More

    ನಾಳೆಯಿಂದ ಫಲಪುಷ್ಪ ಪ್ರದರ್ಶನ

    ಶಿವಮೊಗ್ಗ: ಗಾಂಧಿಪಾರ್ಕ್​ನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿರುವ 60ನೇ ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಜ.24ರ ಸಂಜೆ 5ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ.

    ಈ ಬಾರಿ ಅಪರೂಪದ ಹಣ್ಣುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನ, ಹಣ್ಣುಗಳ ಮೇಳ, ಆಹಾರ ಮೇಳ, ಪ್ರಾತ್ಯಕ್ಷಿಕೆ, ಮಳಿಗೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟಿಕೆಗಳ ಅಮ್ಯೂಸ್​ವೆುಂಟ್ ಪಾರ್ಕ್ ಎಲ್ಲವೂ ನಾಗರಿಕರಿಗೆ ಹೊಸ ಲೋಕವನ್ನೇ ತೆರೆದಿಡಲಿವೆ. ವಿವಿಧ ಕಲಾಕೃತಿಗಳ ಪುಷ್ಪಾಲಂಕಾರ, ತರಕಾರಿ ಹಾಗೂ ಹಣ್ಣುಗಳ ಕಲಾತ್ಮಕ ಜೋಡಣೆ, ಹೂಗಳಿಂದ ಅಲಂಕೃತಗೊಂಡ ವಿನ್ಯಾಸಗಳು, ತೋಟಗಾರಿಕಾ ಬೆಳೆಗಳ ಪ್ರದರ್ಶನ, ಸಾವಯವ ವಸ್ತುಗಳ ಪ್ರದರ್ಶನ-ಮಾರಾಟ ಹೀಗೆ ಒಂದೇ ವೇದಿಕೆಯಲ್ಲಿ ನಾವಿನ್ಯತೆ ಅನಾವರಣಗೊಳ್ಳಲಿದೆ.

    ಹೂವಿನಿಂದ ಅಲಂಕೃತಗೊಂಡ ಬಸವಣ್ಣ ಹಾಗೂ ಉಳುವ ರೈತನ ಪ್ರತಿಕೃತಿ, ಸಿರಿಧಾನ್ಯದಲ್ಲಿ ತೋಟಗಾರಿಕೆ ಪಿತಾಮಹ ಡಾ. ಮರಿಗೌಡರ ಪ್ರತಿಕೃತಿ ಈ ಬಾರಿಯ ಆಕರ್ಷಣೆಯಾಗಿದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರುತ್ತದೆ. ಮಕ್ಕಳಿಗೆ 5 ರೂ. ಹಾಗೂ ವಯಸ್ಕರರಿಗೆ 10 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಸಮವಸ್ತ್ರ ಧರಿಸಿ ಶಿಕ್ಷಕರೊಂದಿಗೆ ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts