More

    ಕಲಾದಗಿಯಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗತಿ ಜಾಥಾ

    ಕಲಾದಗಿ: ಪ್ರತಿಯೊಬ್ಬ ಭಾರತೀಯ ಪ್ರಜೆ ಸಂವಿಧಾನದ ಅರಿವು ಮಾಡಿಕೊಂಡಾಗ ಮಾತ್ರ ಅಂಬೇಡ್ಕರ್ ನಿರೀಕ್ಷೆಯಂತೆ ಸಮಾನತೆಯ ದೇಶವನ್ನು ಕಟ್ಟಲು ಸಾಧ್ಯ ಎಂದು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸಂಪತ್ ಲಮಾಣಿ ಹೇಳಿದರು.

    ಸಂವಿಧಾನ ಜಾಗೃತಿ ಜಾಥಾ ಗ್ರಾಮಕ್ಕಾಗಮಿಸಿದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಸ್ವಾತಂತ್ರೃ ನಂತರ ಈ ದೇಶದಲ್ಲಿ ಸಮಾನತೆ ಸೃಷ್ಟಿಯಾಗುವುದರಲ್ಲಿ ಬಾಬಾಸಾಹೇಬರು ಮತ್ತು ಅವರು ಬರೆದ ಸಂವಿಧಾನವೇ ಕಾರಣವಾಗಿದ್ದು, ನಾವೆಲ್ಲ ಸಂವಿಧಾನದ ಆಶಯಗಳನ್ನು ಪಾಲಿಸಬೇಕು ಎಂದರು.

    ಜಾಥಾದ ನೋಡೆಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಸಹಿರಾಬಾನು ನದಾಫ್ ಮಾತನಾಡಿ, ಸಂವಿಧಾನ ಜಾಗೃತಿ ಜಾಥಾ ಅರ್ಥಪೂರ್ಣವಾಗಿ ನಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

    ಗ್ರಾಪಂ ಅಧ್ಯಕ್ಷೆ ಖಾತುನಬೀ ರೋಣ, ಉಪಾಧ್ಯಕ್ಷ ಪಕೀರಪ್ಪ ಮಾದರ, ಜಾಥಾದ ನೋಡೆಲ್ ಅಧಿಕಾರಿ ಬಿ.ಜಿ.ಗೌಡರ, ಪಿಡಿಒ ಬಿ.ಎಲ್.ಹವಾಲ್ದಾರ, ಕಾರ್ಯದರ್ಶಿ ಎಂ.ಎಂ.ಪರಸಣ್ಣವರ, ಸಮಾಜ ಕಲ್ಯಾಣ ಇಲಾಖೆಯ ಬಿ.ಎನ್.ಮೇತ್ರಿ, ಗ್ರಾಮಲೆಕ್ಕಾಧಿಕಾರಿ ಸಂತೋಷಕುಮಾರ ತೇಲಿ, ಗುರುಲಿಂಗೇಶ್ವರ ಪಪೂ ಕಾಲೇಜಿನ ಉಪನ್ಯಾಸಕ ಎಂ.ವಿ.ಪರವಿಶೆಟ್ಟಿ, ಎಸ್.ಪಿ.ಸವದತ್ತಿ ವೇದಿಕೆಯಲ್ಲಿದ್ದರು.

    ಗ್ರಾಮದ ಸಾಯಿಬಾಬಾ ಮಂದಿರ ಬಳಿ ಸಂವಿಧಾನ ಜಾಗತಿ ಜಾಥಾವನ್ನು ಗ್ರಾಪಂನವರು, ವಿವಿಧ ಇಲಾಖೆಯವರು ಸ್ವಾಗತಿಸಿದರು. ನಂತರ ನಡೆದ ಮೆರವಣಿಗೆಯಲ್ಲಿ ಶಿರಗುಂಪಿಯ ಕಲಾವಿದರ ಕರಡಿ ಮಜಲು, ಸ್ಥಳೀಯ ಯುವಕರ ಕೋಲಾಟ ಜನರ ಗಮನ ಸೆಳೆದವು. ಕುಂಭಹೊತ್ತ ಮಹಿಳೆಯರು, ದೇಶಭಕ್ತರ ವೇಷಭೂಷಣ ತೊಟ್ಟ ಮಕ್ಕಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts