More

    ಕಲಬುರ್ಗಿ ಪಾಲಿಕೆ ಗದ್ದುಗೆಗೇರಿದ ಬಿಜೆಪಿ ಭರ್ಜರಿ ವಿಜಯೋತ್ಸವ

    ಕಲಬುರಗಿ: ತೀವ್ರ ಕುತೂಹಲ ಕೆರಳಿಸಿರುವ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಮೇಯರ್ ಆಗಿ ಬಿಜೆಪಿಯ ಪಾಲಿಕೆ ಸದಸ್ಯ ವಿಶಾಲ ದರ್ಗಿ ಮತ್ತು ಉಪಮೇಯರ್ ಅಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದು, ಬಿಜೆಪಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

    ನಗರದ ಇಂದಿರಾ ಸ್ಮಾರಕ ಭವನದಲ್ಲಿ ಆಯ್ಕೆಯ ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ 65 ಸದಸ್ಯರು ಹಾಜರಾಗಿದ್ದು, ಬಿಜೆಪಿಗೆ 33 ಮತ, ಜೆಡಿಎಸ್ ಬೆಂಬಲ ಸಿಕ್ಕರೂ ಕಾಂಗ್ರೆಸ್ 32 ಮತ ಪಡೆದು ಒಂದು ಮತದಿಂದ ಸೋಲು ಅನುಭವಿಸಿತು.

    ಐದು ವರ್ಷದ ನಂತರ ಪ್ರಥಮ ಪ್ರಜೆ ಆಯ್ಕೆಯಾಗಿದ್ದು, ಪಟಾಕಿ ಸಿಡಿ, ಗುಲಾಲ್ ಹಚ್ಚಿಕೊಂಡು ಸಂಭ್ರಮಿಸಿದರು.

    ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಣೆ ಜಾರಿಗೊಳಿಸಲಾಗಿತ್ತು.

    ಬಿಜೆಪಿ ಮೇಯರ್ ಗದ್ದುಗೆ ಏರಿದ್ದು, ಹೆಚ್ವಿನ ಸಂಖ್ಯಾಬಲ ಹೊಂದಿದರು ಕಾಂಗ್ರೆಸ್ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ.

    ಗೆಲುವಿನ ಕುರಿತು ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದರು.

    ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ನೇತೃತ್ವದಲ್ಲಿ ಗುಪ್ತಸ್ಥಳದಲ್ಲಿ ಸಭೆ ನಡೆಸಿದ ಬಿಜೆಪಿಯೂ ದರ್ಗಿ ಅವರನ್ನು ಆಯ್ಕೆ ಮಾಡಿದೆ.

    ವಿಶಾಲ್ ದರ್ಗಿ ಮತ್ತು ಕೃಷ್ಣಾ ನಾಯಕ ನಾಮಪತ್ರ ಸಲ್ಲಿಸಿದ್ದರು ಬಳಿಕ ಕೃಷ್ಣಾ ಹಿಂಪಡೆದರು. ಇನ್ನೂ ಕಾಂಗ್ರೆಸ್ ನಿಂದ ಸಚಿನ್ ಶಿರವಾಳ ಮತ್ತು ಪ್ರಕಾಶ ಕಪನೂರ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

    ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಮೇಯರ್ ಹಾಗೂ ಉತ್ತರ ಕ್ಷೇತ್ರಕ್ಕೆ ಉಪ ಮೆಯರ್ ಸ್ಥಾನ ಹಂಚಿಕೆ ಮಾಡುವ ಕುರಿತು ಬಿಜೆಪಿ ಮುಖಂಡರ ಕೋರ್ ಕಮೀಟಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts