More

    ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸೇವಿಸಿ

    ಹುಲಸೂರು: ಉತ್ತಮ ಆರೋಗ್ಯ ಹೊಂದಬೇಕಾದರೆ ಪೌಷ್ಟಿಕ ಆಹಾರ ಸೇವನೆ ಮಾಡುವುದು ಅವಶ್ಯಕವಾಗಿದೆ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

    ಪಟ್ಟಣದ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಶಕಗಳ ಹಿಂದೆ ಗಭರ್ಿಣಿಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿತ್ತು. ಆದರೆ ಈಗ ಎಲ್ಲೆಡೆ ರಾಸಾಯನಿಕ ಬಳಸುತ್ತಿದ್ದರಿಂದ ಪೌಷ್ಟಿಕ ಆಹಾರ ಸಿಗದಂತಾಗಿದೆ. ಸೇವನೆ ಮಾಡುವ ಆಹಾರ, ನೀರು, ಗಾಳಿ ಶುದ್ಧವಾಗಿರಬೇಕು. ಅಂದಾಗ ಮಾತ್ರ ಯಾವುದೇ ಸಮಸ್ಯೆ ಬರಲು ಸಾಧ್ಯವಿಲ್ಲ ಎಂದರು.

    ಗಭರ್ಿಣಿಯರು ಪೌಷ್ಟಿಕ ಆಹಾರವುಳ್ಳ ತರಕಾರಿ, ಹಣ್ಣು ಮತ್ತು ದ್ವಿದಳ ಧಾನ್ಯ ಹೆಚ್ಚು ಬಳಸುವುದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿರುತ್ತದೆ. ರೋಗಗಳಿಂದ ದೂರವಿರಬಹುದು ಎಂದು ತಿಳಿಸಿದರು.

    ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ ಮಾತನಾಡಿ, ಮಕ್ಕಳ ಬೆಳವಣಿಗೆಗೆ ತಾಯಿ ಹಾಲು ಮಹತ್ವದ್ದಾಗಿರುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ತಾಯಂದಿರು ನಿರ್ಲಕ್ಷೃ ಮಾಡದೆ ಸಂಕೋಚವಿಲ್ಲದೆ ಮಕ್ಕಳಿಗೆ ಹಾಲುಣಿಸಬೇಕು ಎಂದು ಹೇಳಿದರು.

    ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಎಡಿ ಬಸವರಾಜ ಬಡಗೇರ, ಅಂಗನವಾಡಿ ವಲಯ ಮೇಲ್ವಿಚಾರಕಿ ಜ್ಯೋತಿಲಕ್ಷ್ಮೀ ಹಿರೇಮಠ ಮಾತನಾಡಿದರು. ಪಿಡಿಒ ಸಂದೀಪ ಬಿರಾದಾರ್, ಗ್ರಾಪಂ ಸದಸ್ಯೆ ಮಹಾನಂದಾ ಕಾಡಾದಿ, ಪ್ರಮುಖರಾದ ಲೋಕೇಶ ಮಾಳದೆ, ಶಿಲ್ಪಾ ಭೋಪಳೆ, ಸುಹಾಷಿನಿ ನೀಲಂಗೆ, ರಾಜಶ್ರೀ ಸುದರ್ಶನ, ಸುವಣರ್ಾ ವಿಕಾಸ, ದೀಪಿಕಾ ಇತರರಿದ್ದರು. ಆರತಿ ಶಂಕರ ನಿರೂಪಣೆ ಮಾಡಿದರು.

    ಇದಕ್ಕೂ ಮುನ್ನ ಸೀಮಂತ ಕಾರ್ಯಕ್ರಮ ಮತ್ತು ಅನ್ನಪ್ರಾಶನ ನಡೆಯಿತು. ರಂಗೋಲಿಯಿಂದ ಬಿಡಿಸಲಾದ ಗಭರ್ಿಣಿ, ತಾಯಿ ಮತ್ತು ಶಿಶು ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳಿಂದ ಬಿಡಿಸಲಾದ ಚಿತ್ರಗಳು ನೋಡುಗರ ಗಮನ ಸೆಳೆದವು.

    ಕೇಂದ್ರ ಮತ್ತು ರಾಜ್ಯ ಸಕರ್ಾರದ ಆದೇಶದಂತೆ ಪ್ರತಿ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸಾರ್ವಜನಿಕರ ದೂರು ಬರದಂತೆ ಯಶಸ್ವಿಯಾಗಿ ನಡೆಯುತ್ತಿವೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ಪೌಷ್ಟಿಕ ಆಹಾರ ಸೇವನೆಗಾಗಿ ಪ್ರತಿ ಗಭರ್ಿಣಿಗೆ ಮೂರು ಹಂತದಲ್ಲಿ 5 ಸಾವಿರ ರೂ. ನೀಡುತ್ತಿದ್ದು, ಇದರ ಲಾಭ ಪಡೆಯಬೇಕು.
    | ಜ್ಯೋತಿಲಕ್ಷ್ಮೀ ಹಿರೇಮಠ, ಅಂಗನವಾಡಿ ವಲಯ ಮೇಲ್ವಿಚಾರಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts