More

    ಉತ್ತಮ ಶಿಕ್ಷಕರು ದೇಶದ ಆಸ್ತಿ

    ಚಿತ್ರದುರ್ಗ: ಪ್ರಶಿಕ್ಷಣಾರ್ಥಿಗಳಿಗೆ ಬಿಇಡಿ ಶಿಕ್ಷಣದೊಂದಿಗೆ ಕೌಶಲದ ಅಗತ್ಯವಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಭಾರ ಕುಲಸಚಿವ ಡಾ.ವೆಂಕಟರಾವ್‌ಪಲಾಟೆ ಹೇಳಿದರು.
    ನಗರದ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಬಿಇಡಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ,‘ವಸಂತೋತ್ಸವ’ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಶಿಕ್ಷಕರು ದೇಶದ ಆಸ್ತಿ. ಬಿಇಡಿ ಪೂರ್ಣಗೊಳಿಸಿದವರಲ್ಲಿ ಆತ್ಮವಿಶ್ವಾಸ ಹೆಚ್ಚಿರಬೇಕು ಎಂದರು.
    ವಿಶ್ವವಿದ್ಯಾನಿಲಯ ನಿಕಾಯ ಶಿಕ್ಷಣ ಮುಖ್ಯಸ್ಥ ಡಾ.ಕೆ.ವೆಂಕಟೇಶ್ ಮಾತನಾಡಿ, ಕರ್ತವ್ಯಕ್ಕೆ ತಲೆಬಾಗಿದರೆ ನೀವುಗಳು ಯಾರಿಗೂ ತಲೆಬಾಗುವುದು ಬೇಡ. ಬಿಇಡಿ ನಂತರ ಉತ್ತಮ ಶಿಕ್ಷಕರಾಗಲು ತರಬೇತಿ ಮುಖ್ಯವಾಗಿದೆ ಎಂದು ತಿಳಿಸಿದರು.
    ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ಎಂ.ಎಸ್.ಪ್ರಸನ್ನಕುಮಾರ್ ಮಾತನಾಡಿದರು. ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಎಚ್.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಶಾರದಮ್ಮ, ಪ್ರಾಚಾರ್ಯರಾದ ಹೇಮಾವತಿ, ಡಾ.ಎ.ಜಿ.ಬಸವರಾಜಪ್ಪ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್, ಸೀಡ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಚ್.ಶ್ರೀನಿವಾಸ್, ಕೆಪಿಎಂ ಗಣೇಶಯ್ಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts