More

    ಐತಿಹಾಸಿಕ ಕೋಟೆ ಅಭಿವೃದ್ಧಿಗೆ ಬದ್ಧ


    ಯಾದಗಿರಿ: ರಾಜ್ಯದಲ್ಲಿನ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿ ಸಕರ್ಾರ ಗಂಭೀರ ಚಿಂತನೆ ನಡೆಸಿದ್ದು, ಪ್ರಾಚೀನ ಪರಂಪರೆಯ ಕುರುಹುಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಲು ನಾವು ಬದ್ಧರಾಗಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್ಕೆ ಪಾಟೀಲ್ ತಿಳಿಸಿದರು.

    ನಗರದ ಹೃದಯ ಭಾಗದಲ್ಲಿನ ಐತಿಹಾಸಿಕ ಕೋಟೆಗೆ ಭೇಟಿ ನೀಡಿ, ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾದಗಿರಿ ಭೌಗೋಳಿಕವಾಗಿ ಸಣ್ಣದಿದ್ದರೂ ಇತಿಹಾಸ, ಪರಂಪರೆ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ತನ್ನದೇಯಾದ ಕೊಡುಗೆ ನೀಡಿದೆ. ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿನ ದೇಗುಲಗಳು ಹಂಪಿಯನ್ನೂ ಮೀರಿಸುತ್ತವೆ ಎಂದು ಬಣ್ಣಿಸಿದರು.

    ನಮ್ಮ ಪೂರ್ವಜರು ನಮಗಾಗಿ ಬಿಟ್ಟುಹೋದ ಈ ಅಮೂಲ್ಯವಾದ ಆಸ್ತಿಯನ್ನು ಜತನ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ನಾನು ಇಲ್ಲಿಗೆ ಭೇಟಿ ನೀಡುವ ಮೊದಲು ಕೋಟೆಯ ಇತಿಹಾಸ ಅಧ್ಯಯನ ಮಾಡಿದ್ದೇನೆ. ಯಾದಗಿರಿ ಬೆಟ್ಟದ ಮೇಲೆ ನಿಂತು ಕೆಳಗಿನ ಊರನ್ನು ನೋಡಿದರೆ ಪ್ರಕೃತಿ ನಮಗೆ ಎಂಥ ವರ ನೀಡಿದೆ ಎಂಬುದು ಅರಿವಿಗೆ ಬರುತ್ತದೆ ಎಂದು ಹೇಳಿದರು.

    ಈ ಕೋಟೆಯ ಅಭಿವೃದ್ಧಿಗಾಗಿ ಹೈದರಾಬಾದ ಮೂಲಕ ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ. ಅವರಿಗೆ ನಗರದ ಜನತೆ, ಜಿಲ್ಲಾಡಳಿತ ಸಹಕಾರ ನೀಡಬೇಕು. ಬೆಟ್ಟದಲ್ಲಿ ಗಲೀಜು ಮಾಡಬಾರದು. ಯುವ ಪೀಳಿಗೆಗೆ ಇತಿಹಾಸದ ಸ್ಮಾರಕಗಳು ಜ್ಞಾನದ ಕಣಜವಾಗಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts