More

    ಇಂದು ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿ

    ಚೆನ್ನೈ: ದುರ್ಬಲ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪಡೆ ಕಟ್ಟಿಕೊಂಡು ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-14ರ ತನ್ನ 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಶನಿವಾರ ಎದುರಿಸಲಿದೆ. ಲೀಗ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಎದುರು ಸೋತ ಬಳಿಕ ಕೆಕೆಆರ್ ವಿರುದ್ಧ ಪುಟಿದೇಳುವ ಮೂಲಕ ಮುಂಬೈ ತಂಡ ಗೆಲುವಿನ ಹಳಿಗೇರಿದೆ. ಮತ್ತೊಂದೆಡೆ, ಕೋಲ್ಕತ ನೈಟ್‌ರೈಡರ್ಸ್‌ ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸುಲಭ ಸವಾಲು ಬೆನ್ನಟ್ಟಲಾಗದೆ ಸೋತಿರುವ ಡೇವಿಡ್ ವಾರ್ನರ್ ಪಡೆಗೆ ಲೀಗ್‌ನಲ್ಲಿ ವಿಶ್ವಾಸ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದಿದೆ. ಲೀಗ್‌ನಲ್ಲಿ ಇದುವರೆಗೂ ಬೌಲಿಂಗ್ ಸ್ನೇಹಿಯಾಗಿ ವರ್ತಿಸಿರುವ ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂ ಮೈದಾನದ ಪಿಚ್ ಸ್ಪರ್ಧಾತ್ಮಕ ಹೋರಾಟಕ್ಕೆ ವೇದಿಕೆಯಾಗುತ್ತ ಬಂದಿದೆ.

    ಸನ್‌ರೈಸರ್ಸ್‌ಗೆ ಕೈಕೊಡುತ್ತಿರುವ ಮಧ್ಯಮ ಕ್ರಮಾಂಕ: ಸತತ ಎರಡೂ ಸೋಲು ಕಂಡಿರುವ ಸನ್‌ರೈಸರ್ಸ್‌ ತಂಡಕ್ಕೆ ಹನ್ನೊಂದರ ಬಳಗದ ಆಯ್ಕೆಯೇ ದೊಡ್ಡ ಗೊಂದಲವಾಗಿದೆ. ಇಬ್ಬರು ವಿಕೆಟ್ ಕೀಪರ್‌ಗಳಾದ ವೃದ್ಧಿಮಾನ್ ಸಾಹ ಹಾಗೂ ಜಾನಿ ಬೇರ್‌ಸ್ಟೋ ಜೋಡಿಗೆ ಹಿಂದಿನ 2 ಪಂದ್ಯಗಳಲ್ಲಿ ಅವಕಾಶ ನೀಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. 2008ರ ಆವೃತ್ತಿಯಿಂದಲೂ ಐಪಿಎಲ್ ಭಾಗವಾಗಿರುವ ಸಾಹ, ಪರಿಣಾಮಕಾರಿ ನಿರ್ವಹಣೆ ನೀಡಲು ವಿಲರಾಗುತ್ತಿದ್ದಾರೆ. ಸಾಹ ಅವರನ್ನು ಹೊರಗಿಡಲು ಬಯಸಿದರೆ ಯುವ ಆಟಗಾರರಾದ ಪ್ರಿಯಂ ಗಾರ್ಗ್, ಅಭಿಷೇಕ್ ಶರ್ಮ ಅಲ್ಲದೆ, ಅನುಭವಿ ಕೇದಾರ್ ಜಾಧವ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಅಭಿಷೇಕ್ ಶರ್ಮ ಹಾಗೂ ಕೇದಾರ್ ಜಾಧವ್ ಬೌಲಿಂಗ್‌ಗೂ ಸೈ ಎನಿಸಿಕೊಂಡಿದ್ದಾರೆ. ಹಿಂದಿನ ಎರಡೂ ಸೋಲುಗಳಿಂದ ಪಾಠ ಕಲಿತಿರುವ ವಾರ್ನರ್ ಬಳಗಕ್ಕೆ ಎಚ್ಚರಿಕೆ ನಿರ್ವಹಣೆ ಅಗತ್ಯವಾಗಿದೆ.

    ಆತ್ಮವಿಶ್ವಾಸದಲ್ಲಿ ಮುಂಬೈ: ಆರಂಭಿಕ ಪಂದ್ಯಗಳಲ್ಲಿ ಸೋಲಿನ ಸಂಪ್ರದಾಯವನ್ನು ಕಳೆದ 9 ವರ್ಷದಿಂದ ಮುಂದುವರಿಸಿದ ಬಳಿಕ ಕೆಕೆಆರ್ ಎದುರು ಜಯ ದಾಖಲಿಸಿದ ಮುಂಬೈ ಇಂಡಿಯನ್ಸ್ ತಂಡ ಆತ್ಮವಿಶ್ವಾಸದಲ್ಲಿದೆ. ರೋಹಿತ್ ಶರ್ಮ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶ್ ಒಳಗೊಂಡ ಅಗ್ರಕ್ರಮಾಂಕದ ಬಲಿಷ್ಠವಾಗಿದೆ. ಬೌಲರ್‌ಗಳ ಮ್ಯಾಜಿಕ್‌ನಿಂದ ಕೆಕೆಆರ್ ತಂಡಕ್ಕೆ ಲಗಾಮು ಹಾಕಲು ಯಶಸ್ವಿಯಾಗಿತ್ತು. ಜಸ್‌ಪ್ರಿತ್ ಬುಮ್ರಾ ಟ್ರೆಂಟ್ ಬೌಲ್ಟ್, ರಾಹುಲ್ ಚಹರ್ ಒಳಗೊಂಡ ಬೌಲಿಂಗ್ ಸನ್‌ರೈಸರ್ಸ್‌ಗೆ ಕಡಿವಾಣ ಹಾಕಲು ಸಜ್ಜಾಗಿದೆ.

    ಟೀಮ್ ನ್ಯೂಸ್
    ಸನ್‌ರೈಸರ್ಸ್‌ ಹೈದರಾಬಾದ್: ವೃದ್ಧಿಮಾನ್ ಸಾಹ ಬದಲಿಗೆ ಕೇದಾರ್ ಜಾಧವ್ ಅಥವಾ ಅಭಿಷೇಕ್ ಶರ್ಮ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಕೇನ್ ವಿಲಿಯಮ್ಸನ್ ಫಿಟ್ ಆದರೆ ಜೇಸನ್ ಹೋಲ್ಡರ್ ಬದಲಿಗೆ ವಾಪಸಾಗುವರು. ಭುವನೇಶ್ವರ್ ಕುಮಾರ್ ದುಬಾರಿಯಾಗುತ್ತಿದ್ದು, ಸಂದೀಪ್ ಶರ್ಮ ಅಥವಾ ಸಿದ್ಧಾರ್ಥ್ ಕೌಲ್‌ಗೆ ಅವಕಾಶ ನೀಡಬಹುದು.

    ಕಳೆದ ಪಂದ್ಯ: ಆರ್‌ಸಿಬಿ ಎದುರು 6 ರನ್‌ಗಳಿಂದ ಸೋಲು
    ಮುಂಬೈ ಇಂಡಿಯನ್ಸ್: ಹಿಂದಿನ ಪಂದ್ಯದಲ್ಲಿ ಗೆಲುವಿನ ಹಳಿಗೇರಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ. ಆಡಿದ ಮೊದಲ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ವಿಲರಾದರೂ ಅವರ ಬದಲಾವಣೆ ಕಷ್ಟ. ಹೀಗಾಗಿ ಕ್ರಿಸ್ ಲ್ಯಾನ್ ಹೊರಗುಳಿಯುವುದು ಅನಿವಾರ್ಯ.

    ಕಳೆದ ಪಂದ್ಯ: ಕೆಕೆಆರ್ ವಿರುದ್ಧ 10 ರನ್ ಜಯ

    ಮುಖಾಮುಖಿ: 16, ಸನ್‌ರೈಸರ್ಸ್‌: 8, ಮುಂಬೈ: 8

    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಆರಂಭ: ರಾತ್ರಿ 7.30ಕ್ಕೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts