More

    ಐಐಟಿ ಸಹಯೋಗದಲ್ಲಿ ವಿಟಿಯು ವೆಬಿನಾರ್

    ಕಲಬುರಗಿ: ಅಲಹಾಬಾದ್ (ಪ್ರಯಾಗ್ರಾಜ್) ಐಐಟಿ ಸಹಯೋಗದಲ್ಲಿ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರಿಗಾಗಿ ಈಗಾಗಲೇ ಶುರುವಾಗಿರುವ ವೆಬಿನಾರ್ ದಿ. 7ರವರೆಗೆ ನಡೆಯಲಿದೆ. ಖ್ಯಾತನಾಮರಾಗಿರುವ ತಜ್ಞರು ಶೈಕ್ಷಣಿಕ ಉನ್ನತೀಕರಣ ಕುರಿತು ಉಪನ್ಯಾಸ ನೀಡುತ್ತಿದ್ದಾರೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿಯ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಪ್ರೊ.ಬಸವರಾಜ ಗಾದಗೆ ತಿಳಿಸಿದರು.
    ಐಐಟಿ ನಿರ್ದೇಶಕರಾಗಿರುವ ಕರ್ನಾಟಕದವರೇ ಅಗಿರುವ ಪ್ರೊ.ಪಿ.ನಾಗಭೂಷಣ ದಿಕ್ಸೂಚಿ ಭಾಷಣ ಮಾಡಿ ಚಾಲನೆ ನೀಡಿದ್ದಾರೆ. ದೇಶದ ವಿವಿಧ ಕಡೆಗಳಲ್ಲಿನ ಪರಿಣಿತರು ಆನ್ಲೈನ್ನಲ್ಲಿ ಗೋಷ್ಠಿಗಳನ್ನು ನಡೆಸಿಕೊಡುತ್ತಿದ್ದಾರೆ. ಇದರಲ್ಲಿ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು ಪಾಲ್ಗೊಂಡು ತಮ್ಮ ಜ್ಞಾನದ ಕ್ಷೀತಿಜವನ್ನು ವಿಸ್ತರಿಸಿಕೊಳ್ಳವುದರ ಜತೆಗೆ ಹೊಸ ಆವಿಷ್ಕಾರಗಳ ಬಗ್ಗೆ ಅಪ್ಡೇಟ್ ಆಗುತ್ತಿದ್ದಾರೆ ಎಂದು ಮಂಗಳವಾರ ನಗರದಲ್ಲಿರುವ ವಿಟಿಯು ರಿಜನಲ್ ಸೆಂಟರ್ನಲ್ಲಿ ಪತ್ರಕರ್ತರಿಗೆ ತಿಳಿಸಿದರು.
    ಗೂಗಲ್ ಮೀಟ್ನಲ್ಲಿ 250 ಪ್ರಾಧ್ಯಾಪಕರು ಭಾಗಿಯಾಗುತ್ತಿದೆ. ಅಲ್ಲದೆ ಯು ಟ್ಯೂಬ್ ಲಿಂಕ್ ಸಹ ಇರಲಿದೆ. ಹೀಗೆ ಸಾವಿರಕ್ಕೂ ಅಧಿಕ ಉಪನ್ಯಾಸಕರು ಭಾಗವಹಿಸುತ್ತಿದ್ದಾರೆ. ಉಪನ್ಯಾಸಕರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಪ್ರತ್ಯೇಕ ಗೋಷ್ಠಿಯನ್ನು ನಡೆಸುತ್ತಿರುವುದು ವೆಬಿನಾರ್ನ ವಿಶೇಷತೆಯಾಗಿದೆ. ದೇಶದಲ್ಲಿಯೇ ವಿಭಿನ್ನ ಪ್ರಯೋಗವಾಗಿದೆ ಎಂದು ಗಾದಗೆ ಹೇಳಿದರು. ಕುವೆಂಪು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ, ಐಐಟಿ ಅಲಹಾಬಾದ್ನ ಪ್ರಾಧ್ಯಾಪಕ ಪ್ರೊ.ಉಮಾಶಂಕರ್ ತಿವಾರಿ, ಎಂಐಟಿ ಮೈಸೂರಿನ ಪ್ರೊ.ಎಸ್.ಮುರಳಿ, ಪೆಸಿಟ್ ಎಂಜಿನಿಯರಿಂಗ್ ಕಾಲೇಜಿನ ಪ್ರೊ.ಸುಭಾಷ್ ಕುಲಕಣರ್ಿ, ಅಲಹಾಬಾದ್ ಐಐಟಿಯ ಡಾ. ಸತೀಶಕುಮಾರ್ ಸಿಂಗ್, ಪ್ರೊ.ಶೇಖರ್ ವಮರ್ಾ, ಐಐಟಿ ರೂಕರ್ೆಲಾದ ಪ್ರೊ.ಪಾರ್ಥ ಪ್ರತಿಮ ರಾಯ್, ಅಲಹಾಬಾದ್ ಐಐಟಿಯ ಡಾ.ಸೋನಾಲಿ ಅಗರವಾಲ್, ಡಾ.ವೀರೇಂದ್ರ ಸಿಂಗ, ಡಾ.ಮಹಮ್ಮದ ಜಾವೇದ, ಮೈಸೂರು ವಿವಿಯ ಪ್ರೊ.ಡಿ.ಎಸ್.ಗುರು, .ಆರ್.ಬಾಲಸುಬ್ರಮಣಿಯನ್ ಸೇರಿದಂತೆ ಅನೇಕರು ಉಪನ್ಯಾಸ ನೀಡುವರು ಎಂದು ತಿಳಿಸಿದರು.

    ಆ.17ರಿಂದ ಪರೀಕ್ಷೆ
    ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಅಂತಿಮ ವರ್ಷದ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆಗಸ್ಟ್ 17ರಿಂದ 30ರವರೆಗೆ ಪರೀಕ್ಷೆ ನಡೆಸಲಿದ್ದು, ಸೆಪ್ಟೆಂಬರ್ನಲ್ಲಿ ತರಗತಿಗಳು ಪ್ರಾರಂಭವಾಗಲಿವೆ. ಈ ಪರೀಕ್ಷೆಗಳಿಗೆ ವಿದ್ಯಾಥರ್ಿಗಳು ಬರೆಯಬಹುದಾಗಿದೆ. ಅಲ್ಲದೆ ನಂತರ ಪರೀಕ್ಷೆ ನಡೆಸಿದಾಗ ಹಾಜರಾದರೂ ಹಿಂಬಾಕಿ ಅಥವಾ ರಿಪಿಟಸರ್್ ವಿದ್ಯಾಥರ್ಿ ಎಂದು ಪರಿಗಣಿಸಲ್ಲ. ಅವರು ಮೊದಲ ಸಲ ಪರೀಕ್ಷೆ ಬರೆಯುವ ವಿದ್ಯಾರ್ಥಿ ಎಂದು ಪರಿಗಣಿಸಲಾಗುತ್ತದೆ ಎಂದು ಪ್ರಾದೇಶಿಕ ಕೇಂದ್ರದ ನಿದರ್ೇಶಕ ಡಾ.ಬಸವರಾಜ ಗಾದಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts