More

    ಕರೊನಾ ಹೋಗಿಲ್ಲ, ಮುನ್ನೆಚ್ಚರಿಕೆ ವಹಿಸಿ

    ಚಿತ್ತಾಪುರ: ದಿನ ಕಳೆದಂತೆ ರಾಜ್ಯದಲ್ಲಿ ಕರೊನಾ ವ್ಯಾಪಕವಾಗಿ ಹರಡುತ್ತಿದ್ದು, ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಇನ್ನಷ್ಟು ಪರಿಣಾಮಕಾರಿಯಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಜಗಣ್ಣಗೌಡ ಪಾಟೀಲ್ ರಾಮತೀರ್ಥ ಸೂಚನೆ ನೀಡಿದರು.
    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಉತ್ತಮವಾಗಿ ಕೆಲಸ ಮಾಡಿದ್ದರಿಂದ ತಾಲೂಕಿನಲ್ಲಿ ಇಲ್ಲವರೆಗೂ ಕರೊನಾ ನಿಯಂತ್ರಣದಲ್ಲಿದೆ. ಇದೀಗ ಮತ್ತೆ ಸೋಂಕು ಹರಡುತ್ತಿದ್ದು, ಹೀಗಾಗಿ ಜನರಲ್ಲಿ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
    ತಾಲೂಕಿನ ದಂಡಗುಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಕಳೆದ 4-5 ತಿಂಗಳ ಹಿಂದೆ ಅಮಾನತಾಗಿದ್ದರು. ಅವರ ತನಿಖೆ ಪೂರ್ಣಗೊಳ್ಳುವ ಮುನ್ನವೇ ತನಿಖೆ ಕಾಯ್ದರಿಸಿ ಮತ್ತೆ ಅದೇ ಶಾಲೆಗೆ ನಿಯೋಜನೆ ಮಾಡಲಾಗಿದೆ. ಇದರಿಂದ ಸಾಕ್ಷಿಗಳು ನಾಶವಾಗುವ ಸಾಧ್ಯತೆಯಿದೆ. ಆದ್ದರಿಂದ ಆ ಶಿಕ್ಷಕರನ್ನು ದಂಡಗುಂಡದ ಶಾಲೆ ಹಾಗೂ ತಾಲೂಕಿನಲ್ಲಿ ನಿಯೋಜನೆ ಮಾಡಬೇಡಿ ಎಂದು ಸದಸ್ಯರು ಒತ್ತಾಯಿಸಿದರು.
    ಅವರ ತನಿಖೆ ಪೂರ್ಣಗೊಂಡಿಲ್ಲ ಅಂದಾಗ ಅದೇಗೆ ಅವರನ್ನು ಮತ್ತೆ ನಿಯೋಜನೆ ಮಾಡಿದಿರಿ ? ತನಿಖೆ ಮುಗಿಯುವವರೆಗೂ ಆ ಶಿಕ್ಷಕರನ್ನು ನಿಯೋಜನೆ ಮಾಡಿಕೊಳ್ಳಬೇಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧ್ಯಕ್ಷ ರಾಮತೀರ್ಥ ತಾಕೀತು ಮಾಡಿದರು.
    15ನೇ ಹಣಕಾಸು ಯೋಜನೆಯಡಿ 1.50 ಕೋಟಿ ರೂ. ಅನುದಾನದ ಕ್ರಿಯಾ ಯೋಜನೆ ರೂಪಿಸುವಂತೆ ನಿರ್ಣಯಿಸಲಾಯಿತು.
    ಶಹಾಬಾದ್, ಕಾಳಗಿ ತಾಪಂ ಸದಸ್ಯರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಅಧಿಕಾರಿಗಳಾದ ಡಾ. ಸುರೇಶ ಮೇಕಿನ್, ಚನ್ನಬಸಪ್ಪ ಹಿರೇಮಠ, ಶಂಕ್ರಮ್ಮ ಢವಳಗಿ, ಗಿರೀಶ ರಂಜೋಳಕರ್, ಸಿದ್ದಣ್ಣ ಅಣಬಿ, ಸಂಜೀವಕುಮಾರ ಮಾನಕರ್, ವಿಠ್ಠಲರಾವ ಕದಂ, ರಾಜಕುಮಾರ ರಾಠೋಡ್ ಪ್ರಗತಿ ವರದಿ ಓದಿದರು.
    ತಾಪಂ ಉಪಾಧ್ಯಕ್ಷ ಹರಿನಾಥ ಚವ್ಹಾಣ್, ತಹಸೀಲ್ದಾರ್ ಉಮಾಕಾಂತ ಹಳ್ಳೆ, ಸಿಪಿಐ ಕೃಷ್ಣಪ್ಪ ದೇವಕಲ್ಲೂರ, ಇಒ ಡಾ. ಬಸಲಿಂಗಪ್ಪ ಡಿಗ್ಗಿ, ಸದಸ್ಯರಾದ ಬಸವರಾಜ ಹೊಸಳ್ಳಿ, ಬಸವರಾಜ ಲೋಕನಳ್ಳಿ, ಭಾಗಪ್ಪ ಯಾದಗಿರ, ವಿಜಯಕುಮಾರ ನಿಂಗದೆ, ಮಲ್ಲಣ್ಣ ಸಣಮೊ, ರವಿ ಪಡ್ಲಾ, ಸುಧೀರ ಬಿಜಾಪುರಕರ್, ರೇವಣಸಿದ್ದಪ್ಪ ಮಡಕಿ, ವಿಜಯಲಕ್ಷ್ಮೀ ರಾಠೋಡ್, ಮೆರಾಜ್ ಬೇಗಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts