More

    ಕರೆಂಟ್ ಕಣ್ಣಾಮುಚ್ಚಾಲೆ ನಿರಂತರ

    ಮುಳಗುಂದ: ಎಲ್ಲೆಡೆ ಸಮೃದ್ಧವಾಗಿ ಮಳೆ ಸುರಿಯುತ್ತಿದ್ದು ಅಂತರ್ಜಲ ಮಟ್ಟವೂ ವೃದ್ಧಿಯಾಗಿದೆ. ಕೊಳವೆ ಬಾವಿಗಳಲ್ಲಿ ಸಮರ್ಪಕ ನೀರಿದೆ. ಆದರೆ, ಮುಳಗುಂದ ಗ್ರಾಮದ ಜನರು ಮಾತ್ರ ನೀರಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ವಣವಾಗಿದೆ.

    ಗ್ರಾಮಸ್ಥರ ಈ ಸಮಸ್ಯೆಗೆ ಪ್ರಮುಖ ಕಾರಣ ಕರೆಂಟ್. ಊರಲ್ಲಿ ದಿನಕ್ಕೆ ನಾಲ್ಕಾರು ತಾಸು ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದು ನೀರು ಪೂರೈಕೆಗೆ ತೊಂದರೆಯಾಗುತ್ತಿದೆ.

    ನಿರ್ವಣವಾಗದ ಗ್ರಿಡ್: ಸುಮಾರು ವರ್ಷಗಳಿಂದ ಪಟ್ಟಣದಲ್ಲಿ ಗ್ರಿಡ್ ನಿರ್ವಿುಸಿ ವಿದ್ಯುತ್ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎನ್ನುವ ಸ್ಥಳೀಯರ ಬೇಡಿಕೆ ಇನ್ನೂ ಈಡೇರಿಲ್ಲ. ಒಂದೂವರೆ ವರ್ಷದ ಹಿಂದೆ ಮುಳಗುಂದಕ್ಕೆ ಮಂಜೂರಾದ ಗ್ರಿಡ್ ಅನ್ನು ಬೆಳ್ಳಟ್ಟಿ ಗ್ರಾಮದಲ್ಲಿ ನಿರ್ವಿುಸಿ ಪಟ್ಟಣದ ವಿದ್ಯುತ್ ಸಮಸ್ಯೆಯನ್ನು ಜೀವಂತವಾಗಿಡಲಾಗಿದೆ. ಪಟ್ಟಣ ವ್ಯಾಪ್ತಿಯ ಎಲ್ಲಿಯಾದರೂ ವಿದ್ಯುತ್ ನಿಲುಗಡೆಯಾದರೆ ಸಮಸ್ಯೆ ಹುಡುಕುತ್ತಾ 20 ಕಿಮೀ ದೂರದ ಗದಗವರೆಗೆ ಹೋಗಬೇಕು. ಅದಕ್ಕೆ ಸುಮಾರು ಎರಡು ತಾಸಾದರೂ ಬೇಕು. ಅಷ್ಟರಲ್ಲಿಯೇ ಮತ್ತೇನಾದರೂ ಸಮಸ್ಯೆ ಕಂಡುಬಂದರೆ ಮತ್ತೆ ತಾಸುಗಟ್ಟಲೆ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಹಲವಾರು ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗಿದೆ.

    ಭೂಮಿ ಖರೀದಿಗೆ ಮೀನಮೇಷ: ಗ್ರಿಡ್ ನಿರ್ವಣಕ್ಕಾಗಿ ಇಂಧನ ಇಲಾಖೆ ಭೂಮಿ ಖರೀದಿಸಲು ಹಿಂದೇಟು ಹಾಕುತ್ತಿದೆ. ಇಲಾಖೆಯು ಸರ್ಕಾರ ನಿಗದಿಪಡಿಸಿದ ದರಕ್ಕೆ ಭೂಮಿ ಖರೀದಿಸಲು ಹೋದರೆ ಯಾವ ರೈತರೂ ಭೂಮಿ ಕೊಡುತ್ತಿಲ್ಲ. ಹೀಗಾದರೆ ಮುಳಗುಂದಕ್ಕೆ ಗ್ರಿಡ್ ನಿರ್ವಣವಾಗುವುದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಗದಂತಾಗಿದೆ. ಕಳೆದ ವರ್ಷ ರೈತರೊಬ್ಬರು ಭೂಮಿ ಕೊಡಲು ಮುಂದಾಗಿದ್ದರು. ಅಧಿಕಾರಿಗಳು ಕೂಡ ಮೇಲಧಿಕಾರಿಗಳಿಗೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸಿದರೂ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.

    ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ವಿದ್ಯುತ್ ಕಣ್ಣಾ ಮುಚ್ಚಾಲೆಯಾಡುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು. ಸಮರ್ಪಕವಾಗಿ ವಿದ್ಯುತ್ ಪೂರೈಸಿ ಸಾರ್ವಜನಿಕರಿಗಾಗುವ ತೊಂದರೆ ನಿವಾರಿಸಬೇಕು.
    | ಎಂ.ಎಚ್. ಕಣವಿ, ಮುಳಗುಂದ ನಿವಾಸಿ

    ಮುಳಗುಂದದಲ್ಲಿ ಗ್ರಿಡ್ ನಿರ್ವಿುಸುವ ಬಗ್ಗೆ ಕಳೆದೆರಡು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಯಾವದೇ ಮಂಜೂರಾತಿ ದೊರೆತಿಲ್ಲ. ಈಗಾಗಲೇ ನಮ್ಮ ಸಿಬ್ಬಂದಿ ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಗ್ರಾಹಕರಿಗೂ ವಿದ್ಯುತ್ ಕಡಿತದಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ರ್ಚಚಿಸಲಾಗುತ್ತದೆ.
    | ನಾಗರಾಜ ಕುರಿ, ಎಇಇ ಗದಗ ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts