More

    ಕಣ್ಣೀರಿಟ್ಟ ಜಿಲ್ಲಾ ಸರ್ಜನ್ ಡಾ.ಶಿವಾನಂದ

    ಕಾರವಾರ: ಬಾಣಂತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರ ಮುಖಂಡರು ಹಾಗೂ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಅವರ ನಡುವೆ ಸೋಮವಾರ ಮಾತಿನ ಚಕಮಕಿ ನಡೆಯಿತು.

    ಬಾಣಂತಿ ಗೀತಾ ಬಾನಾವಳಿ ಸಾವಿಗೆ ಸಂಬಂಧಿಸಿದಂತೆ ತನಿಖಾ ತಂಡದ ಅಧ್ಯಕ್ಷರಾದ ಜಿಪಂ ಸಿಇಒ ಎಂ.ರೋಶನ್ ಅವರು ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಸರ್ಜನ್ ಸೇರಿ ಕ್ರಿಮ್್ಸ ಆಸ್ಪತ್ರೆಯ 22 ಜನರ ಹೇಳಿಕೆ ಪಡೆದರು. ಇದೇ ಸಂದರ್ಭದಲ್ಲಿ ಜಿಪಂ ಸಿಇಒ ಭೇಟಿ ಮಾಡಲು ಆಗಮಿಸಿದ್ದ ಮೀನುಗಾರ ಮುಖಂಡು, ಮಹಿಳೆಯರು ಹಾಗೂ ಡಾ.ಕುಡ್ತಲಕರ್ ಅವರ ಅಕಸ್ಮಾತ್ ಮುಖಾಮುಖಿಯಾಯಿತು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು. ಕಣ್ಣೀರು ಹಾಕಿದ ಸರ್ಜನ್: ‘ನಾನು ಗೀತಾ ಬಾನಾವಳಿ ಅವರಿಗೆ ಎರಡು ಸುರಕ್ಷಿತ ಹೆರಿಗೆ ಮಾಡಿಸಿದ್ದೇನೆ. ಸೆ. 3 ರಂದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲೂ ಆಕೆಯನ್ನು ಉಳಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದೇನೆ. ನಾನೇನು ತಪ್ಪು ಮಾಡಿಲ್ಲ ’ಎಂದು ಸರ್ಜನ್ ಶಿವಾನಂದ ಕುಡ್ತಲಕರ್ ಕಣ್ಣೀರು ಹಾಕಿದರು. ಕೆಲ ಮುಖಂಡರು ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

    ನಮಗೆ ನ್ಯಾಯ ಬೇಕು: ‘ನಮಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ವೈದ್ಯರ ಮೇಲೆ ಅಪಾರ ಗೌರವವಿದೆ. ಆದರೆ, ಗೀತಾ ಬಾನಾವಳಿ ಸಾವಿಗೆ ನ್ಯಾಯ ಸಿಗಬೇಕು. ಅನಸ್ತೇಶಿಯಾ ಕೊಟ್ಟವರು ಯಾರು ಎಂಬುದು ಗೊತ್ತಾಗಬೇಕು’ ಎಂದು ಮುಖಂಡ ರಾಜು ತಾಂಡೇಲ ಡಾ.ಕುಡ್ತಲಕರ್ ಅವರಿಗೆ ಸ್ಪಷ್ಟನೆ ನೀಡಿದರು. ನ್ಯಾಯಾಂಗ ತನಿಖೆಗೆ ಮನವಿ: ಗೀತಾ ಬಾನಾವಳಿ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಮೀನುಗಾರರ ಮುಖಂಡರು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್ ಹಾಗೂ ಸಿಇಒ ಎಂ.ರೋಶನ್ ಅವರಿಗೆ ಮನವಿ ಮಾಡಿ ದರು. ಜಿ.ಪಿ. ತಾರಿಕರ್, ವಿನಾಯಕ ಹರಿಕಂತ್ರ, ರಾಘು ನಾಯ್ಕ, ಎಲಿಷಾ ಎಲಕಪಾಟಿ, ರೋಶನಿ ಮಾಳ್ಸೇಕರ್, ಶಿಲ್ಪಾ ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts