More

    ಕನಕ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ

    ತಾಳಿಕೋಟೆ: ಹಾಲುಮತ ಸಮಾಜದವರು ಪ್ರಾಮಾಣಿಕವಾಗಿ ಹಾಲಿನಂತೆ ಎಲ್ಲರೊಂದಿಗೆ ಬೆರೆತು ಪ್ರೀತಿ- ಪ್ರೇಮ ಬೆಳೆಸಿಕೊಂಡವರಾಗಿದ್ದಾರೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

    ತಾಲೂಕು ಕುರುಬರ ಸಂಘ, ಹಾಲುಮತ ನೌಕರರ ಸಂಘ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸಮುದಾಯದ ಅಪೇಕ್ಷೆಯಂತೆ ಮುಂಬರುವ ದಿನಮಾನಗಳಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ಶಾಸಕ ನಾಡಗೌಡ ಅವರ ಜತೆಗೂಡಿ ಶೀಘ್ರ ಜಾಗ ಗುರುತಿಸಲು ಪ್ರಾಮಾಣಿಕ ಪ್ರಯತ್ನ ಮಾಡುತೇನೆ. ಸಮಾಜ ಬಾಂಧವರು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಬೆಳೆಸಬೇಕು. ಕನಕದಾಸರ ನಡೆ ನುಡಿಯನ್ನು ಅರಿತು ಸಮಾಜದ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು ಎಂದರು.

    ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಶರಣರ ಮೂಲ ಹುಡುಕಬಾರದು. ಆದರೆ ಅವರ ನಡೆ ನುಡಿಗಳನ್ನು ಅರಿತು ನಡೆಯಬೇಕು. ಭಕ್ತ ಕನಕದಾಸರು ದೇವರ ಮೇಲಿಟ್ಟ ಪ್ರೀತಿ ಅಪಾರವಾಗಿತ್ತು ಎಂದರು.

    ಸಾಹಿತಿ ಮೋಹನ ಮೇಟಿ ಮಾತನಾಡಿ, ದೀಪದ ಬೆಳಕು ಬೇಕು, ಆದರೆ ದೀಪದ ಚಿತ್ರದಿಂದ ಕತ್ತಲು ಬೆಳಗಲಾರದು. ಎಲ್ಲ ಸಮುದಾಯಗಳಿಗೆ ರಾಜಕೀಯ ಪ್ರಭುತ್ವ ದೊರೆಯಬೇಕು ಎಂಬುದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಆಸೆಯಾಗಿತ್ತು. ಶಿಕ್ಷಣವೆಂಬುದು ಹುಲಿಯ ಹಾಲಿನಂತೆ. ಶಿಕ್ಷಣ ಕಲಿತವರು ಹುಲಿಯಂತೆ ಘರ್ಜನೆ ಮಾಡುವರು. ಕನಕದಾಸರ ಸಂದೇಶದಂತೆ ಎಲ್ಲರೂ ಒಂದೇ ಎಂಬುದಾಗಿದೆ ಎಂದರು.

    ಸರೂರ ಅಗತೀರ್ಥ ಹಾಲುಮತ ಗುರುಪೀಠದ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮಿಗಳು, ಡಿ.ಜೆ.ಬಾಗೇವಾಡಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

    ಬಂಡೆಪ್ಪನಹಳ್ಳಿಯ ಸಣ್ಣೆಕ್ಕೆಪ್ಪ ಪೂಜಾರಿ, ಕೆಂಚೆಪ್ಪ ಪೂಜಾರಿ, ಸರೂರ ಹುಚ್ಚಯ್ಯ ಶ್ರೀಗಳು, ಮುದ್ದೇಬಿಹಾಳ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ತಾಳಿಕೋಟೆ ಘಟಕದ ಅಧ್ಯಕ್ಷ ಸಾಯಬಣ್ಣ ಆಲ್ಯಾಳ, ನೌಕರರ ಸಂಘದ ಅಧ್ಯಕ್ಷ ಡಾ.ಐ.ಬಿ.ತಳ್ಳೋಳ್ಳಿ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ನಿವೃತ್ತ ಎಸ್.ಪಿ. ಎಸ್.ಬಿ.ಕಟ್ಟಿಮನಿ, ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ, ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ, ನಿಂಗಪ್ಪಗೌಡ ಬಪ್ಪರಗಿ, ರಾಜು ಕೆಂಭಾವಿ, ಎಂ.ಎಸ್.ಅಮಲ್ಯಾಳ, ಮಲ್ಲಣ್ಣ ಹಿರೇಕುರುಬರ, ಸದಾಶಿವ ಪೂಜಾರಿ, ಮಡಿವಾಳಪ್ಪ ಬ್ಯಾಲ್ಯಾಳ, ಸಿದ್ದು ಬುಳ್ಳಾ, ಹಾಲುಮತ ಸಮಾಜದ ಜಿಲ್ಲಾ ಅಧ್ಯಕ್ಷ ರಾಜು ಕಂಚಾಗೆ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಜೈಭೀಮ ಮುತ್ತಗಿ, ಎಸ್.ಕೆ.ಹರನಾಳ, ಎಸ್.ಎಸ್.ಹೂಲ್ಲೂರ, ಗೌರಮ್ಮ ಮುತ್ತತ್ತಿ, ಗುರು ತಾರನಾಳ, ಮಡಿವಾಳಪ್ಪ ಬ್ಯಾಲ್ಯಾಳ, ವೀರೇಶಗೌಡ ಬಾಗೇವಾಡಿ, ಬಿ.ವೈ.ಮೇಟಿ, ಕೆ.ಎಚ್.ಪಾಟೀಲ, ಮಡುಸಾಹುಕಾರ ಬಿರಾದಾರ, ಮಡಿವಾಳಪ್ಪ ಅಂಬಳನೂರ, ಶಿವರಾಜ ಪೂಜಾರಿ ಇತರರಿದ್ದರು. ಸುರೇಶ ವಾಲಿಕಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts