More

    ಬಿವೈಆರ್ ಮೆರವಣಿಗೆ ಸಂಪೂರ್ಣ ಕೇಸರಿ ಮಯ

    ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆಗೂ ಮುನ್ನ ಗುರುವಾರ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಬೆಳಗ್ಗೆ 10.40ರ ವೇಳೆ ಆರಂಭವಾದ ರೋಡ್ ಶೋ ಸಂಪೂರ್ಣ ಕೇಸರಿಮಯವಾಗಿತ್ತು. ಅದರ ನಡುವೆಯೇ ಜೆಡಿಎಸ್ ಬಾವುಟಗಳೂ ರಾರಾಜಿಸಿದವು.

    ತೆರೆದ ವಾಹನದಲ್ಲಿ ಆಗಮಿಸಿದ ನಾಯಕರಿಗೆ ಗಾಂಧಿ ಬಜಾರ್ ಕಟ್ಟಡಗಳ ಮೇಲಿನಿಂದ ಪುಷ್ಪವೃಷ್ಟಿ ಮಾಡಿ ಕಾರ್ಯಕರ್ತರು ಸಂಭ್ರಮಿಸಿದರು. ಎರಡು ತಾಸಿಗೂ ಹೆಚ್ಚು ಕಾಲ ಮೆರವಣಿಗೆ ನಡೆಯಿತು. ಮಾರ್ಗ ಮಧ್ಯೆ ವಾಹನವನ್ನೇರಿದ ಕಾರ್ಯಕರ್ತರು ನಾಯಕರಿಗೆ ಬೃಹತ್ ಹಾರಗಳನ್ನು ಹಾಕಿದರು.
    ವಾಸವಿ ಕಲ್ಯಾಣ ಮಂದಿರದ ಸಮೀಪ ಕ್ರೇನ್ ಮೂಲಕ ಬೃಹತ್ ಹಾರವನ್ನು ಬಿ.ವೈ.ರಾಘವೇಂದ್ರ ಅವರಿಗೆ ಹಾಕಲಾಯಿತು. ಗಾಂಧಿ ಬಸವೇಶ್ವರ ದೇವಸ್ಥಾನದ ಎದುರು ವೀರಶೈವ ಸಮಾಜದ ಮುಖಂಡರು ಗೌರವಿಸಿದರು. ಹಿಂದು ಮಹಾಸಭಾ ಗಣಪತಿ ಮೆರವಣಿಗೆಯಂತೆ ಬಿಜೆಪಿ ಮೆರವಣಿಗೆಯೂ ಬಹಳ ನಿಧಾನವಾಗಿ ಸಾಗಿತು. ಕಾರ್ಯಕರ್ತರನ್ನು ಮುಂದಕ್ಕೆ ಕಳಿಸಲು ಮುಖಂಡರು ಹರಸಾಹಸಪಟ್ಟರು.
    ಮುಗಿಲು ಮುಟ್ಟಿದ ಘೋಷಣೆ:ಜೈ ಜೈ ಶಿವಾಜಿ.. ಅಂಬಾಭವಾನಿ..,ಜಿಂದಾಬಾದ್.. ಜಿಂದಾಬಾದ್.. ಬಿಜೆಪಿ ಜಿಂದಾಬಾದ್.., ಮೋದಿ… ಮೋದಿ.., ಭಾರತ್ ಮಾತಾ ಕೀ ಜೈ.., ಜೈ ಶ್ರೀರಾಮ್.., ಮತ್ತೊಮ್ಮೆ ಮೋದಿ… ಮತ್ತೊಮ್ಮೆ ರಾಘಣ್ಣ.., ರಾಮ ಲಕ್ಷ್ಮಣ ಜಾನಕಿ.., ಜೈ ಬೋಲೋ ಹನುಮಾನ್ ಕೀ, ಕಮಲಕ್ಕೆ ಮತ ದೇಶಕ್ಕೆ ಹಿತ.. ಘೋಷಣೆಗಳು ಮುಗಿಲು ಮುಟ್ಟಿದ್ದವು. ಸುಡುಬಿಸಿಲನ್ನೂ ಲೆಕ್ಕಿಸದೇ ಸಾವಿರಾರು ಕಾರ್ಯಕರ್ತರು ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿ ಬಜಾರ್, ನೆಹರು ರಸ್ತೆ ಮೂಲಕ ಸೀನಪ್ಪ ಶೆಟ್ಟಿ ( ಗೋಪಿ ವೃತ್ತ ) ತಲುಪಿದರು. ಮೆರವಣಿಗೆಯಲ್ಲಿ ತಟ್ಟಿರಾಯ, ಗೊಂಬೆ, ಕರಗ ನೃತ್ಯ, ಚಂಡೆ ವಾದ್ಯ ಗಮನ ಸೆಳೆದವು. ಶಿವಪ್ಪನಾಯಕ ವೃತ್ತದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
    ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಬೈರತಿ ಬಸವರಾಜ, ಸಿ.ಟಿ.ರವಿ, ಕುಮಾರ್ ಬಂಗಾರಪ್ಪ, ಕೆ.ಸಿ.ನಾರಾಯಣ ಗೌಡ, ಹರತಾಳು ಹಾಲಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಕೋಲಾರ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ದರಾಮಣ್ಣ, ಮಾಜಿ ಶಾಸಕ ಬಿ.ಸ್ವಾಮಿರಾವ್, ಪ್ರಮುಖರಾದ ಎಸ್.ದತ್ತಾತ್ರಿ, ಮಾಳವಿಕಾ ಅವಿನಾಶ್, ಅರುಣ್‌ಕುಮಾರ್ ಪುತ್ತಿಲ. ಎಂ.ಡಿ.ಲಕ್ಷ್ಮೀನಾರಾಯಣ ಮೆರವಣಿಗೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts