More

    ಎಸ್ಟೇಟ್​ನಲ್ಲಿ ಅವೈಜ್ಞಾನಿಕ ರೋಡ್ ಹಂಪ್, ವಾಹನಗಳ ಚೆಸ್ಸಿಗೆ ಧಕ್ಕೆ

    ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಇಂಡಸ್ಟ್ರೀಯಲ್ ಎಸ್ಟೇಟ್​ನಲ್ಲಿ ನಿರ್ವಿುಸಲಾಗಿರುವ ಕಾಂಕ್ರಿಟ್ ರಸ್ತೆಯೊಂದರಲ್ಲಿ ಕಬ್ಬಿಣದ ಸರಳುಗಳನ್ನು ಬಳಸಿ ರೋಡ್ ಹಂಪ್ ನಿರ್ವಿುಸಿರುವುದು ಸ್ಥಳೀಯ ಉದ್ಯಮಿಗಳ ಅಚ್ಚರಿಗೆ ಕಾರಣವಾಗಿದೆ.

    ಈ ರಸ್ತೆಯಲ್ಲಿ ಅಗತ್ಯವೇ ಇಲ್ಲದ ರೋಡ್ ಹಂಪ್ ಅನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ವಿುಸಿದ್ದಾರೆ. ಎರಡು ರಸ್ತೆಗಳು ಕೂಡುವ ತಿರುವಿನಲ್ಲಿ ಇದನ್ನು ನಿರ್ವಿುಸಲಾಗಿದೆ. ರೋಡ್ ಹಂಪ್ ಎತ್ತರವಾಗಿದೆ. ಅಲ್ಲದೇ ಒಳಗಡೆ ಕಬ್ಬಿಣದ ಸರಳುಗಳನ್ನು ಬಳಸಿ ಅದರ ಮೇಲೆ ಕಾಂಕ್ರಿಟ್ ಹಾಕಿ ಮುಚ್ಚಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಇಂತಹ ರೋಡ್ ಹಂಪ್​ನಿಂದ ಕಾರು, ಇತರ ಸಣ್ಣ ವಾಹನಗಳ ಚೆಸ್ಸಿ ತಾಗಿ ವಾಹನಕ್ಕೆ ಧಕ್ಕೆಯಾಗಲಿದೆ. ಮುಂದಿನ ದಿನಗಳಲ್ಲಿ ಕಾಂಕ್ರಿಟ್ ಸವೆದು ಹೋದರೆ ಕಬ್ಬಿಣದ ಸರಳು ಹೊರಗೆ ಬಂದು ಟೈರ್ ಬ್ಲಾಸ್ಟ್ ಆಗಲಿವೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.

    ಈ ಬಗ್ಗೆ ಸ್ಮಾರ್ಟ್ ಸಿಟಿ ಕಂಪನಿಯನ್ನು ಕೇಳಿದರೆ ರೋಡ್ ವರ್ಕ್ ಮುಗಿದಿದೆ. ಆದರೆ, ರೋಡ್ ಹಂಪ್ ನಾವು ಮಾಡಿಲ್ಲ. ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇಲ್ಲ ಎಂದು ಸ್ಮಾರ್ಟ್ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ ತಿಳಿಸಿದ್ದಾರೆ.

    ಅವಶ್ಯಕತೆ ಇರದ ಜಾಗದಲ್ಲಿ ರೋಡ್ ಹಂಪ್ ನಿರ್ವಿುಸಿರುವುದು ಸರಿಯಲ್ಲ. ಅದು ಕೂಡ ಅವೈಜ್ಞಾನಿಕವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

    ಈ ಬಗ್ಗೆ ಈಗಾಗಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೂ ಪತ್ರ ಬರೆಯಲಾಗುವುದು. ಅನಗತ್ಯವಾಗಿರುವ ರೋಡ್ ಹಂಪ್ ತೆರವಿಗೆ ಮನವಿ ಮಾಡಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts