More

    ಉದ್ಯಮಕ್ಕಿಲ್ಲ ನೀರು, ವಿದ್ಯುತ್

    ಕಾರವಾರ: ಶಿರವಾಡದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸ್ಥಳೀಯ ಗ್ರಾಪಂ ಅಸಹಕಾರ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಕೈಗಾರಿಕೆಗಳು ಬೆಳೆಯಬೇಕು. ಅದಕ್ಕೆ ಬೇಕಾದ ಸಹಕಾರ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಸ್ಥಳೀಯ ಗ್ರಾಪಂ ಕರ ವಸೂಲಿ ಮಾಡಿದರೂ ಕನಿಷ್ಠ ಮೂಲ ಸೌಕರ್ಯವನ್ನೂ ನೀಡುತ್ತಿಲ್ಲ ಎಂಬುದು ಸ್ಥಳೀಯ ಸಣ್ಣ ಉದ್ಯಮಿಗಳ ಅಸಮಾಧಾನ.

    ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ಶಿರವಾಡದಲ್ಲಿ ಕೈಗಾರಿಕಾ ವಲಯವನ್ನು ಬಹು ವರ್ಷಗಳ ಹಿಂದೇ ನಿರ್ವಿುಸಲಾಗಿದೆ. ಅಲ್ಲಿ 30ರಷ್ಟು ಉದ್ಯಮಗಳಿಗೆ ಪ್ಲಾಟ್ ಹಂಚಿಕೆ ಮಾಡಿದ್ದರೂ ಸದ್ಯ 18 ಮಾತ್ರ ನಡೆಯುತ್ತಿವೆ. ಇನ್ನಷ್ಟು ಬಾಗಿಲು ಮುಚ್ಚಿಕೊಂಡಿವೆ. ಇದ್ದಷ್ಟು ಉದ್ಯಮಗಳಿಗೂ ನೀರು, ವಿದ್ಯುತ್ ಮುಂತಾದವನ್ನು ಸಮರ್ಪಕವಾಗಿ ನೀಡಲು ಗ್ರಾಪಂ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಕೈಗಾರಿಕೋದ್ಯಮಗಳ ಬೇಸರ.

    ಪ್ರತಿ ಸೌಲಭ್ಯಕ್ಕೂ ಹೋರಾಟ: ಕೆಎಸ್​ಎಸ್​ಐಡಿಸಿ ಸರ್ಕಾರದ ಸೂಚನೆಯಂತೆ ಕೈಗಾರಿಕಾ ವಲಯವನ್ನು 2006 ರಲ್ಲಿ ನಿರ್ವಹಣೆಗಾಗಿ ಶಿರವಾಡ ಗ್ರಾಪಂಗೆ ಹಸ್ತಾಂತರಿಸಲು ಪತ್ರ ಬರೆದಿತ್ತು. ಆದರೆ, ಅಲ್ಲಿ ರಸ್ತೆ, ನೀರು, ಮುಂತಾದ ಮೂಲ ಸೌಕರ್ಯ ಮಾಡಿಕೊಡುವಂತೆ ಗ್ರಾಪಂ ಪತ್ರ ಬರೆದ ಹಿನ್ನೆಲೆಯಲ್ಲಿ ಕೆಎಸ್​ಎಸ್​ಐಡಿಸಿ ಸಿಮೆಂಟ್ ರಸ್ತೆ, ನೀರಿನ ಸಂಪರ್ಕದ ಪೈಪ್​ಲೈನ್ ಮುಂತಾದ ಸೌಲಭ್ಯಗಳನ್ನು ಸುಮಾರು 1 ಕೋಟಿ ರೂ.ಗಳಲ್ಲಿ ಮಾಡಿ, 2012 ರಲ್ಲಿ ಹಸ್ತಾಂತರ ಮಾಡಿದೆ. ವಲಯದ ಹಲವು ಉದ್ಯಮಿಗಳು ಗ್ರಾಪಂ ಸೂಚನೆಯಂತೆ ಕರ ಪಾವತಿಸಿ ಇ ಸ್ವತ್ತಿನಡಿ ನೋಂದಣಿಯನ್ನೂ ಮಾಡಿಸಿಕೊಂಡಿದ್ದಾರೆ. ಗ್ರಾಪಂ ನಿಗದಿತ ದರ ಪಟ್ಟಿಯಂತೆ ವರ್ಷವೂ ಕರ ಪಾವತಿಸುತ್ತಿದ್ದೇವೆ ಎಂಬುದು ಉದ್ಯಮಿಗಳ ಅಭಿಮತ.

    ಕೈಗಾರಿಕಾ ವಲಯದಲ್ಲಿ 2019 ರಲ್ಲಿ ನೀರಿಗೆ ಭಾರಿ ಸಮಸ್ಯೆ ಆಯಿತು. ಗ್ರಾಪಂ ನೀರು ಒದಗಿಸಲು ಮುಂದಾಗಿಲ್ಲ. ನಂತರ ಮತ್ತೆ ಕೆಎಸ್​ಎಸ್​ಐಡಿಸಿ ಬಳಿ ಮನವಿ ಮಾಡಿ, ಜಿಲ್ಲಾಧಿಕಾರಿ, ಜಿಪಂ ಸಿಇಒ ಬಳಿ ಹೋಗಿ ಸೌಲಭ್ಯ ಪಡೆಯುವ ಪರಿಸ್ಥಿತಿ ಬಂತು. ಬೀದಿ ದೀಪಗಳಲ್ಲಿ ಹಾಳಾದ ಬಲ್ಬ್​ಗಳನ್ನು ಗ್ರಾಪಂ ರಿಪೇರಿ ಮಾಡುತ್ತಿಲ್ಲ ಹೊಸದನ್ನು ಹಾಕುತ್ತಿಲ್ಲ. ಆದ್ದರಿಂದ ನಾವೇ ಎಲ್ಲರೂ ನಮ್ಮ ಪ್ಲಾಟ್​ಗಳ ಮುಂದೆ ಸ್ವಂತ ಖರ್ಚಿನಿಂದ ಬೀದಿ ದೀಪಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ ಎನ್ನುತ್ತಾರೆ ಉದ್ಯಮಿಗಳು.

    ಸಿಮೆಂಟ್ ರಸ್ತೆ, ನೀರಿನ ಪೈಪ್​ಲೈನ್ ಮುಂತಾದ ಎಲ್ಲ ಸೌಲಭ್ಯಗಳನ್ನೂ ಕೆಎಸ್​ಎಸ್​ಐಡಿಸಿ ಮಾಡಿಕೊಟ್ಟಿದೆ. ಆದರೆ, ಅವುಗಳನ್ನು ನಿರ್ವಹಣೆ ಮಾಡಲು ಗ್ರಾಪಂ ಮುಂದಾಗುತ್ತಿಲ್ಲ. ಎಲ್ಲದಕ್ಕೂ ಜಿಲ್ಲಾಧಿಕಾರಿ, ಜಿಪಂ ಸಿಇಒ ಮುಂತಾದ ಹಿರಿಯ ಅಧಿಕಾರಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಗ್ರಾಪಂ ಅಧಿಕಾರಿಗಳು ಈಗ ಸಿಂಗಲ್ ವಿಂಡೋ ಮೀಟಿಂಗ್​ಗೆ ಬರುವುದನ್ನೇ ಬಿಟ್ಟಿದ್ದಾರೆ. | ಗಂಗಾಧರ ನಾಯ್ಕ ಶಿರವಾಡ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ

    ಕೈಗಾರಿಕಾ ವಲಯಕ್ಕೆ ನಾವು ನೀರೊದಗಿಸುತ್ತಿದ್ದೇವೆ. ಮೊದಲೇ ನಾಲ್ಕು ಬೋರ್​ವೆಲ್​ಗಳಿವೆ. ಹೊಸದೊಂದು ಬೋರ್​ವೆಲ್ ಅನ್ನೂ ಕೆಎಸ್​ಎಸ್​ಐಡಿಸಿ ಕೊರೆಸಿದೆ. ಅದರಿಂದಲೂ ನೀರು ನೀಡುತ್ತಿದ್ದೇವೆ. | ಸಂದೀಪ ಕೊಠಾರಕರ್ ಶಿರವಾಡ ಪಿಡಿಒ

    *

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts