More

    ಒಂದೇ ಕುಟುಂಬದ ಮೂವರ ದುರ್ಮರಣ; ಗಂಗಾಪುರ ಗೇಟ್ ಬಳಿ ಬೈಕ್‌ಗೆ ಕಾರು ಡಿಕ್ಕಿ

    ನಂದಗುಡಿ: ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ 75 ಗಂಗಾಪುರ ಗೇಟ್ ಬಳಿ ಸೋಮವಾರ ಬೆಳಗ್ಗೆ ಬೈಕಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

    ಕೋಲಾರ ತಾಲೂಕು ಬೆಳ್ಳೂರು ಗ್ರಾಮದ ತಂದೆ, ಮಗ ಹಾಗೂ ಸಹೋದರ ಸ್ವಗ್ರಾಮದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಿಬಿಎಂಪಿಯಲ್ಲಿ ನೌಕರನಾಗಿದ್ದ ನಾರಾಯಣಸ್ವಾಮಿ (33) ಮಗ ಮನೋಜ್ (15) ಹಾಗೂ ಸಹೋದರ ನವೀನ್ (25) ಮೃತರು. ಮತ್ತೋರ್ವ ಬಾಲಕ ನರಸಿಂಹ (12) ಗಂಭೀರವಾಗಿ ಗಾಯಗೊಂಡಿದ್ದಾನೆ. ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts