More

    ಔರಾದ್ನಲ್ಲಿ ಹೋಳಾ ಹಬ್ಬದ ಸಂಭ್ರಮ

    ಔರಾದ್: ಪಟ್ಟಣದಲ್ಲಿ ಶುಕ್ರವಾರ ರೈತರು ಎತ್ತು, ಹೋರಿ, ಆಕಳುಗಳನ್ನು ಅಲಂಕಾರ ಮಾಡಿ ಗ್ರಾಮ ದೇವತೆ ಶ್ರೀ ಅಮರೇಶ್ವರ ಮಂದಿರ ಹಾಗೂ ಶ್ರೀ ಹನುಮಾನ ಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೋಳಾ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.

    ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ. ಕೃಷಿಕರು ಅವುಗಳನ್ನು ಪೂಜಿಸಿ ಗೌರವಿಸುತ್ತಾರೆ. ರಾಸುಗಳಿಗೆ ಗೌರವಿಸುವ ಸಲುವಾಗಿಯೇ ಕಲ್ಯಾಣ ಕನರ್ಾಟಕ ಭಾಗದಲ್ಲಿ ಹೋಳಾ ಹಬ್ಬ ಆಚರಿಸಲಾಗುತ್ತದೆ.

    ಬೆಳಗ್ಗೆ ಎತ್ತು, ಹೋರಿ, ಆಕಳು ಮತ್ತು ಸಣ್ಣ ಕರುಗಳಿಗೆ ಮನೆಯಲ್ಲಿ ಸ್ನಾನ ಮಾಡಿಸಿ ಅವುಗಳ ಮೈಮೇಲೆ ರಂಗು ರಂಗಿನ ಬಣ್ಣದ ಚಿತ್ತಾರ ಬಿಡಿಸಿದರು. ಕೊಂಬುಗಳಿಗೆ ವಿವಿಧ ಬಣ್ಣ ಸವರಿ ವಿವಿಧ ರೀತಿಯಲ್ಲಿ ಸಿಂಗರಿಸಿದರು. ಕೊರಳಲ್ಲಿ ಘಂಟೆ, ಗೆಜ್ಜೆ ಸರ, ನೂಲಿನ ದಾರದಲ್ಲಿ ಮಾಡಿದ ಗೊಂಡೆ, ಮತ್ತಾಟಿ, ಹೂವು ಮತ್ತು ಬಲೂನ್ ಹಾಗೂ ವಿವಿಧ ಗಾತ್ರದಲ್ಲಿ ತಯಾರಿಸಿದ ಗೊಂಬೆಗಳನ್ನು ಕಟ್ಟಿ ಎತ್ತು ಮತ್ತು ಹೋರಿಗಳಿಗೆ ವಿಶೇಷ ಅಲಂಕಾರ ಮಾಡಿದರು. ಎತ್ತುಗಳ ಕೊಂಬುಗಳಿಗೆ ಕೊಡಬೇಳೆ ಹಾಕಿ ಹುಗ್ಗಿ, ಬೆಲ್ಲದ ನೀರು ಮತ್ತು ಕರಿದ ಪದಾರ್ಥಗಳನ್ನು ನೈವೇದ್ಯ ರೂಪದಲ್ಲಿ ಅಪರ್ಿಸಿ ಪೂಜೆ ಸಲ್ಲಿಸಿದರು.

    ಎತ್ತುಗಳು ಸಾಲಾಗಿ ಮನೆಯತ್ತ ತೆರಳುವ ಮಾರ್ಗದಲ್ಲಿ ಮಂದಿರದ ಎದುರು ಅಡ್ಡಲಾಗಿ ಕಟ್ಟಿದ ಹಗ್ಗವನ್ನು ಬಾರುಕೋಲಿನಿಂದ ಹೊಡೆದು ತುಂಡು ಮಾಡುವ ಮೂಲಕ ಸಂಪ್ರದಾಯವನ್ನು ಪಾಲಿಸಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗ್ರಾಮದ ಪ್ರಮುಖರು ಹನುಮಾನ ಮಂದಿರಕ್ಕೆ ಆಗಮಿಸಿ ಎತ್ತುಗಳ ಮೆರವಣಿಗೆ ನೋಡಿ ಆನಂದಿಸಿದರು. ನಂತರ ಶ್ರೀ ಅಮರೇಶ್ವರ ದೇವಸ್ಥಾನದಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಎತ್ತುಗಳ ಮೆರವಣಿಗೆ ನಡೆಸಲಾಯಿತು. ಉತ್ತಮವಾಗಿ ಶೃಂಗಾರ ಮಾಡಿದ ಎತ್ತುಗಳ ಮಾಲೀಕರಿಗೆ ಸ್ಥಳೀಯ ಮುಖಂಡ ಕಲ್ಲಪ್ಪ ದೇಶಮುಖ ಅವರಿಂದ ಬಹುಮಾನ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts