More

    ದೇಶದ ಪ್ರಗತಿಗಾಗಿ ತಪ್ಪದೆ ಮತದಾನ ಮಾಡಿ

    ಬೀಳಗಿ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ಎಂಬುದು ನಾಗರಿಕನಿಗೆ ನೀಡಿದ ಮಹತ್ವದ ಹಕ್ಕಾಗಿದೆ. ಆಡಳಿತದ ಆತ್ಮ ಮತದಾನದಲ್ಲಿ ಅಡಗಿದೆ. ನನ್ನ ಮತ ನನ್ನ ಹಕ್ಕು. ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಮತದಾನದ ದಿನದಂದು ದೇಶದ ಪ್ರಗತಿಗಾಗಿ ತಪ್ಪದೆ ಮತದಾನ ಮಾಡಿ ಎಂದು ತಹಸೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು.

    ಬೀಳಗಿ ಪಟ್ಟಣದ ಡಾ. ಬಿ.ಅರ್.ಅಂಬೇಡ್ಕರ್ ವೃತ್ತದಲ್ಲಿ ಚುನಾವಣೆ ಆಯೋಗ, ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಬೀಳಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರದಲ್ಲಿ ಶನಿವಾರ ಹಮ್ಮಿಕೊಂಡ ಮತದಾರರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮೃದ್ಧ, ಸದೃಢ ಹಾಗೂ ಜನಪರ ಸರ್ಕಾರ ರಚನೆ ಆಗಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ನೈತಿಕ ಮತದಾನ ಮಾಡುವ ಅವಶ್ಯಕತೆ ಇದೆ. ಮತದಾರರು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನೀಡುವ ಆಮಿಷಗಳಿಗೆ ಒಳಗಾಗದೆ ತಮಗೆ ಯೋಗ್ಯವೆನಿಸಿದ ಸಮರ್ಥ ಅಭ್ಯರ್ಥಿಗೆ ಮತದಾನ ಮಾಡಬೇಕು. ಕುಟುಂಬ ಸಮೇತ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರೇರೇಪಿಸಬೇಕಿದೆ ಎಂದರು.

    ತಾಲೂಕು ಪಂಚಾಯಿತಿ ಇಒ ಮೌನೇಶ ಬಡಿಗೇರ, ಬಿಇಒ ಎಸ್.ಆರ್.ಆದಾಪೂರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೀನಾಕ್ಷಿ ಕೋಟಿ, ನಿಲಯ ಪಾಲಕ ಗುರುನಾಥ ತಳವಾರ, ಇಲಾಖೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts