More

    ಕರೊನಾ ವಿರುದ್ಧ ಹೋರಾಟಕ್ಕೆ ಸಹಕಾರ ಅಗತ್ಯ


    ಚಿಂಚೋಳಿ: ಕೋವಿಡ್- 19 ಸೋಂಕಿನ ವಿರುದ್ಧ ಹೋರಾಟದಲ್ಲಿ ಪ್ರತಿ ನಾಗರೀಕರ ಸಹಕಾರ ಅವಶ್ಯಕವಾಗಿದೆ ಎಂದು ಸಿಪಿಐ ಮಹಾಂತೇಶ ಪಾಟೀಲ್ ಹೇಳಿದರು.
    ಮಾಸ್ಕ್ ದಿನಾಚರಣೆ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದ ಅವರು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮಾಸ್ಕ್ ಧರಿಸಬೇಕು ಎಂದು ಕರೆ ನೀಡಿದರು.
    ಪಿಎಸ್ಐ ರಾಜಶೇಖರ ರಾಠೋಡ್, ಪ್ರಮುಖರಾದ ರೇವಣಸಿದ್ದಪ್ಪ, ಮರಲಿಂಗಪ್ಪ, ವೀರಭದ್ರಪ್ಪ, ಅನೀಲ, ಮಲ್ಲಿಕಾರ್ಜುನ ಪಾಟೀಲ್ ಇದ್ದರು.
    ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಸಂತೋಷ ರಾಠೋಡ್ ನೇತೃತ್ವದಲ್ಲಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಲಾಯಿತು. ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ , ಎಎಸ್ಐ ಕೆ.ಎಸ್.ಮೇಳಕುಂದಿ, ಪ್ರಮುಖರಾದ ಮಂಜುನಾಥ, ಅಶೋಕ, ಶಫಿಯೋದ್ದಿನ್, ಮಲ್ಲಿಕಾರ್ಜುನ, ಬೀರಪ್ಪ ಪೂಜಾರಿ, ಜಡೆಪ್ಪ, ಮಸ್ತಾಫ್ ಷಾ, ಶ್ರವಣಕುಮಾರ, ವಸಂತಕುಮಾರ, ಪ್ರಭುಶೇಖರ, ಈಶ್ವರ ಇದ್ದರು.
    ರಟಕಲ್ನಲ್ಲಿ ಪಿಎಸ್ಐ ಶಿವಶಂಕರ ಸುಬೇದಾರ ನೇತೃತ್ವದಲ್ಲಿ ಮಾಸ್ಕ್ ದಿನ ಆಚರಿಸಲಾಯಿತು. ಶ್ರೀ ಸಿದ್ಧರಾಮ ಸ್ವಾಮೀಜಿ, ಶ್ರೀ ರೇವಣಸಿದ್ಧ ಶಿವಾಚಾರ್ಯರು, ಎಎಸ್ಐ ಮಸ್ತಾನ್, ಪ್ರಮುಖರಾದ ಲಕ್ಷ್ಮೀಕಾಂತ, ರೇವಣಸಿದ್ದಪ್ಪ, ವಸಂತ, ಮೋಲಪ್ಪ, ಶಿವರಾಜರೆಡ್ಡಿ, ಜಗನ್ನಾಥ, ಉಮಾದೇವಿ, ಕಲ್ಯಾಣಿ ತಳಕೇರಿ, ಶಂಕರ ಚೌಕಾ, ಕಾಂತು ಸೀಗಿ, ಮುರುಗಯ್ಯ ಪುರಾಣಿಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts