More

    ಏಕಾಗ್ರತೆಯಿಂದ ಓದಿದರೆ ಸಾಧನೆ ಸುಲಭ

    ನಾಗರಮುನ್ನೋಳಿ: ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವಲ್ಲಿ ತಂದೆ-ತಾಯಿ ಹಾಗೂ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಇಂಚಗೇರಿ ಸಂಸ್ಥಾನ ಮಠ ಕ್ಯಾರಗುಡ್ಡ (ಹುಕ್ಕೇರಿ)ಯ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮಕ್ಕಳು ಏಕಾಗ್ರತೆಯಿಂದ ಓದಿದಲ್ಲಿ ಸಾಧನೆ ಮಾಡಲು ಸಾಧ್ಯ. ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸುವ ಕೆಲಸವಾಗಬೇಕು ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೇಕನಮರಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗುವುದು. ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಕಲಿಕೆಗೆ ಒತ್ತು ನೀಡಲಾಗಿದೆ, ಪಾಲಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದರು.

    ವೈ.ಎಸ್.ಬುಡಗೋಳ, ಸಿಪಿಐ ನಾಗೇಶ ಕಾಡದೇವರಮಠ, ಶಿಕ್ಷಕಿ ಸಾವಿತ್ರಿ ಕುಂಬಾರ, ಉದ್ಯಮಿ ಮಹೇಶ ಬೆಲ್ಲದ ಮಾತನಾಡಿದರು.

    ಎಸ್.ಎಸ್.ಮರ‌್ಯಾಯಿ, ರಾಘವೆಂದ್ರ ಬಡಿಗೇರ, ರಾಜು ಚೌವ್ಹಾಣ, ಶಿವಾನಂದ ಮರ‌್ಯಾಯಿ, ಸಂಗೀತಾ ಮಾದರ, ಎಂ.ಎಸ್.ಈಟಿ, ಉಮೇಶ ಪಾಟೀಲ, ಜ್ಞಾನೇಶ್ವರ ಕುಂಬಾರ, ಶಾಹೀದ್ ಗೌಂಡಿ, ಎಂ.ಬಿ.ಆಲೂರೆ, ಶಿವಪುತ್ರ ಮನಗೂಳಿ, ಬಾಬು ಕಾಳನ್ನವರ, ಮಾರುತು ಮರ‌್ಯಾಯಿ, ಚನ್ನಬಸು ಮನಗೂಳಿ, ಬಾಲಪ್ಪ ಮರ‌್ಯಾಯಿ, ಗಣೇಶ ಮರ‌್ಯಾಯಿ, ಜೋತ್ಯಪ್ಪ ಖಗನ್ನವರ ಇತರರಿದ್ದರು. ಯು.ಬಿ.ಹರಗಾಪುರೆ ಸ್ವಾಗತಿಸಿದರು. ಸಂಗೀತಾ ಗಿರಮಲ್ಲನ್ನವರ ನಿರುಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts