More

    ಕನ್ನಡ ಶಾಲೆಗಳ ಉನ್ನತೀಕರಣಗೊಳಿಸಿ

    ವಿಜಯಪುರ :

    ಕನ್ನಡ ಶಾಲೆಗಳ ಉನ್ನತೀಕರಿಸುವಂತೆ ಒತ್ತಾಯಿಸಿ ಜೈ ಕರ್ನಾಟಕ ಸಂಘಟನೆ ವತಿಯಿಂದ ಗುರುವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘಟನೆ ರಾಜ್ಯ ಕಾರ್ಯದರ್ಶಿ ರಾಕೇಶ ಕಲ್ಲೂರ ಅವರು ಮಾತನಾಡಿ, ಕನ್ನಡ ನಾಡು, ನುಡಿ, ಜಲ ರಕ್ಷಣೆ ಹಾಗೂ ಉಳುವಿಗಾಗಿ ಸಂಘಟನೆಯು ಹಗಲಿರುಳು ಶ್ರಮಿಸುತ್ತಿದ್ದು, ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುವಂತಹ ಹಂತಕ್ಕೆ ತಲುಪಿವೆ. ಕನ್ನಡ ಶಾಲೆಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದೊರೆಯುವ ಸೌಲಭ್ಯಗಳಾದ, ಸುಸಜ್ಜಿತ ಕೊಠಡಿಗಳು, ಸುಸಜ್ಜಿತ ಶಾಲೆಯ ವಾತಾವರಣ, ಗುಣಮಟ್ಟದ ಕಲಿಕೆ, ಪಠ್ಯಪುಸ್ತಕ, ಶಾಲೆಗಳಿಗೆ ಸಿ.ಸಿ. ಕ್ಯಾಮೆರಾ, ಗುಣಮಟ್ಟದ ಶೌಚಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ರಾಜ್ಯದಲ್ಲಿರುವ ಪ್ರತಿಯೊಂದು ಶಾಲೆಯನ್ನು ಉನ್ನತೀಕರಣಗೊಳಿಸಬೇಕು. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಯೆತ್ತ ತಮ್ಮ ಗಮನಹರಿಸುವಂತೆ ಎಲ್ಲ ರೀತಿಯ ಸಕಲ ಸೌಲಭ್ಯಗಳನ್ನು ಒದಗಿಸಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳಸಬೇಕು. ಒಂದು ವೇಳೆ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರವು ಮುತುವರ್ಜಿ ವಹಿಸದೆ ಹೋದಲ್ಲಿ ಸಂಘಟನೆಯು ರಾಜ್ಯಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಜಿಲ್ಲಾಧ್ಯಕ್ಷ ಬಿ.ಬಿ.ಇಂಗಳಗಿ, ವಿಶ್ವನಾಥ ತೋಟದ, ಸಂತೋಷ ಶಹಾಪೇಟಿ, ನವೀನಕುಮಾರ ಮೇಲಶೆಟ್ಟಿ, ಆಸೀ ಕಾಖಂಡಕಿ, ಯಾಸೀನ ಶಾರಪ್ಯಾದೆ, ಪರಶುರಾಮ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts