More

    ಕಕ ಭಾಗದಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಒತ್ತು

    ಯಾದಗಿರಿ: ಕಲ್ಯಾಣ ಕನರ್ಾಟಕ ಭಾಗದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದಲ್ಲಿನ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಕನರ್ಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ವಿನೂತನ ಕಾರ್ಯ ಯೋಜನೆ ಹಾಕಿಕೊಂಡಿದೆ ಎಂದು ವಿವಿ ಕುಲಪತಿ ಪ್ರೋ.ಎಸ್.ವಿ. ಹಲ್ಸೆ ತಿಳಿಸಿದರು.

    ಕಕ ಭಾಗದ ಉನ್ನತ ಶಿಕ್ಷಣದ ಸಾಕ್ಷರತೆ ಕೇವಲ ಶೇ.11 ರಷ್ಟಿದೆ. ಈ ಪ್ರಮಾಣ ಹೆಚ್ವಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿರುವ ಕಾರಣ ಸಾಕಷ್ಟು ಹೊಸ ಕಾರ್ಯಕ್ರಮ ಜಾರಿಗೆ ತರಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ವಿವಿಯ 23 ಪ್ರಾದೇಶಿಕ ಕೇಂದ್ರಗಳಿದ್ದು, ಈ ಭಾಗದಲ್ಲಿ ಇಲ್ಲ. ಅಲ್ಲದೆ ಮೂಲಸೌಕರ್ಯ ಕೊರತೆ ಅನುಭವಿಸುತ್ತಿದ್ದೇವೆ. ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರಿನಲ್ಲಿ ಪ್ರಾದೇಶಿಕ ಕೇಂದ್ರಗಳ ಸ್ಥಾಪನೆಗೆ ಸಕರ್ಾರಕ್ಕೆ ಪತ್ರ ಬರೆಯಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಕನಿಷ್ಠ 2 ರಿಂದ 5 ಎಕರೆ ಜಮೀನು ಒದಗಿಸುವಂತೆ ಕೋರಲಾಗಿದೆ. ಒಂದು ವೇಳೆ ಅಗತ್ಯ ಜಮೀನು ಸಿಕ್ಕಲ್ಲಿ ವಿವಿ ಕನಿಷ್ಠ 20 ಕೋಟಿ ರೂ.ಅನುದಾನದಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪಿಸಲಾಗುವುದು ಇದರಿಂದ ಈ ಭಾಗದ ವಿದ್ಯಾಥರ್ಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ವಿವಿ ಅಡಿಯಲ್ಲಿ ಒಟ್ಟು 64 ಕೋಸರ್ುಗಳಿದ್ದು 149 ಅಧ್ಯಯನ ಕೇಂದ್ರಗಳಿವೆ ಎಂದು ಹೇಳಿದರು.

    ಕಕ ಭಾಗದ ಜಿಲ್ಲೆಗಳ ಪೈಕಿ ಬೀದರ್ ನಲ್ಲಿ ಉನ್ನತ ಶಿಕ್ಚಣದಲ್ಲಿ ಶೇ.15 ರಷ್ಟು ಸಾಕ್ಷರತೆ ಇದೆ. ಕಲಬುರಗಿಯಲ್ಲಿ ಶೇ 19, ಯಾದಗಿರಿ ಹಾಗೂ ರಾಯಚೂರಿನಲ್ಲಿ ತಲಾ ಶೇ.11ರಷ್ಟಿದೆ. ಹಾಗಾಗಿ, ತಕ್ಷಣವೇ ಯಾದಗಿರಿ ಹಾಗೂ ರಾಯಚೂರಿನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಿ ಈ ಭಾಗದ ಅಭ್ಯಥರ್ಿಗಳಿಗೆ ಉನ್ನತ ಶಿಕ್ಷಣ ಒದಗಿಸುವ ಮೂಲಕ ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ವಿವಿಯ ಸಂಗಮೇಶ ಹಿರೇಮಠ, ರಘುನಾಥರಡ್ಡಿ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts