More

    ಎಲ್ಲ ಕಾಯಿಲೆಗೂ ಔಷಧವೇ ಪರಿಹಾರವಲ್ಲ

    ಸಾಗರ: ಪ್ರಸ್ತುತ ಜಗತ್ತಿನ ಹೆಚ್ಚು ಜನ ಕರೊನಾ ವೈರಸ್ ಹಿನ್ನೆಲೆಯಲ್ಲಿ ವೈದ್ಯರ ಬಳಿ ಓಡುವ ಸ್ಥಿತಿ ನಿರ್ವಣವಾಗಿದೆ. ವೈದ್ಯರಲ್ಲಿಯೇ ನಾರಾಯಣನನ್ನು ಕಾಣುತ್ತಿರುವ ಜನರಿಗೆ ಎಲ್ಲ ಸಂಕಷ್ಟಗಳಿಂದ ರಕ್ಷಿಸುವ ಪರಮೇಶ್ವರನನ್ನು ಪಠಿಸಲು ಸಮಯ ಇಲ್ಲದಂತಾಗಿದೆ ಎಂದು ಡಾ. ಸನತ್ ಕುಮಾರ್ ಮತ್ತೂರು ಹೇಳಿದರು.

    ನಗರದಲ್ಲಿ ರಾಘವೇಶ್ವರ ಸಭಾಭವನ ಸಮಿತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಜೋಶಿ ಫೌಂಡೇಶನ್ ಹಾಗೂ ವಿಪ್ರ ಸಂಘಟನೆಗಳ ಆಶ್ರಯದಲ್ಲಿ ಲೋಕಕಲ್ಯಾಣಾರ್ಥ ಆಯೋಜಿಸಿದ್ದ ಮಹಾರುದ್ರ ಪಾರಾಯಣದಲ್ಲಿ ಮಾತನಾಡಿ, ಅನೇಕ ಸಂದರ್ಭದಲ್ಲಿ ನಮ್ಮ ಅಂತಃಶಕ್ತಿಯ ಪರೀಕ್ಷೆ ನಡೆಯುತ್ತದೆ. ಎಲ್ಲ ಕಾಯಿಲೆಗೂ ಔಷಧವೇ ಪರಿಹಾರವಲ್ಲ. ಧಾರ್ವಿುಕ ಕಾರ್ಯಕ್ರಮ ಏರ್ಪಡಿಸಿ ಸತತವಾಗಿ ರುದ್ರ ಪಾರಾಯಣ ಮಾಡುವುದರಿಂದ ನಮ್ಮ ಸುತ್ತಲೂ ಧಾರ್ವಿುಕ ತರಂಗ ಸೃಷ್ಟಿಯಾಗುತ್ತದೆ. ಈ ತರಂಗದೊಳಗೆ ಯಾವುದೇ ವೈರಾಣು ಪ್ರವೇಶಿಸುವುದಿಲ್ಲ ಎಂದರು.

    ಕರೊನಾ ಸೋಂಕಿನಿಂದ ದೇಶದಲ್ಲಿ ಸಾವಿರಾರು ಜನ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಸಿಕೊಳ್ಳುವ ಜತೆಗೆ ಕುಟುಂಬ ಹಾಗೂ ಸಮೂಹವನ್ನು ರಕ್ಷಿಸಬೇಕಿದೆ. 4 ತಿಂಗಳಿಂದ ಮ.ಸ.ನಂಜುಂಡಸ್ವಾಮಿ ಮತ್ತು ತಂಡದವರು ರುದ್ರ ಪಾರಾಯಣವನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ರುದ್ರ ಪಾರಾಯಣದ ಹಿಂದೆ ಸಮೂಹದ ಒಳಿತಿನ ಚಿಂತನೆಯಿದೆ ಎಂದು ಹೇಳಿದರು.

    ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೈ.ಮೋಹನ್, ಪ್ರಮುಖರಾದ ರಾಜಶ್ರೀ ಸದಾಶಿವ, ಗಜಾನನ ಭಟ್ ರೇವಣಕಟ್ಟಾ, ಬದರೀನಾಥ್, ಹು.ಭಾ.ಅಶೋಕ್, ಪ್ರಕಾಶ್ ಭಟ್, ಛಾಯಾಪತಿ, ಮುರಳೀಧರ ಹತ್ವಾರ್, ಜನಾರ್ದನ್ ಉಡುಪ, ನಾರಾಯಣಮೂರ್ತಿ, ಎಚ್.ಜಿ.ಸುಬ್ರಹ್ಮಣ್ಯ ಭಟ್ ಇದ್ದರು.

    ಕರೊನಾ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ನಾವು ಹೆಚ್ಚು ಜಾಗೃತೆಯಿಂದ ಸಂಬಂಧಗಳನ್ನು ಉಳಿಸಿಕೊಳ್ಳಲು ಯತ್ನಿಸಬೇಕು.

    | ಮ.ಸ.ನಂಜುಂಡಸ್ವಾಮಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪ್ರಧಾನ ವಕ್ತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts