More

    ಐಎಂಇಆರ್‌ನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ

    ಬೆಳಗಾವಿ: ಕೆಎಲ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಎಜುಕೇಷನ್ ಆ್ಯಂಡ್ ರಿಸರ್ಚ್ ವತಿಯಿಂದ ಕೆಎಲ್‌ಎಸ್ ಐಎಂಇಆರ್‌ನಲ್ಲಿ ಶುಕ್ರವಾರ ಬಿಸಿನೆಸ್ ಇನ್ನೋವೇಶನ್ ಮತ್ತು ಸಸ್ಟೈನಬಿಲಿಟಿ, ಎ ರೋಡ್ ಮ್ಯಾಪ್ ಫಾರ್ ಬಿಸಿನೆಸ್ ಎಕ್ಸಲೆನ್ಸ್ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಜರುಗಿತು. ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಆಡಳಿತ ಮಂಡಳಿ ಸದಸ್ಯ ಡಾ.ಅರವಿಂದ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ವ್ಯವಹಾರ ಭವಿಷ್ಯದ ಬೆಳವಣಿಗೆಗೆ ಸುಸ್ಥಿರತೆಯ ಪಾತ್ರ ಕುರಿತು ವಿವರಿಸಿದರು. ಪ್ರಪಂಚದ ಭವಿಷ್ಯದ ಪೀಳಿಗೆಗೆ ಪ್ರಮುಖವಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸುವ ಪ್ರಾಮುಖ್ಯತೆ ಕುರಿತು, ಉದ್ಯಮ ಮತ್ತು ದೇಶದ ಆರ್ಥಿಕತೆಯ ಬೆಳವಣಿಗೆಗೆ ವ್ಯಾಪಾರ, ಸುಸ್ಥಿರತೆ ನಡುವಿನ ಸಹಯೋಗದ ಮಹತ್ವ ಪ್ರಸ್ತಾಪಿಸಿದರು. ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಎಸ್ ಐಎಂಇಆರ್ ಅಧ್ಯಕ್ಷ ಆರ್.ಎಸ್.ಮುತಾಲಿಕ, ಉದ್ಯಮ ಮತ್ತು ಆರ್ಥಿಕತೆಯ ಪ್ರಸ್ತುತ ಸಂದರ್ಭದಲ್ಲಿ ನಾವೀನ್ಯತೆ ಮತ್ತು ವ್ಯಾಪಾರ ಸುಸ್ಥಿರತೆಯ ಪಾತ್ರ ಮತ್ತು ಪ್ರಾಮುಖ್ಯತೆ ಪ್ರಸ್ತಾಪಿಸಿದರು. ಕೆಎಲ್‌ಎಸ್ ಐಎಂಇಆರ್ ನಿರ್ದೇಶಕ ಡಾ.ಆರೀಫ್ ಶೇಖ್, ಪಿ.ಎಂ. ಕುಲಕರ್ಣಿ, ಡಾ.ಶೈಲಜಾ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts