More

    ಎಲೆಚುಕ್ಕೆ ಮೂಲೋತ್ಪಾಟನೆಗೆ ಸರ್ಕಾರ ಕಟಿಬದ್ಧ; ರೋಗದ ಮೂಲದ ಬಗ್ಗೆ ಸಂಶೋಧನೆ: ಗೃಹ ಸಚಿವ ಆರಗ ಜ್ಞಾನೇಂದ್ರ

    ತೀರ್ಥಹಳ್ಳಿ: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ರೈತರನ್ನು ತಲ್ಲಣಗೊಳಿಸಿರುವ ಅಡಕೆ ಎಲೆಚುಕ್ಕೆ ರೋಗದ ಮೂಲದ ಕುರಿತು ಸಂಶೋಧನೆ ನಡೆಸಿ, ಮಾರಕ ರೋಗದ ಮೂಲೋತ್ಪಾಟನೆ ಮಾಡಲು ಸರ್ಕಾರ ಕಟಿಬದ್ಧವಾಗಿದೆ ಎಂದು ಅಡಕೆ ಕಾರ್ಯಪಡೆ ಅಧ್ಯಕ್ಷ, ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದ ನಿತ್ಯ ಅನ್ನಸಂತರ್ಪಣೆ ಮತ್ತು ಧಾರ್ಮಿಕ ಸೇವಾ ಸಮಿತಿ ಸೋಮವಾರ ಆಯೋಜಿಸಿದ್ದ ಮೃತ್ಯುಂಜಯ ಹೋಮ, ಕೋಟಿ ಶಿವ ಪಂಚಾಕ್ಷರಿ ನಾಮಜಪ ಸಪ್ತಾಹದ ಮಂಗಳ ಹಾಗೂ ನಿತ್ಯ ಅನ್ನಸಂತರ್ಪಣೆ ಕಾರ್ಯದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಎಲೆಚುಕ್ಕೆ ರೋಗದ ಬಗ್ಗೆ ಅಡಕೆ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಒಟ್ಟು 14 ಕೋಟಿ ರೂ. ಬಿಡುಗಡೆ ಮಾಡಿದೆ. ಅಡಕೆ ಬೆಳೆಗೆ ನಿರಂತರವಾಗಿ ಕಾಡುತ್ತಿರುವ ರೋಗದ ಬಗ್ಗೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
    ಈ ರೋಗದ ಪರಿಣಾಮವಾಗಿ ಮಾನಸಿಕವಾಗಿ ಜರ್ಜರಿತಗೊಂಡಿರುವ ರೈತರ ಸಂಕಟವನ್ನು ಭಾವನಾತ್ಮಕವಾಗಿ ದೂರಮಾಡುವ ಸಲುವಾಗಿ ಕಳೆದ ಒಂದು ವಾರದಿಂದ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯ ಈದಿನ ಸಮಾಪ್ತಿಗೊಳ್ಳುತ್ತಿದೆ. ಎಲ್ಲರ ಆತಂಕ ದೂರವಾಗಿ ಸಮಾಜದಲ್ಲಿ ಶಾಂತಿ ನೆಲೆಸುವಂತಾಗಲಿ. ಕರಾವಳಿ ಭಾಗದ ದೇವಾಲಯಗಳ ಮಾದರಿ ಆರಂಭಗೊಂಡಿರುವ ನಿತ್ಯ ಅನ್ನಸಂತರ್ಪಣೆ ಪುರಾತನ ಹಿನ್ನೆಲೆಯ ಈ ಧಾರ್ಮಿಕ ಕೇಂದ್ರ ಇನ್ನೂ ಉಚ್ಚ್ರಾಯ ಸ್ಥಿತಿಗೆ ತಲುಪಲು ಸಹಕಾರಿಯಾಗಲಿದೆ ಎಂದು ಹೇಳಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts