More

    ಇಲಿಜರೋವ್ ಶಸ್ತ್ರಚಿಕಿತ್ಸೆ ಯಶಸ್ವಿ

    ಕಾರವಾರ: ಕಾಲಿನ ಮೂಳೆ ಮುರಿತಕ್ಕೆ ಒಳಗಾದ ಇಬ್ಬರಿಗೆ ಇಲ್ಲಿನ ಕ್ರಿಮ್್ಸ ಆಸ್ಪತ್ರೆಯ ಮೂಳೆ ತಜ್ಞರು ಇಲಿಜರೋವ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.

    ಇಲಿಜರೋವ್ ಎಂಬ ಸರಳುಗಳ ಮಾದರಿಯ ಉಪಕರಣ ಅಳವಡಿಸಿ ಮೂಳೆಗಳನ್ನು ಕೂಡಿಸುವ ವಿಧಾನ ಇದಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮಾತ್ರ ಮಾಡುವ ಈ ಶಸ್ತ್ರ ಚಿಕಿತ್ಸೆಯನ್ನು ಕ್ರಿಮ್್ಸ ಎಲುಬು ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ. ಮಧುಕರ ಕೆ.ಟಿ., ಡಾ.ಶ್ರೀಶ ಟಿ., ಡಾ.ಅರವಿಂದ ಹೆಗಡೆ ಅವರನ್ನು ಒಳಗೊಂಡ ತಂಡವು ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಭಟ್ ಅವರ ಸಹಕಾರದಲ್ಲಿ ಈ ಶಸ್ತ್ರ ಚಿಕಿತ್ಸೆ ಮಾಡಿದೆ. ರೋಗಿಗಳಿಬ್ಬರು ಎರಡೇ ವಾರದಲ್ಲಿ ಚೇತರಿಸಿಕೊಂಡು ನಿಧಾನಕ್ಕೆ ಓಡಾಡುವ ಪರಿಸ್ಥಿತಿ ತಲುಪಿದ್ದಾರೆ. ಕೋವಿಡ್​ನಂಥ ಕ್ಲಿಸ್ಟ ಪರಿಸ್ಥಿತಿಯಲ್ಲಿ ಎಲುಬು ಮತ್ತು ಕೀಲು ವಿಭಾಗದ ಕಾರ್ಯ ಶ್ಲಾಘನೀಯ ಎಂದು ಕ್ರಿಮ್್ಸ ಡೀನ್ ಡಾ. ಗಜಾನನ ನಾಯಕ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts