More

    ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ತನಿಖೆಯಾಗಲಿ

    ಚನ್ನಮ್ಮ ಕಿತ್ತೂರು, ಬೆಳಗಾವಿ: ಕಿತ್ತೂರು ತಾಲೂಕಿನ ಕಂದಾಯ ಇಲಾಖೆಯಲ್ಲಿ ಭ್ರಷ್ಟಚಾರ ನಡೆದು ಜೈಲು ಸೇರಿರುವ ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ಪ್ರಕರಣ ಹಿಂದಿರುವ ಕಾಣದ ಕೈಗಳ ಆಟ ಹೊರಬೀಳಬೇಕು ಎಂದು ಕಾಂಗ್ರೆಸ್ ಮುಖಂಡ ಬಾಬಾಸಾಹೇಬ್ ಪಾಟೀಲ ಆಗ್ರಹಿಸಿದರು.

    ಪಟ್ಟಣದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅಧಿಕಾರಿಗಳ ಭ್ರಷ್ಟಾಚಾರ ಎಗ್ಗಿಲ್ಲದೆ ಸಾಗಿದೆ. ಯಾವ ಅಧಿಕಾರಿಯೂ ಸರ್ಕಾರದ ಹಿಡಿತದಲ್ಲಿಲ್ಲ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಎಲ್ಲ ಭ್ರಷ್ಟಾಚಾರಗಳ ಮಾಹಿತಿ ಮತ್ತು ದಾಖಲೆಗಳು ನಮ್ಮ ಬಳಿ ಇವೆ. ಕೆಲವೇ ದಿನಗಳಲ್ಲಿ ಎಲ್ಲವನ್ನೂ ಬಿಡುಗಡೆಗೊಳಿಸಿ ಲಂಚಾವತಾರದ ಬಣ್ಣ ಬಯಲು ಮಾಡಲಾಗುವುದು ಎಂದರು. ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಕುಲವಳ್ಳಿ ಗ್ರಾಪಂ ಅಧ್ಯಕ್ಷ ಬಿಷ್ಟಪ್ಪ ಶಿಂಧೆ ಅವರು ಕುಲವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಹಗರಣಗಳನ್ನು ವಿವರಿಸಿದರು. ಒಂದೇ ಮನೆಗೆ ಪ್ರವಾಹ ಪರಿಹಾರ ಹಣವನ್ನು ಒಮ್ಮೆ 95 ಸಾವಿರ ರೂ. ಹಾಗೂ ಎರಡನೇ ಬಾರಿ 50 ಸಾವಿರ ರೂ. ಹೀಗೆ ಎರಡೆರಡು ಸಲ ನೀಡಲಾಗಿದೆ. ಇಷ್ಟರಲ್ಲಿಯೇ ಎಲ್ಲವನ್ನೂ ಮಾಧ್ಯಮಗಳ ಮುಂದೆ ಬಿಚ್ಚಿಡಲಾಗುವುದು ಎಂದು ಹೇಳಿದರು. ಪಪಂ ಸದಸ್ಯ ಕೃಷ್ಣ ಬಾಳೇಕುಂದ್ರಿ, ಬಸವರಾಜ ಸಂಗೊಳ್ಳಿ, ಅನಿಲ ಎಮ್ಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts