More

    ಶಾಲಾ ಕೊಠಡಿಗಳೇ ಮಕ್ಕಳ ಮಾರುಕಟ್ಟೆ; ಕುರುಕುಂದ ಗ್ರಾಮದ ಶ್ರೀ ಶರಣಬಸವೇಶ್ವರ ಶಾಲೆಯಲ್ಲಿ ಆಹಾರ ಮೇಳ

    ಸಿಂಧನೂರು: ಕುರುಕುಂದ ಗ್ರಾಮದ ಶ್ರೀ ಶರಣಬಸವೇಶ್ವರ ವಿದ್ಯಾಸಂಸ್ಥೆಯ ಶಾಲಾ ಕೊಠಡಿಗಳಲ್ಲಿ ಭಾನುವಾರ ಆಯೋಜಿಸಿದ್ದ ಆಹಾರ ಮೇಳದಲ್ಲಿ ಮಕ್ಕಳು ತಯಾರಿಸಿದ್ದ ಆಹಾರ ಹಾಗೂ ಮಾರಾಟ ಮೇಳ ಗಮನ ಸೆಳೆಯಿತು.

    ವಿದ್ಯಾರ್ಥಿಗಳು ಸಲಾಡ್, ಪಾನಿಪೂರಿ, ಗೋಬಿರೈಸ್, ದೋಸೆ, ಕೋಸಂಬರಿ, ಪಾನಕ, ಹೋಳಿಗೆ, ಚಿತ್ರಾನ್ನ, ಬಜ್ಜಿ, ಇಡ್ಲಿ, ಬಟಾಟೆ ಚಿಪ್ಸ್, ಫಿಂಗರ್ ಚಿಪ್ಸ್, ಸಮೋಸ, ಮಸಾಲ ರೈಸ್, ಕರಿಬೇವು ರೈಸ್ ತಂದಿದ್ದರು. ಕಲ್ಲಂಗಡಿ, ಪೇರಲ, ದ್ರಾಕ್ಷಿ, ಸಪೋಟಾ, ಸೇಬು, ಮೋಸಂಬಿ, ಬಾಳೆಹಣ್ಣು, ಕಿತ್ತಳ ಸೇರಿ ಇತರ ಪಾನೀಯಗಳನ್ನು ಸಿದ್ಧಪಡಿಸಿಕೊಂಡು ತಂದು ಉತ್ಸಾಹದಿಂದ ಮಾರಾಟ ಮಾಡುತ್ತಿದ್ದ ದೃಶ್ಯ ಪಾಲಕರು ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆ ಕಾರ್ಯದರ್ಶಿ ಬಸವರಾಜ ಸಾಹುಕಾರ ವಕೀಲ, ಆಹಾರ ಮೇಳದಿಂದ ಮಕ್ಕಳಿಗೆ ವ್ಯವಹಾರ ಜ್ಞಾನದೊಂದಿಗೆ, ಅಡುಗೆ ಮಾಡುವ ಪ್ರಾಯೋಗಿಕ ತಿಳಿವಳಿಕೆ ಮೂಡಲಿದೆ. ಈ ಮೂಲಕ ಮನೆಯಲ್ಲಿ ಪಾಲಕರು ಅಡುಗೆ ಮಾಡುವಾಗ ಮಕ್ಕಳಲ್ಲಿ ಸಹಾಯ ಮಾಡುವ ಮನೋಭಾವ ಬೆಳೆಯುತ್ತದೆ. ತರಕಾರಿ ಹಾಗೂ ಅಡುಗೆ ಪದಾರ್ಥಗಳ ಬಗ್ಗೆ ವಿಶೇಷ ಆಸಕ್ತಿ ಮೂಡಲು ಸಹಕಾರಿಯಾಗಲಿದೆ ಎಂದರು.

    ಮುಖ್ಯಶಿಕ್ಷಕ ವಿರುಪನಗೌಡ ಪಾಟೀಲ್ ಚಿರ್ತನಾಳ ಮಾತನಾಡಿ, ಮಕ್ಕಳ ಆಹಾರ ಮೇಳಕ್ಕೆ ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ವರ್ಷ ಮಕ್ಕಳಿಗೆ ಪೋಷಕಾಂಶ ಒದಗಿಸುವ ತಿಂಡಿಗಳ ಆಹಾರಮೇಳ ಆಯೋಜಿಸಲಾಗುವುದು ಎಂದರು. ಸಂಸ್ಥೆಯ ಗೌರವಾಧ್ಯಕ್ಷ ತಿಮ್ಮಣ್ಣ ಸಾಹುಕಾರ, ಅಧ್ಯಕ್ಷ ವಿರುಪಣ್ಣ ಸಾಹುಕಾರ, ಉಪಾಧ್ಯಕ್ಷ ಬಸವರಾಜ ಸಾಹುಕಾರ, ಸದಸ್ಯರಾದ ಮಂಜುನಾಥ ಸಾಹುಕಾರ, ಶರಣಪ್ಪ ಸಾಹುಕಾರ, ತಿಮ್ಮಣ್ಣ ಸಾಹುಕಾರ, ಪಾಲಕರಾದ ಬಂದೇಶಗೌಡ ಬೊಮ್ಮನಾಳ, ಚನ್ನಪ್ಪ ತಿಡಿಗೋಳ, ಅಮರೇಶ ತೆಗ್ಗಿಹಾಳ, ಪಂಪಣ್ಣ ಹಲಗಿ, ಗುಡದಪ್ಪ ಬಾವಿತಾಳ, ವೆಂಕಪ್ಪ ಡಂಕನಕಲ್, ಶಿಕ್ಷಕರಾದ ಲಕ್ಷ್ಮೀದೇವಿ, ಕಂಠೆಪ್ಪ, ಸುವರ್ಣಾ, ಅಂಬುಜಾ ಮಲ್ಲಿಕಾರ್ಜುನ, ಪವಿತ್ರಾ, ಬಂಡೆಮ್ಮ, ಯಲ್ಲಮ್ಮ, ಶೋಭಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts