More

    ಒಟ್ಟಾಗಿ ಹಳಿಯಾಳ ಅಭಿವೃದ್ಧಿ ಮಾಡೋಣ

    ಹಳಿಯಾಳ: ಪಟ್ಟಣ ಅಭಿವೃದ್ಧಿಯ ಮಹತ್ತರ ಜವಾಬ್ದಾರಿಯನ್ನು ಪಟ್ಟಣವಾಸಿಗಳು ನಮಗೆ ನೀಡಿದ್ದು, ಅವರ ವಿಶ್ವಾಸ ನಿರೀಕ್ಷೆಗೆ ತಕ್ಕಂತೆ ನಾವೆಲ್ಲರೂ ಪಕ್ಷಾತೀತವಾಗಿ ಒಂದಾಗಿ ಸೇರಿ ಪಟ್ಟಣದ ಅಭಿವೃದ್ಧಿಯನ್ನು ಮಾಡೋಣ ಎಂದು ಪುರಸಭೆಯ ಅಧ್ಯಕ್ಷ ಅಜರ್ ಬಸರಿಕಟ್ಟಿ ಹೇಳಿದರು.

    ಪುರಸಭೆಯ ಸಭಾಭನವದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

    ವಿ.ಪ. ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ, ರಾಜಕಾರಣ ಚುನಾವಣೆಗೆ ಸೀಮಿತಗೊಳಿಸಿ. ಈಗ ಏನಿದ್ದರೂ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಯೋಚಿಸಿ ಎಂದರು.

    ಬಿಜೆಪಿ ಸದಸ್ಯ ಉದಯ ಹೂಲಿ ಮಾತನಾಡಿ, ಪಟ್ಟಣದ ಅಭಿವೃದ್ಧಿಯ ವಿಷಯದಲ್ಲಿ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಭ್ರಷ್ಟಾಚಾರ, ಅವ್ಯವಹಾರ, ಕಾಮಗಾರಿಯಲ್ಲಿ ಕಳಪೆತನ ಇತ್ಯಾದಿಗಳಿಗೆ ಸದಾ ನಮ್ಮ ವಿರೋಧವಿರಲಿದೆ ಎಂದರು.

    ಸ್ಮಶಾನ: ಸಭೆಯಲ್ಲಿ ಸ್ಮಶಾನ ಅಭಿವೃದ್ಧಿಯ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಉದಯ ಹೂಲಿ ಪಟ್ಟಣದಲ್ಲಿರುವ ಸರ್ವ ಸಮಾಜಗಳ ಸ್ಮಶಾನಗಳನ್ನು ನವೀಕರಣಗೊಳಿಸಿ ಅಭಿವೃದ್ಧಿಗೊಳಿಸಿ. ನೀರು ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಕಲ್ಪಿಸಿರಿ ಎಂದರು. ಈ ಪ್ರಸ್ತಾವನೆಯನ್ನು ಸರ್ವ ಸದಸ್ಯರು ಸಮ್ಮತಿಸಿದರು. ವಿಪ ಸದಸ್ಯ ಘೊಟ್ನೇಕರ ಮಾತನಾಡಿ ಹೊರ ಜಿಲ್ಲೆ, ತಾಲೂಕಿನವರಿಗೆ ಪುರಸಭೆಯ ಕಾಮಗಾರಿಯ ಗುತ್ತಿಗೆಯನ್ನು ನೀಡುವುದು ಬೇಡ. ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ನೀಡೋಣ ಎಂದರು.

    ಸದಸ್ಯರಾದ ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ ಮಾತನಾಡಿದರು. ಸಭೆಯ ಆರಂಭದಲ್ಲಿ ಲಾಕ್​ಡೌನ್ ಸಮಯದಲ್ಲಿ ಮೃತರಾದ ಪುರಸಭೆಯ ಮಾಜಿ ಅಧ್ಯಕ್ಷ ಶ್ರೀಕಾಂತ ಹೂಲಿ ಅವರಿಗೆ ಶ್ರದ್ಧಾಂಜಲಿ ಕೊರಲಾಯಿತು. ನೂತನ ಸದಸ್ಯರನ್ನು ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಪುಷ್ಪ ನೀಡಿ ಸ್ವಾಗತಿಸಿದರು. ಉಪಾಧ್ಯಕ್ಷೆ ಸುವರ್ಣಾ ಮಾದರ, ಆಡಳಿತ ಮತ್ತು ಪ್ರತಿಪಕ್ಷದ ಸರ್ವ ಸದಸ್ಯರು ಇದ್ದರು. ಪುರಸಭೆ ಇಂಜಿನಿಯರ್ ಹರೀಶ ಗೌಡಾ, ಪರಿಸರ ಇಂಜಿನಿಯರ್ ದರ್ಶಿತಾ ಬಿ.ಎಸ್., ಕಂದಾಯ ಅಧಿಕಾರಿ ಅಶೋಕ ಸಾಳೆಣ್ಣನವರ, ಪರಶುರಾಮ ಮೊಹಿತೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts