More

    ಕಡಕೋಳ ಗ್ರಾಮ ಬಿಡುತ್ತಿದ್ದಾರೆ ಜನ

    ಶಿರಹಟ್ಟಿ: ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತಾಲೂಕಿನ ಕಡಕೋಳ ಗ್ರಾಮಸ್ಥರು ಮನೆಗಳಿಗೆ ಬೀಗ ಹಾಕಿ ಹೊಲ, ಗದ್ದೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.

    ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮದ ಯುವಕನೊಬ್ಬ ಜು. 15 ರಂದು ಬೆಂಗಳೂರಿನಿಂದ ಕಡಕೋಳ ಗ್ರಾಮಕ್ಕೆ ಬಂದ. ಈತನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸಂಪರ್ಕದಲ್ಲಿದ್ದ ಮೂವರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಅವರನ್ನು ವರವಿ ರಾಣಿ ಚೆನ್ನಮ್ಮ ಕಿತ್ತೂರ ವಸತಿ ಶಾಲೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಭಯಭೀತರಾದ ಓಣಿಯ ನಿವಾಸಿಗಳು ಕರೊನಾದಿಂದ ಜೀವ ಉಳಿಸಿಕೊಳ್ಳಲು ಮನೆಗಳನ್ನು ತೊರೆದು ತಮಗೆ ಬೇಕಾದ ಸಾಮಾನು, ದಿನಸಿ ವಸ್ತುಗಳ ಸಮೇತ ಗದ್ದೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಶಾಂತವಾಗಿದ್ದ ಊರಲ್ಲಿ ಭಯ:

    ನಮ್ಮೂರು ಶಾಂತ ಇತ್ತು. ಆದರೆ, ಬೆಂಗಳೂರಿನಿಂದ ಗ್ರಾಮಕ್ಕೆ ಯುವಕ ಬಂದಿದ್ದ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಗ್ರಾಮದ ಜನರಲ್ಲಿ ಭಯ ಆವರಿಸಿದ್ದು, ಬದುಕಿದರೆ ಸಾಕು ಎಂಬ ನಿರ್ಧಾರದಿಂದ ಮನೆ ತೊರೆದು ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts