More

    ಕುಂದರಗಿ ತಾಂಡಾದಲ್ಲಿ ಶಾಲೆ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ

    ಬೀಳಗಿ: ರಾಜ್ಯದಲ್ಲಿ ಸರ್ವರಿಗೂ ಸಾಮಾಜಿಕ ನ್ಯಾಯ ಕೊಡುವಲ್ಲಿ ರಾಜ್ಯ ಸರ್ಕಾರ ತನ್ನದೆಯಾದ ಕೊಡುಗೆ ನೀಡುತ್ತಿದೆ. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ.ಪಾಟೀಲ ಹೇಳಿದರು.

    ತಾಲೂಕಿನ ಕುಂದರಗಿ ತಾಂಡಾದಲ್ಲಿ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಸರ್ಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ಕೊಟ್ಟಿದೆ. ಗ್ಯಾರಂಟಿ ಯೋಜನೆ ಪಡೆದ ಲಾನುಭವಿಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅದರ ಋಣ ತೀರಿಸಲಿದ್ದಾರೆ ಎನ್ನುವ ಭರವಸೆ ಇದೆ ಎಂದರು.

    ಅಲ್ಲದೆ ಬೂದಿಹಾಳ ಎಸ್.ಎಚ್. ಕರಿಸಿದ್ಧೇಶ್ವರ ದೇಗುಲಕ್ಕೆ 5 ಲಕ್ಷ ರೂ., ದುರ್ಗಾದೇವಿ ದೇವಸ್ಥಾನಕ್ಕೆ 10 ಲಕ್ಷ ರೂ., ಬಾವಲತ್ತಿ ಲಕ್ಷ್ಮೀದೇವಿ ದೇವಸ್ಥಾನಕ್ಕೆ 5 ಲಕ್ಷ ರೂ., ಕುಂದರಗಿ ಎಸ್‌ಸಿ ಕಾಲನಿಯಲ್ಲಿ 12.50 ಲಕ್ಷ ರೂ. ಗಳಲ್ಲಿ ಮಾದರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ., ಶಿರಗುಂಪಿ ಗ್ರಾಮದ ಮಾರುತೇಶ್ವರ ದೇವಸ್ಥಾನ ಅಭಿವೃದ್ಧಿಗೆ 10 ಲಕ್ಷ ರೂ., ಕಾತರಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣ 13.90 ಲಕ್ಷ ರೂ., ಕೊಪ್ಪ ಎಸ್‌ಕೆ ಗ್ರಾಮದಲ್ಲಿನ ದುರ್ಗಾದೇವಿ ದೇವಸ್ಥಾನಕ್ಕೆ 5 ಲಕ್ಷ ರೂ., ಚಿಕ್ಕಾಲಗುಂಡಿಯಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ಮುಸ್ಲಿಂ ಸಮುದಾಯದ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣ, ಅರಕೇರಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣ ಹಾಗೂ ಪ್ರೌಢ ಶಾಲಾ ಕೊಠಡಿ ನಿರ್ಮಾಣಕ್ಕೆ 30 ಲಕ್ಷ ರೂ., ಕುಂದರಗಿ ಎಲ್‌ಟಿ ತಾಂಡಾ ನಂ.1 ಮತ್ತು 2 ರಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ತಲಾ 13.90 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

    ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪ್ಪಲಿಂಗನ್ನವರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಎಇಇ ಗೋಂವಿದಪ್ಪ ಅರಳಿಕಟ್ಟಿ, ಬಿಇಒ ಎಸ್.ಆದಾಪುರ, ಮಲ್ಲು ಹೊಳಿ, ಎಂ.ಎಸ್.ಕೆಂಪ್ಪಲಿಂಗನ್ನವರ, ಎಚ್.ಎಸ್.ಪಾಟೀಲ, ಮುದಕಪ್ಪ ಮಲ್ಲಾರ, ಜಿ.ಟಿ.ಬೆನಕಟ್ಟಿ, ಹಣಮಂತ ಅಗೋಜಿ, ಬಸನಗೌಡ ಪತ್ತೇನ್ನವರ, ಮುತ್ತು ಲಮಾಣಿ, ಗೋಪಾಲ ಲಮಾಣಿ, ಸದಾಶಿವ ಜುಂಜೂರಿ, ಪರಶುರಾಮ ಮೇಟಿ, ಲಕ್ಷ್ಮಣ ಹುದ್ದಾರ, ಇಂಜಿನಿಯರ್ ರಾಘವೇಂದ್ರ ಮಾಳಗೌಡ, ಚಂದ್ರಕಾಂತ ಸಾವಳಗಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts