More

    ಇನ್ನೂ ಪತ್ತೆಯಾಗದ ಚಿರತೆ

    ಬಾಗಲಕೋಟೆ: ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದಲ್ಲಿ ಆಕಳು ಕರು ಬೇಟೆಯಾಡಿರುವ ಚಿರತೆ ಒಂದು ಕಳೆದರೂ ಇನ್ನೂ ಪತ್ತೆ ಆಗಿಲ್ಲ. ಇದರಿಂದ ಜಮೀನುಗಳಿಗೆ ಹೋಗಿ ಬರಲು ರೈತರು ತೀವ್ರ ಭಯಗೊಂಡಿದ್ದಾರೆ.
    ಸುತ್ತಲೂ ಸಾವಿರಾರು ಹೆಕ್ಟರ ಪ್ರದೇಶದಲ್ಲಿ ಕಬ್ಬು ಬೆಳೆ ಬೆಳೆದು ನಿಂತಿದ್ದರಿಂದ ಚಿರತೆ ಪತ್ತೆ ಮಾಡುವುದು ಸಹ ಸುಲಭವಾಗಿಲ್ಲ. ಚಿರತೆ ಬಂದು ಹೋಗಿರುವುದು ನಿಜ ಎಂದು ಅರಣ್ಯ ಇಲಾಖೆ ದೃಢಪಡಿಸಿದೆ. ಕಬ್ಬಿನ ಹೊಲದಲ್ಲಿ ಮೂಡಿರುವ ಹೆಜ್ಜೆ ಗುರುತು ಹಾಗೂ ಆಕಳು ಕರುವನ್ನು ಭೇಟೆಯಾಡಿದ್ದು, ಚಿರತೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ಖಚಿತವಾಗಿದೆ. ಇದರಿಂದ ಗ್ರಾಮದಲ್ಲಿ ಜನರು ಒಂಟಿಯಾಗಿ ಜಮೀನುಗಳಿಗೆ ತೆರಳು ಆತಂಕ ಪಡುತ್ತಿದ್ದಾರೆ. ಬಹುತೇಕ ಜನರು ಹೊಲಗಳಿಗೆ ಹೋಗುವುದನ್ನು ನಿಲ್ಲಿಸಿದ್ದಾರೆ.
    ಈ ಮಧ್ಯ ಎರಡು ದಿನಗಳ ಹಿಂದೆ ಅನಗವಾಡಿ ಬಳಿಯ ಹೆದ್ದಾರಿಯ ಬಳಿ ಅಕ್ಕಿಮರಡಿ ಆಸ್ಪತ್ರೆಯ ಹತ್ತಿರ ಇರುವ ಕೆರೆ ಪಕ್ಕದ ಕಂಪೌಂಡ್ ಬಳಿ ಹಾಯ್ದು ಚಿರತೆ ಕಬ್ಬಿನ ಹೊಲದಲ್ಲಿ ಹೋಗಿದ್ದನ್ನು ನಾನು ಕಾರಿನಲ್ಲಿ ಬರುವ ವೇಳೆ ನೋಡಿದ್ದಾಗಿ ಅಮೀರ ಮುಂಡರಗಿ ಎನ್ನುವವರು ಅರಣ್ಯ ಇಲಾಖೆಯ ಡಿಆರ್
    ಎಫಓ ಅಶೋಕ ರಾಠೋಡ ಅವರಿಗೆ ತಿಳಿಸಿದ್ದಾನೆ. ಹೀಗಾಗಿ ತಮ್ಮರಮಟ್ಟಿ ಮತ್ತು ಅನಗವಾಡಿ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿದೆ ಎನ್ನುವುದು ಅರಣ್ಯ ಸಿಬ್ಬಂದಿಯ ಅನುಮಾನ.
    ಈ ಭಾಗದಲ್ಲಿ ಸಾಕಷ್ಟು ಕುಟುಂಬಗಳು ತೋಟದ ವಸ್ತಿ ಇದ್ದು, ಕಬ್ಬಿನ ಜಮೀನುಗಳಲ್ಲಿ ಚಿರತೆ ಇರಬಹುದು ಎನ್ನುವ ಅನುಮಾನದಿಂದಾಗಿ ರೈತರಲ್ಲಿ ಆತಂಕ ಇನ್ನಷ್ಟು ಹೆಚ್ಚಿಸಿದೆ. ಕಬ್ಬಿಗೆ ನೀರು ಬಿಡಲು ಪಂಪಸೆಟ್ ಶುರು ಮಾಡಲು ನಾಲ್ಕೈದು ಜನರನ್ನು ಸೇರಿಸಿಕೊಂಡು ಹೋಗುವಂತಾಗಿದೆ. ಇಲ್ಲವಾದಲ್ಲಿ ಜಮೀನಿನ ಕಡೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ.
    ಈ ಮಧ್ಯ ಮೂರು ದಿನಗಳಿಂದ ತುಮ್ಮರಮಟ್ಟಿ ಭಾಗದಲ್ಲಿ ಬೀಳಗಿ ವಲಯ ಅರಣ್ಯಾಧಿಕಾರಿ ಎಚ್.ಬಿ.ಡೋಣಿ ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಆಕಳು ಕರು ಬೇಟೆಯಾಡಿರುವ ಸಂತೋಷ ಪಾಟೀಲ ಅವರ ಜಮೀನಿನಲ್ಲೆ ಮೇಕೆ ಮರಿ ಕಟ್ಟಿ ಬೋನ್ ಇಟ್ಟಿದ್ದಾರೆ. ಸುತ್ತಲೂ ಕ್ಯಾಮರಾ ಟ್ರ್ಯಾಪ್ ಅಳವಡಿಸಿದ್ದಾರೆ. ಈಗ ಬೇಟೆಯಾಡಿ ಒಂದು ವಾರ ಆಗಿದ್ದರಿಂದ ಮತ್ತೆ ಬೇಟೆಗೆ ಚಿರತೆ ಇದೇ ಕಡೆ ಬರಬಹುದು ಎನ್ನುವ ಅನುಮಾನದಲ್ಲಿ ಅಲ್ಲಿ ಅರಣ್ಯ ಸಿಬ್ಬಂದಿ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೇ ಬಹುತೇಕ ರೈತರು ತೋಟದ ವಸ್ತಿ ಇರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಎಚ್ಚರಕೆಯಿಂದ ಇರುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ರಾತ್ರಿ ವೇಳೆ ಮನೆಯಿಂದ ಹೊರಗೆ ಬರಬೇಡಿ. ಚಿಕ್ಕಮಕ್ಕಳನ್ನು ಹೊರಗಡೆ ಕಳುಹಿಸದಂತೆ ಜನರಿಗೆ ಸಲಹೆ ನೀಡುತ್ತಿದ್ದಾರೆ.

    ಕೋಟ್…
    ತುಮ್ಮರಮಟ್ಟಿ ಸಂತೋಷ ಪಾಟೀಲ ಅವರ ತೋಟದಲ್ಲಿ ಚಿರತೆ ಬಂದು ಹೋಗಿದೆ ಎನ್ನುವುದು ಹೆಜ್ಜೆ ಗುರುತಿನಿಂಡ ತಿಳಿದು ಬರುತ್ತದೆ. ಅಲ್ಲದೇ ಬೇಟೆಯಾಡಿದ್ದ ಆಕಳು ಕರು ದೇವ ಪರೀಕ್ಷೆಗೆ ಒಳಪಡಿಸಿದ್ದು, ಚಿರತೆ ಹಲ್ಲು ಮೂಡಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಚಿರತೆ ಇರುವುದು ಪಕ್ಕಾ. ಆದರೆ, ಜನರು ಎಚ್ಚರ ವಹಿಸಬೇಕು. ಭಯ ಪಡುವ ಅವಶ್ಯಕತೆ ಇಲ್ಲ. ಚಿರತೆ ಜನರ ಮೇಲೆ ದಾಳಿ ನಡೆಸಲ್ಲ. ರಾತ್ರಿ ವೇಳೆ ಜಮೀನಿನ ಕಡೆಗೆ ಮನೆಯಿಂದ ಆಚೆ ಬರದಂತೆ ಜಾಗೃತಿ ಮೂಡಿಸಲಾಗುತ್ತಿದೆ.
    ಎಚ್.ಬಿ.ಡೋಣಿ
    ವಲಯ ಅರಣ್ಯಾಧಿಕಾರಿ, ಬೀಳಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts