More

    ಏತ ನೀರಾವರಿ ಯೋಜನೆಗೆ ಅನುಮೋದನೆ

    ಚಿಕ್ಕೋಡಿ: ತಾಲೂಕಿನ ಚಿಂಚಣಿಯಿಂದ ಖಡಕಲಾಟದವರೆಗಿನ 6,400 ಹೆಕ್ಟೇರ್​ ಬಂಜರು ಒಣ ಭೂಮಿಯನ್ನು ನೀರಾವರಿಗೆ ಒಳಪಡಿಸುವ 382 ಕೋಟಿ ರೂ. ಅಂದಾಜು ವೆಚ್ಚದ ಮಹಾಲಕ್ಷಿ$್ಮ ಏತ ನೀರಾವರಿ ಯೋಜನೆಗೆ, ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು ನನ್ನ 12 ವರ್ಷಗಳ ಸುದೀರ್ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

    ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಕನ್ನಡ ಭವನದಲ್ಲಿ ಚಿಂಚಣಿ ಕುಪ್ಪಾಣವಾಡಿ ಗ್ರಾಮಸ್ಥರು ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮೊದಲ ಹಂತದಲ್ಲಿ 100 ಕೋಟಿ ರೂ. ಅನುದಾನ ಸರ್ಕಾರ ಒದಗಿಸಿದ್ದು ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವುದು ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದೆ ಎಂದರು.

    ರೈತರ ಬಹು ನೀರಿತ ಮಹಾಲಕ್ಷಿ$್ಮ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಜುಲೈ 4 ರಂದು ಜರುಗಿದ ಕರ್ನಾಟಕ ನೀರಾವರಿ ನಿಗಮದ 99ನೇ ಮಂಡಳಿ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯತೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್​ ಜಲಸಂಪನ್ಮೂಲ ಇಲಾಖೆ ಮಂಡಳಿ ಸದಸ್ಯರನ್ನೊಳಗೊಂಡ ನಿಗಮದ ಮಂಡಳಿಯು 384 ಕೋಟಿ ರೂ. ವೆಚ್ಚದ ಮಹಾಲಕ್ಷಿ$್ಮ ಏತ ನೀರಾವರಿ ಯೋಜನೆ ಕೈಗೊಳ್ಳಲು ಸಮ್ಮತಿ ಸೂಚಿಸಿ ಯೋಜನೆಗೆ ಮೊದಲ ಹಂತದಲ್ಲಿ 100 ಕೋಟಿ ರೂ. ಅನುದಾನ ಒದಗಿಸಿದೆ ಎಂದು ಹೇಳಿದರು.

    ಈ ಯೋಜನೆಗೆ 2012&13ನೇ ಸಾಲಿನಲ್ಲಿ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಸಮ ಪ್ರಾಧಿಕಾರದಿಂದ ಕೃಷ್ಣಾ ಕೊಳ್ಳದಲ್ಲಿ ಲಭ್ಯವಿರುವ 0.92 ಟಿಎಂಸಿ ನೀರಿನ ಹಂಚಿಕೆಯನ್ನು ಮಾಡಿಸಿದ್ದನ್ನು ಇಲ್ಲಿ ನೆನೆಯಬೇಕು. ಇಂದು ದಶಕದ ನಂತರ ಇವರೆ ಮುಖ್ಯ ಮಂತ್ರಿಗಳಾಗಿದ್ದ ಸುಸಮಯದಲ್ಲಿ ಮಹಾಲಕ್ಷಿ$್ಮ ಏತ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿರುವುದು ವಿಶೇಷ ಎಂದರು.

    ಸಾನ್ನಿಧ್ಯ ವಹಿಸಿದ್ದ ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ನಾಲ್ಕೆ$ದು ಗ್ರಾಮಗಳಿಗೆ ಸೀಮಿತವಾಗಿದ್ದ ಮಹಾಲಕ್ಷಿ$್ಮ ಏತ ನೀರಾವರಿ ಅನುಷ್ಠಾನಕ್ಕೆ, ನಿರಂತರ ಹೋರಾಟದ ಲವಾಗಿ ಯೋಜನೆಯನ್ನು 17 ಗ್ರಾಮಗಳಿಗೆ ಮಂಜೂರು ಮಾಡಿಸಿದ ಈ ಭಾಗದ ರೈತರ ಜನನಾಯಕ ಮಹಾಂತೇಶ ಕವಟಗಿಮಠ ಅವರು ಅಧಿಕಾರ ಇರಲಿ ಇಲ್ಲದೆ ಇರಲಿ ಅವರ ಸಮಾಜ ಸೇವೆ ರೈತಪರವಾಗಿದೆ ಎಂದು ಹೇಳಿದರು. ಅಭಯ ಪಾಟೀಲ, ರಾಮಗೌಡ ಪಾಟೀಲ, ಲಕ್ಷ$್ಮಣ ಡಂಗೇರ, ಸುಭಾಷ ಚೌಗಲೆ, ಪಾಲಪ್ಪ ಮಾದಪ್ಪಗೋಳ, ಸೌರಭ ಪಾಟೀಲ, ಸುಕಮಾರ ಅಪ್ಪಾಜಿಗೋಳ ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts