More

    ಎಲ್ಲೆಡೆ ಮೊಳಗಿದ ಶ್ರೀರಾಮ ನಾಮ

    ಶಹಾಬಾದ್: ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳ ಹಾಗೂ ಶ್ರೀರಾಮ ನವಮಿ ಸ್ವಾಗತ ಸಮಿತಿಯಿಂದ ಅದ್ದೂರಿಯಾಗಿ ಶ್ರೀ ರಾಮನ ಮೂರ್ತಿಯ ಮೆರವಣಿಗೆ ಶನಿವಾರ ನಡೆಯಿತು. ಎಲ್ಲೆಡೆ ಕೇಸರಿ ಧ್ವಜಗಳು ರಾರಾಜಿಸದರೆ, ಜಯ ಶ್ರೀರಾಮ ಜಯಘೋಷ ಮೊಳಗಿತು.

    ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕ ಬಸವರಾಜ ಮತ್ತಿಮಡು ಶ್ರೀ ಶರಣಬಸವೇಶ್ವರರು ಹಾಗೂ ರಾಮನ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಸಾರ್ವಜನಿಕರಿಂದ ಸಾಮೂಹಿಕ ಶ್ರೀರಾಮ ತಾರಕ ಮಂತ್ರ ಹಾಗೂ ಹನುಮಾನ ಚಾಲೀಸ್ ಪಠಿಸಲಾಯಿತು. ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ರೈಲು ನಿಲ್ದಾಣ, ಮಸೀದಿ ವೃತ್ತ, ಶಾಸ್ತ್ರಿ ಚೌಕ, ಸುಭಾಷ ಚೌಕ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಭಾರತ ಚೌಕ ಹನುಮಾನ ಮಂದಿರದವರೆಗೂ ನಡೆಯಿತು.

    ಯುವಕರು ಡಿಜೆ ಹಾಡಿಗೆ ಹೆಜ್ಜೆ ಹಾಕಿ, ಜಯಘೋಷ ಕೂಗಿದರು. ಶಾಸಕ ಮತ್ತಿಮಡು ಸೇರಿ ಹಲವರು ಮುಖಂಡರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದರು. ಸ್ಥಳೀಯರು ಸ್ವಯಂಪ್ರೇರಿತವಾಗಿ ಕುಡಿಯುವ ನೀರು, ಪಾನಕ, ಪ್ರಸಾದ ವಿತರಿಸಿದರು.

    ವಿಹಿಂಪ ತಾಲೂಕು ಗೌರವ ಅಧ್ಯಕ್ಷ ಚಂದ್ರಕಾಂತ ಗೊಬ್ಬುರಕರ, ಅಧ್ಯಕ್ಷ ಬಸವರಾಜ ಸಾತಿಹಾಳ, ಬಜರಂಗದಳದ ತಾಲೂಕು ಅಧ್ಯಕ್ಷ ಉದಯಕುಮಾರ ನಂದಾಗೌಳಿ, ಪ್ರಮುಖರಾದ ಗೋವಿಂದ ಕುಸಾಳೆ, ದಿವ್ಯಾ ಹಾಗರಗಿ, ಅಣವೀರ ಇಂಗಿನಶೆಟ್ಟಿ, ನರೇಂದ್ರ ವರ್ಮಾ, ನಾಗರಾಜ ಮೇಲಗಿರಿ, ವಿಶ್ವಾರಾದ್ಯ ಬಿರಾಳ, ಆಕಾಶ ಮತ್ತಿಮಡು, ಗೋರಖನಾಥ ಶಾಖಾಪುರ, ದಿನೇಶ ಗೌಳಿ, ನಿಂಗಣ್ಣ ಹುಳಗೋಳ, ರಾಕೇಶ ಶರ್ಮಾ, ರವಿ ರಾಠೋಡ್, ಅಮೂಲ, ಸಚಿನ್ ಛತ್ರಬಂಧ, ಮಹಾದೇವ ಗೊಬ್ಬುರಕರ್, ಅಜಯ ಬಿದ್ರೆ, ಅಭಿಷೇಕ, ದತ್ತಾ ಫಂಡ್, ಅನೀಲ ಬೊರಗಾಂವಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts