More

    ಕಲೆ, ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳಸಿಕೊಳ್ಳಿ


    ಯಾದಗಿರಿ: ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ರಂಗ ಭೂಮಿ, ಸಂಗೀತ ಹೀಗೆ ವಿಭಿನ್ನ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಸಮಾಜದಲ್ಲಿ ತನ್ನದೇಯಾದ ವಿಶೇಷತೆ ಹೊಂದಿರುತ್ತಾನೆ. ನಾವೆಲ್ಲ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡೋಣ ಎಂದು ಅಹಿಂದ ಮುಖಂಡ ಹಣಮೇಗೌಡ ಬೀರನಕಲ್ ಸಲಹೆ ನೀಡಿದರು.
    ಕನ್ನಡ ರಾಜ್ಯೋತ್ಸವದ ನಿಮಿತ್ತ ತಾಲೂಕಿನ ಬಂದಳ್ಳಿ ಗ್ರಾಮದಲ್ಲಿ ಸಮನ್ವಯ ಸಂಸ್ಥೆ ಕಿಲ್ಲನಕೇರಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ, ನಾಡಿನ ಕಲೆ, ಸಂಸ್ಕೃತಿಯನ್ನು ಆಸಕ್ತಿ ಬೆಳಸಿಕೊಳ್ಳಬೇಕಾಗಿದೆ, ಈ ದಿಸೆಯಲ್ಲಿ ಸಂಘ-ಸಂಸ್ಥೆಗಳು ಸೇವೆ ಸಲ್ಲಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

    ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಮಾತನಾಡಿ, ಯಾದಗಿರಿ ಗಡಿ ಭಾಗದ ಜಿಲ್ಲೆಯಾಗಿದ್ದು, ಇಲ್ಲಿ ಹೆಚ್ಚು ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಭಾಷೆ ಅಭಿಮಾನ ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ, ಕನ್ನಡ ನಾಡು,ನುಡಿ, ಸಾಹಿತ್ಯ, ಸಾಂಸ್ಕೃತಿ ಬೆಳೆಸಲು ಇಂಥ ಸಂಘ, ಸಂಸ್ಥೆಗಳಿಗೆ ಸರಕಾರ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

    ಪ್ರಮುಖರಾದ ಮಹಾವೀರ ಲಿಂಗೇರಿ, ಎಂ.ಬಿ.ಸಗರ್, ಉದ್ಯಮಿ ಮಲ್ಲಿಕಾರ್ಜುನ ಸಿರಗೊಳ, ವೀರೇಶ್ ಆಚಾರ್ಯ ಅಧ್ಯಕ್ಷತೆ, ಮೈನುದ್ದೀನ್, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಚಂದ್ರರೆಡ್ಡಿ ತೆಲಗುರ್, ಮುದಕಪ್ಪ ಚಾಮನಾಳ, ಮೌನಿಶ್ ಪಂಚಾಳ, ಆದಯ್ಯ ಹಿರೇಮಠ, ಅಬ್ದುಲಸಾಬ್ ಕಿಲ್ಲನಕೇರಾ, ಮಂಜುನಾಥ ಬಡಿಗೇರಾ, ಸಂಸ್ಥೆಯ ಅಧ್ಯಕ್ಷ ದೇವಿಂದ್ರ ಧೋತ್ರೆ, ಕಾರ್ಯದರ್ಶಿ ಬಸವಲಿಂಗ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts