More

    ಉನ್ನತ ಸಾಧನೆಯಿಂದ ದೇಶಕ್ಕೆ ಕೀರ್ತಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಧಾರವಾಡದ ಭಾರತೀಯ ವಿದ್ಯಾಕೇಂದ್ರದ ಜಯದೇವಿತಾಯಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

    ಪಾಲಿಕೆ ಸದಸ್ಯ ಸುರೇಶ ಬೇದ್ರೆ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ಹಾದಿಯಲ್ಲಿ ನಡೆಯುವ ನಿಮಗೆ ಸಮಾಜದ ಜವಾಬ್ದಾರಿಗಳನ್ನು ಅರಿಯುವ ಶಕ್ತಿಯೂ ಇದೆ. ಕಲಿತ ವಿದ್ಯೆಯನ್ನು ಸಮಾಜಕ್ಕೆ ಧಾರೆ ಎರೆಯಬೇಕು ಎಂದರು.

    ಶಾಲೆ ಮುಖ್ಯಸ್ಥ ಎಸ್.ಎಸ್. ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉನ್ನತ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು.

    ಕಾರ್ಯದರ್ಶಿ ಎಸ್.ಎಸ್. ಚಿಕ್ಕಮಠ ಅವರು ಕವನದ ಮೂಲಕ ವಿದ್ಯಾರ್ಥಿನಿಯರು ಸಮಾಜದಲ್ಲಿ ಬದುಕುವ ರೀತಿಯನ್ನು ಮನವರಿಕೆ ಮಾಡಿಕೊಟ್ಟರು.

    ಆಡಳಿತ ಮಂಡಳಿ ಸದಸ್ಯ ಜೆ.ಜಿ. ಸುಬ್ಬಾಪುರಮಠ, ಡಿ.ಜಿ. ದೊಡವಾಡ, ನಿಂಗಪ್ಪ ಕಾಶಪ್ಪನವರ, ಎಂ.ಬಿ. ಬಡಿಗೇರ, ಎಂ.ಎಸ್. ಸಜ್ಜನರ, ಮುಖ್ಯಾಧ್ಯಾಪಕಿ ಎಸ್.ಎಸ್. ಸುರಪುರಮಠ ಉಪಸ್ಥಿತರಿದ್ದರು.

    ಎಚ್.ಡಿ. ತೋಟಿಗೇರ ನಿರೂಪಿಸಿದರು. ಪಿ.ಎಫ್. ಬಾದಾಮಿ ವಂದಿಸಿದರು. ಎಸ್.ಎಸ್. ಚೌಧರಿ, ಎಂ.ಎಸ್. ಹಿರೇಮಠ, ಎ. ಎಚ್. ಮುದರೆಡ್ಡಿ, ವಿ.ವಿ. ಕಿಲ್ಲೆದ, ಡಿ.ಎಂ. ದಲಾಲ್, ಶಿಕ್ಷಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts