More

    ಕರೊನಾಗೆ ಸಂತಪುರ ಜಿಪಂ ಸದಸ್ಯ ಸೇರಿ ಇಬ್ಬರು ಬಲಿ

    ಬೀದರ್​: ಔರಾದ್ ತಾಲೂಕಿನ ಸಂತಪುರ ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯ ಅನೀಲ ಗುಂಡಪ್ಪ (50) ಭಾನುವಾರ ಕರೊನಾ ರೋಗದಿಂದ ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಔರಾದ್ ತಾಲೂಕಿನ ಜೊನ್ನಿಕೇರಿ ಗ್ರಾಮದವರು. ಔರಾದ್ ಮಾಜಿ ಶಾಸಕ ಗುಂಡಪ್ಪ ಬಿರಾದಾರ ಅವರ ಏಕೈಕ ಪುತ್ರ. ಕರೊನಾ ಸೋಂಕಿನಿಂದಾಗಿ ಇವರು ಕಳೆದ ಎರಡು ವಾರಗಳಿಂದ ಹೈದರಾಬಾದ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ತಂದೆ ಗುಂಡಪ್ಪ ಹಾಗೂ ತಾಯಿಗೂ ಕರೊನಾ ತಗುಲಿತ್ತು. ತಂದೆ ಗುಣಮುಖರಾದರೆ, ತಾಯಿ ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಇಲ್ಲಿಗೆ ಸಮೀಪದ ನಾರಾಂಜಾ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಚಂದ್ರಕಾಂತ ವಗದಾಳೆ(48) ಸಹ ಕರೊನಾದಿಂದ ಭಾನುವಾರ ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದವರು. ಮನ್ನಳ್ಳಿ ಪಿಕೆಪಿಎಸ್ ಅಧ್ಯಕ್ಷರೂ ಇದ್ದರು. ಒಂದು ವಾರದಿಂದ ಇವರು ಕರೊನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts