More

    ಎಂ.ಕೆ.ಹುಬ್ಬಳ್ಳಿಯಲ್ಲೊಬ್ಬ ಮಾದರಿ ನಿವೃತ್ತ ಶಿಕ್ಷಕ

    ಎಂ.ಕೆ.ಹುಬ್ಬಳ್ಳಿ: ಶಿಕ್ಷಕರಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರೂ 78ರ ಇಳಿವಯಸ್ಸಿನಲ್ಲೂ ಮೂರ್ನಾಲ್ಕು ಕಿ.ಮೀ. ಕಾಲ್ನಡಿಗೆ ಮೂಲಕ ಹೋಗಿ ಸೇವೆ ಸಲ್ಲಿಸಿದ್ದ ಶಾಲೆಗೆ ಹೊಸಕಳೆ ನೀಡಿದ್ದಾರೆ ಶಿವಬಸಯ್ಯ ಗಂಗಾಧರಮಠ.

    ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ ನಿವಾಸಿ ನಿವೃತ್ತ ಶಿಕ್ಷಕ ಶಿವಬಸಯ್ಯ ಶಂಕ್ರಯ್ಯ ಗಂಗಾಧರಮಠ ಅವರೇ ಈ ಅಪರೂಪದ ವ್ಯಕ್ತಿ. 78ವರ್ಷ ವಯಸ್ಸಿನ ಶಿವಬಸಯ್ಯ ಅವರು ಸ್ಥಳಿಯ ಕಲ್ಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ 20ವರ್ಷ ಕಳೆದಿದ್ದರೂ ಈಗಲೂ ಇವರ ಕಲಿಕಾ ಸೇವೆ ನಿಂತಿಲ್ಲ. ತಾವು ಸೇವೆ ಸಲ್ಲಿಸಿದ್ದ ಶಾಲೆಗೆ ನಿತ್ಯ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಪಾಠ&ಪ್ರವಚನ ಮಾಡುವ ಇವರು, ಒಳ್ಳೆಯ ಆಚಾರ&ವಿಚಾರದೊಂದಿಗೆ ಉತ್ತಮ ಸಂಸ್ಕಾರ ಕಲಿಸಿ ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸುವ ಕಾಯಕದಲ್ಲಿ ತೊಡಗುವ ಮೂಲಕ ಶಿಕ್ಷಕ ವೃಂದಕ್ಕೆ ಮಾದರಿಯಾಗಿ ಗುರುತಿಸಿಕೊಂಡಿದ್ದಾರೆ.

    ಮಕ್ಕಳೇ ಈ ದೇಶದ ಆಸ್ತಿ ಹಾಗಾಗಿ ಮಕ್ಕಳು ಗುಣಮಟ್ಟದ ಶಿಕ್ಷಣದೊಂದಿಗೆ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡುವ ಇವರು, ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಸಂಜೆ ಮತ್ತು ಬೆಳಗಿನ ವೇಳೆಯಲ್ಲಿ ವಿದ್ಯಾರ್ಥಿಗಳ ಮನೆಗೆ ತೆರಳಿ ನಿತ್ಯದ ಅಭ್ಯಾಸ ಪರಿಶೀಲನೆ ನಡೆಸುತ್ತಾರೆ. ಶಿಕ್ಷಕರಿಗೂ ಸಲಹೆ ನೀಡಿ ಕಲಿಕಾ ಗುಣಮಟ್ಟ ವೃದ್ಧಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹೆಮ್ಮೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

    ನೆರವಿನ ಮೂಲಕ ಪ್ರೋತ್ಸಾಹ: ಮಕ್ಕಳಿಗೆ ಶಿಕ್ಷಣ ನೀಡುವುದಷ್ಟೆ ಅಲ್ಲದೇ ಬಡ ಮತ್ತು ಕಷ್ಟದಲ್ಲಿರುವ ಮಕ್ಕಳ ಕಲಿಕೆಗೆ ಹಣಕಾಸಿನ ನೆರವು ಕಲ್ಪಿಸುತ್ತಿರುವ ಇವರು, ಪ್ರತಿವರ್ಷ ಮಕ್ಕಳಿಗೆ ಕಲಿಕಾ ಸಾಮಗ್ರಿ ಉಚಿತವಾಗಿ ನೀಡುತ್ತಾರೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ ವಚನ ಸ್ಪರ್ಧೆ, ಸಂಗೀತ ಸ್ಪರ್ಧೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಸ್ವಂತ ಖರ್ಚಿನಲ್ಲಿ ಆಯೋಜಿಸುತ್ತಾರೆ. ಪ್ರತಿವರ್ಷ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದಷ್ಟು ಸಹಾಯಹಸ್ತ ಚಾಚುತ್ತ ಬಂದಿದ್ದಾರೆ.

    ಶಾಲೆಗೆ ಹೊಸಕಳೆ: ತಾವು ಸೇವೆ ಸಲ್ಲಿಸಿದ್ದ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದಾಗ ಸ್ವತ@ 50ಸಾವಿರ ರೂ. ಹಣ ನೀಡುವ ಜತೆಗೆ ಶಿಕ್ಷಕರ, ದಾನಿಗಳ ಮತ್ತು ಹಳೇ ವಿದ್ಯಾರ್ಥಿಗಳ ನೆರವಿನೊಂದಿಗೆ ಸುಮಾರು 2 ಲಕ್ಷ ರೂ. ಹಣ ಸೇರಿಸಿ ಹಳೇ ಕಟ್ಟಡದ ದುರಸ್ತಿ ಮಾಡಿಸಿದರು. ಹೊಸ ಕಟ್ಟಡಕ್ಕೂ ಬಣ್ಣ ಹಚ್ಚಿಸಿ ಶಾಲೆಗೆ ಹೊಸ ರಂಗು ತಂದಿದ್ದಾರೆ. ಹಳೇ ವಿದ್ಯಾರ್ಥಿಗಳ ಸಂಟನೆ ಸ್ಥಾಪನೆಯಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಕಾರ್ಯಕ್ಕೆ ಶಿಕ್ಷಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಪ್ರಾಚಾರ್ಯರು, ಶಿಕ್ಷಕರು ಮತ್ತು ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿ, ಸೇವಾ ಕಾರ್ಯದಲ್ಲಿ ತೊಡಗಿರುವ ಅವರಿಗೆ ನಮನ ಸಲ್ಲಿಸಿದ್ದಾರೆ.

    ನಮ್ಮೂರಿನ ಶಿಕ್ಷಣ ಸಂಸ್ಥೆಯ ಮೊದಲ ತಂಡದ ವಿದ್ಯಾರ್ಥಿ ನಾನಾಗಿದ್ದೇನೆ. ಅನ್ನ ನೀಡಿದ ಶಾಲೆಯ ಋಣ ತೀರಿಸಲಾಗದು. ನನ್ನ ಕೈಲಾದಷ್ಟು ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಕಲ್ಪಿಸುವ ಜತೆಗೆ ನಿತ್ಯ ಮಕ್ಕಳಿಗೆ ಪಾಠ ಹೇಳಿಕೊಡುವ ಮೂಲಕ ಖುಷಿ ಪಡುತ್ತೇನೆ. ವಿದ್ಯಾರ್ಥಿಗಳು ಸಾಧನೆ ಶಿಖರ ಏರಬೇಕು ಎಂಬುದು ನನ್ನ ಮಹದಾಸೆ. ಈ ಕಾರ್ಯಕ್ಕೆ ನನ್ನ ಪತ್ನಿ ದಿ.ಗಿರಿಜಾದೇವಿ ಪ್ರೇರಣೆ.
    | ಎಸ್​.ಎಸ್​.ಗಂಗಾಧರಮಠ, ನಿವೃತ್ತ ಶಿಕ್ಷಕ.

    ನಮ್ಮೂರಿನ ಶಿಕ್ಷಣ ಸಂಸ್ಥೆಯ ಮೊದಲ ತಂಡದ ವಿದ್ಯಾರ್ಥಿ ನಾನಾಗಿದ್ದೇನೆ. ಅನ್ನ ನೀಡಿದ ಶಾಲೆಯ ಋಣ ತೀರಿಸಲಾಗದು. ನನ್ನ ಕೈಲಾದಷ್ಟು ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಕಲ್ಪಿಸುವ ಜತೆಗೆ ನಿತ್ಯ ಮಕ್ಕಳಿಗೆ ಪಾಠ ಹೇಳಿಕೊಡುವ ಮೂಲಕ ಖುಷಿ ಪಡುತ್ತೇನೆ. ವಿದ್ಯಾರ್ಥಿಗಳು ಸಾಧನೆ ಶಿಖರ ಏರಬೇಕು ಎಂಬುದು ನನ್ನ ಮಹದಾಸೆ. ಈ ಕಾರ್ಯಕ್ಕೆ ನನ್ನ ಪತ್ನಿ ದಿ.ಗಿರಿಜಾದೇವಿ ಪ್ರೇರಣೆ.
    | ಎಸ್​.ಎಸ್​.ಗಂಗಾಧರಮಠ, ನಿವೃತ್ತ ಶಿಕ್ಷಕ.

    | ಶಿವಾನಂದ ವಿಭೂತಿಮಠ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts