More

    ಕಲಾವಿದರಿಗಾಗಿ 150 ಕೋಟಿ ರೂ. ಅನುದಾನ ಮೀಸಲಿಡಲು ಒತ್ತಾಯ

    ದಾವಣಗೆರೆ: ರಾಜ್ಯ ಸರ್ಕಾರ ಕಲಾವಿದರಿಗೆ ನೆರವು ನೀಡಲು ಪ್ರಸಕ್ತ ಬಜೆಟ್ ನಲ್ಲಿ ಸುಮಾರು 150 ಕೋಟಿ ರೂ.ಅನುದಾನ ಮೀಸಲಿರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ನಿರ್ದೇಶಕ ಹಾಗೂ ಕೆಪಿಸಿಸಿ ರಾಜ್ಯ ವಕ್ತಾರ ಮಹಾಂತೇಶ ಹಟ್ಟಿ ಒತ್ತಾಯಿಸಿದರು.

    ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಬ್ಯಾಕೂಡ ಕನಕಶ್ರೀ ಪ್ರಕಾಶನದಿಂದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಸಹಯೋಗದಲ್ಲಿ ನಗರದ ರಂಗಮಹಲ್ ನಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಯುವ ಸಮ್ಮೇಳನ, ಸಾಂಸ್ಕೃತಿಕ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ರಾಜ್ಯದಲ್ಲಿ ಕೊರೋನ ಸಂದರ್ಭದಲ್ಲಿ ಕಲಾವಿದರು ತೀವ್ರ ಸಂಕಷ್ಟ ಅನುಭವಿಸಿದ್ದು, ಕಲಾವಿದರ ನೋವನ್ನು ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಬಳಿ ಬಿಂಬಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
    ಸಾಹಿತ್ಯ ಕ್ಷೇತ್ರದಲ್ಲಿ ಪ್ರೋತ್ಸಾಹಿಸಲು ಪುಸ್ತಕ ಪ್ರಾಧಿಕಾರ ಇದ್ದು, ಸರ್ಕಾರ ಪುಸ್ತಕಗಳನ್ನು ಕೊಂಡುಕೊಳ್ಳುವ ವ್ಯವಸ್ಥೆಯಿದೆ. ಹೀಗಾಗಿ ಕಲಾವಿದರು ಹಾಗೂ ಸಾಹಿತಿಗಳು ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಮತ್ತು ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸಲು ಹೊಸ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕರೆನೀಡಿದರು.
    ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಉಪನ್ಯಾಸ ನೀಡಿ ಮಹಿಳೆಯರು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸಮಾನವಾಗಿ ಸಾಧನೆ ಕೈಗೊಂಡಿದ್ದರೂ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿದ್ದಾರೆ. ದೌರ್ಜನ್ಯ ಪ್ರಕರಣಗಳು ಅವ್ಯಾಹತವಾಗಿ ನಡೆದಿವೆ ಎಂದು ವಿಷಾದಿಸಿದರು.
    ಸಮಾಜದಲ್ಲಿ ಪ್ರತಿದಿನ 600 ಕ್ಕೂ ಅಧಿಕ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಇದರಿಂದ ಲಿಂಗಾನುಪಾತ ಹೆಚ್ಚಾಗಿದೆ. ಇದೇರೀತಿ ಭ್ರೂಣ ಹತ್ಯೆ ಮುಂದುವರೆದರೆ ಪುರುಷರಿಗೆ ಮದುವೆಯಾಗಲು ಹೆಣ್ಣುಮಕ್ಕಳೇ ಸಿಗುವುದಿಲ್ಲ. ಇನ್ನು ವರದಕ್ಷಿಣೆ ಪಿಡುಗು ಸಹ ಇದ್ದು, ಸರ್ಕಾರದ ಕಾನೂನುಗಳು ಕಾಗದದ ಹುಲಿಗಳಾಗಿವೆ ಎಂದರು.
    ಮಹಿಳಾ ಶೋಷಣೆ ಮನೆಗಳಲ್ಲೆ ನಡೆಯುತ್ತಿದ್ದು, ತಾಯಂದಿರು ಲಿಂಗ ತಾರತಮ್ಯ ಮಾಡದೆ ಮಕ್ಕಳನ್ನು ಸಮಾನವಾಗಿ ನೋಡಿಕೊಳ್ಳಬೇಕು ಹಾಗೂ ಸಮಾನ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
    ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಮಹಾಸ್ವಾಮಿಗಳು ಸಾನ್ನಿಧ್ಯ ಹಾಗೂ ಹಾಸನ ಜಿಲ್ಲೆ ಯುವ ಸಾಹಿತಿ ರೇಷ್ಮಾ ಶೆಟ್ಟಿ ಗೊರೂರು ಅಧ್ಯಕ್ಷತೆ ವಹಿಸಿದ್ದರು. ಕನಕಶ್ರೀ ಪ್ರಕಾಶನ ಅಧ್ಯಕ್ಷ ಸಿದ್ರಾಮ ಎಂ. ನಿಲಜಗಿ, ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಕೆ.ಎನ್.ಶೈಲಜಾ, ಸಾಧನ ವೃದ್ದಾಶ್ರಮದ ಡಾ.ಪುಷ್ಪಲತಾ ಪವಿತ್ರರಾಜ್, ಸಮಾಜ ಸೇವಕಿ ಬಿ.ಜೆ.ಕವಿತಾ, ಲಲಿತ ಕಲಾ ಅಕಾಡಮಿ ಮಾಜಿ ಸದಸ್ಯ ಡಾ.ಬಸವರಾಜ ಗವಿಮಠ, ಹರಿಹರದ ಎಸ್.ಹೆಚ್.ಹೂಗಾರ, ಡಾ.ಬುರುಡೇಕಟ್ಟೆ ಮಂಜಪ್ಪ ಉಪಸ್ಥಿತರಿದ್ದರು. ಡಾ.ಜೆ.ಎಂ.ಬಾದಾಮಿ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts