More

    ಕಣಬರ್ಗಿ ಬಡಾವಣೆಗೆ ಆಡಳಿತಾತ್ಮಕ ಅನುಮೋದನೆ

    ಬೆಳಗಾವಿ: ನಗರದ ಹೊರವಲಯದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ನಿರ್ಮಿಸುತ್ತಿರುವ ಕಣಬರ್ಗಿ ಹೊಸ ಬಡಾವಣೆ ಅಭಿವೃದ್ಧಿಪಡಿಸಲು 127.71 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಗೆ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

    ಕಣಬರ್ಗಿಯಲ್ಲಿನ 159.23 ಎಕರೆ ಪ್ರದೇಶದಲ್ಲಿ ಯೋಜನೆ ಸಂಖ್ಯೆ 61ರಲ್ಲಿ ವಸತಿ ಬಡಾವಣೆ ಅಭಿವೃದ್ಧಿ ಪಡಿಸಲು 177. 45 ಕೋಟಿ ರೂ. ಅಂದಾಜು ಮೊತ್ತದ ಪಟ್ಟಿ ಪರಿಷ್ಕರಿಸಿ 127.71 ಕೋಟಿ ರೂ. ಪರಿಷತ ಅಂದಾಜು ಪಟ್ಟಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ ಅಡಿಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬಡಾವಣೆ ನಿರ್ಮಾಣದ ಪ್ರಸ್ತಾವನೆಯಲ್ಲಿರುವ 157.01 ಎಕರೆ ಪೈಕಿ 29.15 ಎಕರೆ ಜಮೀನಿಗೆ ಹೈಕೋರ್ಟ್​ನಿಂದ ತಡೆಯಾಜ್ಞೆ ಇರುವುದರಿಂದ ಕಾಮಗಾರಿ ಟೆಂಡರ್​ ಕರೆಯುವ ಸಮಯದಲ್ಲಿ 29.15 ಎಕರೆ ಜಮೀನು ಬಿಟ್ಟು ಬಾಕಿ ಉಳಿಯುವ ಜಮೀನಿಗೆ ಮಾತ್ರ ಟೆಂಡರ್​ ಕರೆಯಬೇಕು. ಈ ಯೋಜನೆಯನ್ನು ಶ್ರೀ ಅನುಷ್ಠಾನಗೊಳಿಸಬೇಕು. ಅಲ್ಲದೆ, ಈ ಬಡಾವಣೆಗಾಗಿ ಸರ್ಕಾರದಿಂದ ಅನುದಾನ ಕೇಳುವಂತಿಲ್ಲ ಎಂದು ಸರ್ಕಾರ ಷರತ್ತು ವಿಧಿಸಿದೆ.

    ಕಣಬರ್ಗಿ ಹೊಸ ಬಡಾವಣೆ ಅಭಿವೃದ್ಧಿ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿರುವ 127.71 ಕೋಟಿ ರೂ. ಅಂದಾಜು ಮೊತ್ತದಲ್ಲಿಯೇ 5.50 ಕೋಟಿ ರೂ. ವೆಚ್ಚದಲ್ಲಿ ನೆಲಸಮಮಟ್ಟ ಮಾಡುವುದು, ನಿವೇಶನ ಗುರುತಿಸುವುದು. ರಸ್ತೆ ನಿರ್ಮಾಣ, ಡಾಂಬರೀಕರಣಕ್ಕೆ 3.60 ಕೋಟಿ ರೂ., ಆರ್​ಸಿಸಿ ಚರಂಡಿ ನಿರ್ಮಾಣಕ್ಕೆ 2.87 ಕೋಟಿ ರೂ., ಕುಡಿಯುವ ನೀರು, ಪೈಪ್​ಲೈನ್​ ಇತರ ಕಾಮಗಾರಿಗೆ 5.21 ಕೋಟಿ ರೂ. ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಸರ್ಕಾರವು ಸೂಚನೆ ನೀಡಿದೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಮತ್ತು ಪ್ರತಿಯೊಬ್ಬರಿಗೂ ನಿವೇಶನ ಸೌಲಭ್ಯ ಕಲ್ಪಿಸಲು ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ವು 1997ರಲ್ಲಿ 333.11ಎಕರೆ ಪ್ರದೇಶದಲ್ಲಿ ರಾಮತೀರ್ಥ ನಗರ ಮತ್ತು 2005&06ರಲ್ಲಿ 60.15 ಎಕರೆ ಪ್ರದೇಶದಲ್ಲಿ ಕುಮಾರಸ್ವಾಮಿ ಲೇಔಟ್​ ನಿರ್ಮಾಣ ಮಾಡಿತ್ತು. ಬಳಿಕ ಹೊಸ ಬಡಾವಣೆ ನಿರ್ಮಾಣ ಮಾಡಿರಲಿಲ್ಲ. ಇದೀಗ 14 ವರ್ಷದ ಬಳಿಕ ಬುಡಾದಿಂದ ಹೊಸ ಬಡಾವಣೆ ನಿರ್ಮಾಣ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts