More

    ಒಣಗುತ್ತಿರುವ ಕಬ್ಬು ನಾಶಪಡಿಸಿದ ಕೃಷಿಕ

    ಢವಳಗಿ: ವರುಣನ ಕೃಪೆಯು ಸಕಾಲಕ್ಕೆ ಆಗದೆ ಇರುವುದರಿಂದ ಕಬ್ಬು ಬೆಳೆ ಒಣಗುತ್ತಿದ್ದು, ಅದನ್ನು ರೈತರು ನಾಶಪಡಿಸಲು ಮುಂದಾಗಿದ್ದಾರೆ.
    ಮುದ್ದೇಬಿಹಾಳ ತಾಲೂಕಿನಲ್ಲಿ ಪ್ರಸಕ್ತ ವರ್ಷ ಅಂದಾಜು 20 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಹಾಕಿದ್ದಾರೆ. ಮುದ್ದೇಬಿಹಾಳ ಭಾಗದಲ್ಲಿ 1,500 ನಾಲತವಾಡ ಭಾಗದಲ್ಲಿ 3ಸಾವಿರ, ಢವಳಗಿ, ತಾಳಿಕೋಟೆ ಭಾಗದಲ್ಲಿ 8ಸಾವಿರ, ತಂಗಡಗಿ ಭಾಗದಲ್ಲಿ 8ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಈ ವರ್ಷ ಮಳೆ ಇಲ್ಲದರಿಂದ ರೈತರ ಜಮೀನಿನಲ್ಲಿ ನೀರು ಕಡಿಮೆ ಇರುವುದರಿಂದ ಕಬ್ಬು ನೆಲ ಬಿಟ್ಟು ಮೇಲಕ್ಕೆ ಎಳುತ್ತಿಲ್ಲ. ಹಲವು ಪ್ರದೇಶದಲ್ಲಿ ನೀರಿಲ್ಲದೆ ಸಂಪೂರ್ಣ ಒಣಗಿ ಹೋದ ಕಬ್ಬನ್ನು ರೈತರು ದನಕರುಗಳಿಗೆ ಕಡಿದು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಟ್ರಾೃಕ್ಟರ್ ಮೂಲಕ ರೋಟರ್ ಹೊಡೆಯುತ್ತಿದ್ದಾರೆ.

    ಪ್ರತಿವರ್ಷ ಒಂದು ಎಕರೆಗೆ 60ರಿಂದ 70ಟನ್ ಇಳುವರಿ ಸುಲಭವಾಗಿ ಬರುತ್ತಿತ್ತು. ಆದರೆ ಈ ಸಾರಿ ಒಂದು ಎಕರೆಗೆ 20ರಿಂದ 30 ಟನ್ ಬರುವುದು ಕಷ್ಟ ಎನ್ನುತ್ತಿದ್ದಾರೆ ರೈತರು. ಸಾಲ ಮಾಡಿ ಗೊಬ್ಬರ ಕಳೆ ತೆಗೆಸಲು ಮಾಡಿದ ಖರ್ಚು ಬರುವುದು ಕಷ್ಟವಾಗಿದೆ. ಸರ್ಕಾರ ಕೂಡಲೇ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಬರಗಾಲದ ಹಾನಿ ಎಂದು ಘೋಷಿಸಿ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಢವಳಗಿ ಭಾಗದ ರೈತರು ಒತ್ತಾಯಿಸಿದ್ದಾರೆ. ಢವಳಗಿ ಗ್ರಾಮದಲ್ಲಿ ಸುಮಾರು 100ಕ್ಕೂ ಹೆಚ್ಚು ಎಕರೆ ಕಬ್ಬನ್ನು ರೈತರು ರೋಟರ್ ಹೊಡೆಸಿ ನಾಶ ಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕು.
    ಗುರುನಾಥಗೌಡ ಬಿರಾದಾರ, ಪ್ರಗತಿಪರ ರೈತ ಢವಳಗಿ
    
    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts