಯಯನದೊಂದಿಗೆ, ನಮ್ಮ ನಾಡಿನ ಸಂಸ್ಕೃತಿ ಕಲಿಸಿಕೊಡುವಲ್ಲಿ ಸೇಡಂ ಅವರ ಶ್ರಮ ಶ್ಲಾಘನೀಯ ಎಂದರು.
    ಹೆಡ್ ಹೆಲ್ಡ್ ಹೈ ಫೌಂಡೇಷನ್ ಮುಖ್ಯಸ್ಥ ಕುಮಾರ ಮಂಜುನಾಥ, ಎಸ್.ಪಿ. ಭೋದಾ ಮಾತನಾಡಿದರು. ಸಂಸ್ಥೆ ಆಡಳಿತಾಧಿಕಾರಿ ಅನುರಾಧ ಪಾಟೀಲ್, ಪ್ರಮುಖರಾದ ಭಗವಂತರಾವ ಪಾಟೀಲ್, ದತ್ತಾತ್ರೇಯ ಐನಾಪುರ, ಭೀಮರೆಡ್ಡಿ ಬೆಜ್ಜಾ ಇದ್ದರು.
    ಲಕ್ಷ್ಮಿ ಸಿಂಪಿ, ಅಂಜನಾ ಕುಲಕರ್ಣಿ ಪ್ರಾರ್ಥಿಸಿದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಯೋಜಕ ಪಿ.ಭೀಮರೆಡ್ಡಿ ಸ್ವಾಗತಿಸಿದರು. ತನುಜಾ ಐನಾಪುರ ನಿರೂಪಣೆ ಮಾಡಿದರು. ರೇಖಾ ವಿ.ವಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts